Karnataka Rain: ರಾಜ್ಯದ ಈ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್ !

Karnataka Rain: ಕಳೆದ ಎರಡು ದಿನಗಳಿಂದ ರಾಜ್ಯದ ಹಲವಡೆ ಉಷ್ಣಾಂಶ ಇರುತ್ತದೆ ಈ ಮಧ್ಯೆ ಅಲ್ಲಲ್ಲಿ ಮಳೆ ಹನಿ ಬಿದ್ದ ಘಟನೆಗಳು ವರದಿಯಾಗಿವೆ. ಕೆಲವೆಡೆ ಮಾತ್ರ ಸಣ್ಣ ಪ್ರಮಾಣದ ಮಳೆಯಾಗಿದೆ. ಅದನ್ನು ಬಿಟ್ಟರೆ ಬಹುತೇಕ ಜಿಲ್ಲೆಗಳಲ್ಲಿ ಬಿರುಬಿಸಿಲಿನ ವಾತಾವರಣವೇ. ಇದರ ನಡುವೆ ಇನ್ನೂ ಕೆಲವೇ ಹೊತ್ತಿನಲ್ಲಿ ಈ ಜಿಲ್ಲೆಗಳಿಗೆ ಮಳೆರಾಯ ತಂಪೆರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

ಬಿಸಿಲಿನ ಬೆಂದಿದ್ದ ರಾಜ್ಯ ರಾಜಧಾನಿ ಕಳೆದ ಎರಡು ದಿನಗಳಿಂದ ಸಂಜೆ ಹೊತ್ತಿಗೆ ಮಳೆರಾಯ ಕೃಪೆಯಿಂದ ತಂಪಾಗಿದೆ. ಇನ್ನು ನಿನ್ನೆ (ಮೇ 03) ನಗರದಲ್ಲಿ ಮಧ್ಯಾಹ್ನದ ವೇಳೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಬಂದಿದೆ. ಅರ್ಧ ಗಂಟೆ ಭರಪೂರ ಮಳೆ ಸುರಿದಿದೆ.

ಅಷ್ಟೇ ಅಲ್ಲದೆ, ಇನ್ನೂ ಕೆಲವೇ ಹೊತ್ತಿನಲ್ಲಿ ಗಡಿಜಿಲ್ಲೆ ಚಾಮರಾಜನಗರ, ಕೋಲಾರ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಮಳೆರಾಯ ಕಾಲಿಡಲಿದ್ದಾನೆ ಎಂದು ಬೆಂಗಳೂರು ಹವಾಮಾನ ಕಚೇರಿ ತನ್ನ ಅಧಿಕೃತ ಟ್ವೀಟ್‌ ಮೂಲಕ ಮಾಹಿತಿ ರವಾನಿಸಿದೆ. ಇನ್ನು ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ 5 ದಿನ ರೆಡ್ ಅಲರ್ಟ್ ನೀಡಿದೆ.


ರೆಡ್ ಅಲರ್ಟ್ ಪಡೆದ ಆಯಾ ಜಿಲ್ಲೆಗಳು:
ಹಲವೆಡೆ ಮಳೆಯಾದರೂ ರಾಜ್ಯದಲ್ಲಿ ಬಿಸಿಲಿನ ತಾಪ ಏರಿಕೆಯಾಗುತ್ತಲೇ ಇದ್ದು, ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುಂದಿನ 5 ದಿನಗಳ ಕಾಲ ರೆಡ್ ಅಲರ್ಟ್ ಸಂದೇಶ ನೀಡಿದೆ. ಧಾರವಾಡ, ಬಾಗಲಕೋಟೆ, ಗದಗ, ಬೆಳಗಾವಿ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜತೆಗೆ ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಕಲಬುರ್ಗಿ, ಚಿತ್ರದುರ್ಗ ಮತ್ತು ಯಾದಗಿರಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ.

ಮೊನ್ನೆಯ ಬೆಂಗಳೂರಿನ ಸುರಿದ ಭಾರಿ ಮಳೆಗೆ ಓರ್ವ ಮಹಿಳೆ ಹಾಗೂ 45 ಕ್ಕೂ ಹೆಚ್ಚು ಕುರಿಗಳು ಆಸು ನೀಡಿದ ಘಟನೆ ಹೊಸಕೋಟೆ ಜಿಲ್ಲೆಯ ಕಣಗಲು ಗ್ರಾಮದಲ್ಲಿ ನಡೆದಿದೆ. ಮಹಿಳೆ ಕುರಿಗಳ ಜತೆ ಬೇವಿನ ಮರದಡಿ ಆಶ್ರಯ ಪಡೆದ ಸಂದರ್ಭ ಹಠ ಟಾಕೀಸ್ ವಿಡಿಯೋ ಬಡಿದು ಮಹಿಳೆಯರ ಜೊತೆ ಕುರಿಗಳು ಸಾವನ್ನಪ್ಪಿದ್ದವು. ಮೃತ ರತ್ನಮ್ಮ ಕುಟುಂಬಕ್ಕೆ ಜಿಲ್ಲಾಡಳಿತ 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಇದನ್ನೂ ಓದಿ: Mangalore: ಮಂಗಳೂರು ಅರ್ಚಕ ಆತ್ಮಹತ್ಯೆ: ದೇವಸ್ಥಾನದ ಬಾಗಿಲು ತೆರೆಯದ ಹಿನ್ನೆಲೆ ಹುಡುಕಾಡಿದಾಗ ಘಟನೆ ಬೆಳಕಿಗೆ !

Leave A Reply

Your email address will not be published.