Hyderabad: ರೋಹಿತ್ ವೇಮುಲ ದಲಿತನೇ ಅಲ್ಲ ಎಂಬ ಶಾಕಿಂಗ್ ಸತ್ಯ: ಆತ್ಮಹತ್ಯೆಗೆ ಇದೇ ಕಾರಣ ಎಂದ ಪೊಲೀಸರ ಅಂತಿಮ ವರದಿ !

 

Hyderabad: ಆಂಧ್ರ ಪ್ರದೇಶದ ಹೈದ್ರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿನ ಕಾರಣ ಕೊನೆಗೂ ಪತ್ತೆಯಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಹೈದ್ರಾಬಾದ್ ಪೊಲೀಸರು ಹೈಕೋರ್ಟ್ ಗೆ ಅಂತಿಮ ವರದಿ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಆತ ದಲಿತನೇ ಅಲ್ಲ. ತನ್ನ ನಿಜವಾದ ಜಾತಿಯ ಗುರುತು ಪತ್ತೆಯಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಕೋರ್ಟಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Prajwal Revanna: ಗನ್ ತೋರಿಸಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಮೇಲೆ 3 ವರ್ಷ ಪ್ರಜ್ವಲ್ ನಿಂದ ಅತ್ಯಾಚಾರ – ದೂರು ದಾಖಲು !!

ದಲಿತ ಎನ್ನಲಾಗಿದ್ದು ರೋಹಿತ್ ವೇಮುಲ ಪ್ರಕರಣದ ತನಿಖೆ ನಡೆಸಿದ ಸೈಬರಾಬಾದ್ ಪೊಲೀಸರು, ರೋಹಿತ್ ವೇಮುಲ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 2016ರಲ್ಲಿ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದರು ಮತ್ತು ಆಗ ಮೋದಿ ಆಡಳಿತದ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ದೋಷಾರೋಪಣೆ ಮಾಡಿತ್ತು.

ಇದನ್ನೂ ಓದಿ: Belagavi: ನೇಹಾ ಹಿರೇಮಠ್ ಅಪ್ಪ-ಅಮ್ಮನಿಂದ ಕಾಂಗ್ರೆಸ್ ಪರ ಮತಯಾಚನೆ !!

“ರೋಹಿತ್ ವೇಮುಲಗೆ ತಾನು ಪರಿಶಿಷ್ಟ ಜಾತಿಗೆ ಸೇರಿದವನಲ್ಲ ಎಂಬುದು ಗೊತಿತ್ತು. ಆದರೆ ತನ್ನ ತಾಯಿ ತನಗೆ ಪರಿಶಿಷ್ಟ ಜಾತಿ ಸರ್ಟಿಫಿಕೇಟ್‌ ಮಾಡಿಸಿ ಕೊಟ್ಟಿರುವುದು ಆತನಲ್ಲಿ ಭಯವನ್ನು ಹುಟ್ಟಿಸಿತ್ತು. ತನ್ನ ನಿಜವಾದ ಜಾತಿಯ ಬಗ್ಗೆ ತನ್ನ ಸಹಪಾಠಿಗಳಿಗೆ ಗೊತ್ತಾದರೆ ತನ್ನ ಮರ್ಯಾದೆ ಹಾಳಾಗುತ್ತದೆ ಎಂಬ ಭಯ ಆತನನ್ನು ಕಾಡಿತ್ತು. ಅಲ್ಲದೇ ಆತ ಓದಿನಲ್ಲಿಯೂ ವೇಮುಲ ಹಿಂದೆ ಬಿದಿದ್ದ. ಜತೆಗೆ, ಮೃತನಿಗೆ ಇನ್ನೂ ಹಲವಾರು ಸಮಸ್ಯೆಗಳಿದ್ದವು, ಇದೆಲ್ಲವೂ ಸೇರಿ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿವೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

 

 

8 ವರ್ಷಗಳ ಹಿಂದೆ, ಅಂದರೆ 2016ರ ಜನವರಿ 17 ರಂದು ರೋಹಿತ್ ವೇಮುಲ ಮೃತಪಟ್ಟಾಗ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಗುರಿ ಮಾಡಿತ್ತು. ಮುಖ್ಯವಾಗಿ ಸಚಿವೆ ಸ್ಕೃತಿ ಇರಾನಿ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆದರೆ ಈಗ ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿರೋ0p0ದು ವಿಶೇಷ.

Leave A Reply

Your email address will not be published.