Monkey Viral Video: ಮೀನುಗಾರನ ದೋಣಿ ಏರಿದ ವಿಚಿತ್ರ ಜೀವಿಯ ವಿಡಿಯೋ ವೈರಲ್ – ನೀಲ ಮುಖದ ಈ ಭೀಕರ ಪ್ರಾಣಿ ಯಾವುದು ಗೊತ್ತೇ ?
Monkey Viral video: ವಿಶಿಷ್ಟ ಜೀವಿಗಳು ಕಡಲ ಕಿನಾರೆಯಲ್ಲಿ ಕಂಡು ಬರುವ ಬಗ್ಗೆ ಈಗಾಗಲೇ ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಅಂತೆಯೇ ಈ ಭೂಮಿಯ ಮೇಲೆ ನಮಗೆ ಗೊತ್ತಿಲ್ಲದಂತಹ ಅನೇಕ ವಿಚಿತ್ರ ಮತ್ತು ವಿಶಿಷ್ಟ ಜೀವಿಗಳು ಅಡಗಿವೆ. ಇತ್ತೀಚಿಗೆ ಇಂತಹದೊಂದು ವಿಚಿತ್ರ ಜೀವಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ( Monkey Viral video) ಆಗಿದೆ. ಹೌದು, ದೋಣಿಯ ಮೇಲೇರಿದ ವಿಚಿತ್ರ ಪ್ರಾಣಿಯನ್ನು ನೋಡಿ ಮೀನುಗಾರನಿಗೆ ವಿಚಿತ್ರ ಮತ್ತು ಭಯಾನಕ ಅನುಭವವಾಗಿದೆ. ಅಷ್ಟಕ್ಕೂ ಆ ಪ್ರಾಣಿ ಯಾವುದು ಎಂದು ವಿಡಿಯೋದಲ್ಲಿ ನೋಡಬಹುದಾಗಿದೆ. ಅದ್ಯಾವ ಪ್ರಾಣಿ ಎಂದು ನೀವು ಗುರುತಿಸಬಲ್ಲಿರಾ ?
https://x.com/TheFigen_/status/1785033570018365894
ಮೀನುಗಾರ ದೋಣಿಯಲ್ಲಿ ನಿಧಾನವಾಗಿ ಪ್ರಯಾಣಿಸುತ್ತಿರುವಾಗ, ನೀರಿನಲ್ಲಿ ಈಜುತ್ತಿರುವ ಪ್ರಾಣಿಯೊಂದು ದೋಣಿ ಹತ್ತಿರ ಹತ್ತಿರ ಬರುತ್ತಲೇ ಆ ಜೀವಿ ದೋಣಿ ಮೇಲೆ ಏರುತ್ತದೆ. ಒಂದು ಕ್ಷಣ ಮೀನುಗಾರ ಭಯಗೊಂಡಿದ್ದ. ಕರಿ ನೀಲಿ ಮುಖ ಮತ್ತು ದೇಹದ ಆ ಜೀವಿ ಬಳಿಕ ದೋಣಿಯ ಮುಂಭಾಗದಲ್ಲಿ ಕುಳಿತುಕೊಳ್ಳುತ್ತದೆ. ಆಗ ಮೀನುಗಾರ ದೋಣಿಯನ್ನು ನದಿಯ ದಡಕ್ಕೆ ಕೊಂಡುಯುತ್ತಾನೆ. ಕೊನೆಗೆ ದೋಣಿ ದಡಕ್ಕೆ ಬಂದಾಗ ಆ ಜೀವಿ ದೋಣಿಯಿಂದ ಹಾರಿ ಇಳಿದು ಕಾಡಿನೊಳಗೆ ಕಣ್ಮರೆಯಾಗಿ ಹೋಗುತ್ತದೆ.
ಇದನ್ನೂ ಓದಿ: Pune: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು, 11 ವರ್ಷದ ಬಾಲಕ ಸಾವು
ಆ ವಿಚಿತ್ರ ಜೀವಿ ಸ್ಪೈಡರ್ ಮಂಕಿ?!
ಮಾಹಿತಿ ಪ್ರಕಾರ ದೋಣಿಯೊಳಗೆ ಏರಿದ ಜೀವಿ ಸ್ಟೈಡರ್ ಮಂಕಿ ಎಂದು ತಿಳಿದುಬಂದಿದೆ. ಸ್ಟೈಡರ್ ಕೋತಿಗಳಲ್ಲಿ ಹಲವು ಪ್ರಭೇದಗಳಿವೆ. ಆದರೆ, ಅವು ಪ್ರಸ್ತುತ ಅಳಿವಿನಂಚಿನಲ್ಲಿವೆ. ಸ್ಪೈಡರ್ ಮಂಗಗಳು ಅಟೆಲಿಸ್ ಎಂಬ ಉಪಕುಟುಂಬದ ಭಾಗವಾಗಿರುವ ಅಟೆಲಿಡೆ ಕುಟುಂಬಕ್ಕೆ ಸೇರಿದ ಅಟೆಲಿಸ್ ಕುಲಕ್ಕೆ ಸೇರಿದ ನ್ಯೂ ವರ್ಲ್ಡ್ ಕೋತಿಗಳಾಗಿವೆ . ಇತರ ಅಟೆಲೈನ್‌ಗಳಂತೆ, ಅವು ದಕ್ಷಿಣ ಅಮೆರಿಕಾದ ಉಷ್ಣವಲಯದ ಕಾಡುಗಳಲ್ಲಿ , ದಕ್ಷಿಣ ಮೆಕ್ಸಿಕೊದಿಂದ ಬ್ರೆಜಿಲ್‌ವರೆಗೆ ಕಂಡುಬರುತ್ತವೆ ಎಂಬ ಮಾಹಿತಿ ಇದೆ. ಇದು ಉದ್ದವಾದ ಬಾಲ ಮತ್ತು ಕೈಕಾಲುಗಳಿಂದಾಗಿ ಈ ಮಂಗಗಳು ವಿಚಿತ್ರವಾಗಿ ಕಾಣುತ್ತವೆ.