Home News HD Devegowda: ಕೂಡಲೇ ಬಂದು ಪೊಲೀಸರ ಮುಂದೆ ಶರಣಾಗುವಂತೆ ಮೊಮ್ಮಗನಿಗೆ ಹೆಚ್​​ಡಿಡಿ ಸೂಚನೆ !

HD Devegowda: ಕೂಡಲೇ ಬಂದು ಪೊಲೀಸರ ಮುಂದೆ ಶರಣಾಗುವಂತೆ ಮೊಮ್ಮಗನಿಗೆ ಹೆಚ್​​ಡಿಡಿ ಸೂಚನೆ !

HD Devegowda

Hindu neighbor gifts plot of land

Hindu neighbour gifts land to Muslim journalist

HD Devegowda: ವಿದೇಶಗಳಲ್ಲಿ ಅಡಗಿಕೊಂಡಿರುವ ಪ್ರಜ್ವಲ್ ರೇವಣ್ಣ (Prajwal Revanna) ಭಾರತದಲ್ಲಿ ಪ್ರತ್ಯಕ್ಷವಾಗುವ ಕ್ಷಣ ಸನ್ಹಿಹಿತವಾಗಿದೆ. ತಮ್ಮ ಅಜ್ಜ ಮಾಜಿ ಪ್ರಧಾನಿ ಜೆಡಿಎಸ್ ಮುಖ್ಯಸ್ಥ ದೇವೇಗೌಡರ ಸೂಚನೆ ಮೇರೆಗೆ ಪ್ರಜ್ವಲ್ ರೇವಣ್ಣ ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ಬರೋ ಸಾಧ್ಯತೆಯಿದೆ.

(Pendrive Case) ಪ್ರಜ್ವಲ್ ರೇವಣ್ಣರವರು ವಿದೇಶದಿಂದ ಬಂದ ಕೂಡಲೇ ಪೊಲೀಸರ ಮುಂದೆ ಶರಣಾಗುವಂತೆ (Prajwal Revanna surrender) ಮೊಮ್ಮಗ ಪ್ರಜ್ವಲ್​ ರೇವಣ್ಣಗೆ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡರು (Former PM HD Devegowda) ಖಡಕ್ ಸೂಚನೆಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ರಾಸಲೀಲೆ ಪ್ರಕರಣದ ಆರೋಪಿಯಾಗಿರುವ ಸಂಸದ ಪ್ರಜ್ವಲ್​​ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾರೆ. ಅವರನ್ನು ಎಸ್​ಐಟಿ (SIT) ವಿಚಾರಣೆಗೆ ಹಾಜರಾಗಲು ವಕೀಲರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಹೆಸರು ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡದ ಗೌಡ ದೇವೇಗೌಡ ಕಾರ್ಯೋನ್ಮುಖರಾಗಿದ್ದಾರೆ. ತಮ್ಮ ಪುತ್ರ ರೇವಣ್ಣನ ಬಂಧನದ ಬೆನ್ನಲ್ಲೇ ಮೊಮ್ಮಗನಿಗೆ ದೇವೇಗೌಡರು ತಕ್ಷಣ ಬಂದು ವಿಚಾರಣೆಗೆ ಹಾಜರಾಗುವಂತೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ದೇವೇಗೌಡರ ಕುಟುಂಬದಲ್ಲಿ ದೇವೇಗೌಡರದು ಅಂತಿಮ ವಾಕ್ಯ. ಅವರ ಮಾತನ್ನು ಮೀರಿ ಹೋಗುವವರಿಲ್ಲ. ಅಂತಹ ದೇವೇಗೌಡರ ಸೂಚನೆ ಮೇರೆಗೆ ನಾಳೆ ಅಥವಾ ನಾಡಿದ್ದು ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರೋ ಸಾಧ್ಯತೆಗಳಿವೆ. ಈ ಪ್ರಕರಣದಿಂದ‌ ಮತ್ತಷ್ಟು ಗೊಂದಲ ಮತ್ತು ಮುಜುಗರ ತಂದುಕೊಳ್ಳದೇ ಶರಣಾಗುವುದು ಸೂಕ್ತ ಎಂದು ದೇವೇಗೌಡರು ಸಲಹೆ ನೀಡಿದ್ದಾರಂತೆ.

ಈಗಾಗಲೇ ರಾಜ್ಯದಲ್ಲಿ ಮತ್ತು ಒಟ್ಟಾರೆ ದೇಶದಲ್ಲಿ ತೀವ್ರ ಪ್ರಮಾಣದಲ್ಲಿ ಪ್ರಜ್ವಲ್‌ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದ್ದು, ಮುಖ್ಯವಾಗಿ ಜೆಡಿಎಸ್ ಪಕ್ಷದ ಶಾಸಕರುಗಳೇ ಅಸಮಾಧಾನ ಹೊರಗೆಡವುತ್ತಿದ್ದಾರೆ. ಈ ಘಟನೆಯಿಂದ ಕುಟುಂಬಕ್ಕೆ ಮತ್ತು ಪಕ್ಷಕ್ಕೆ ಇನ್ನಷ್ಟು ಕುಟುಂಬಕ್ಕೆ ಮತ್ತಷ್ಟು ಡ್ಯಾಮೇಜ್ ಆಗುವುದು ಬೇಡ. ಕೂಡಲೇ ಹೊರಟು ಬಂದು ಪೊಲೀಸರಿಗೆ ಶರಣಾಗಬೇಕು. ವಿಚಾರಣೆಗೆ ಹಾಜರಾಗಿ ಕಾನೂನು ಹೋರಾಟ ನಡೆಸುವಂತೆ ದೇವೇಗೌಡರು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೀಗ ಬಂದಿದೆ.

ಇದನ್ನೂ ಓದಿ: Mangalore: ಕರ್ತವ್ಯಕ್ಕೆ ಹಾಜರಾದ ಕೆಲವೇ ಗಂಟೆಗಳಲ್ಲಿ ಮತ್ತೆ ಸಸ್ಪೆಂಡ್ ಆದ ಅಧಿಕಾರಿ !