Crime: ಯುವಕನಿಂದ ಯುವತಿ ಅಪಹರಣ ಆರೋಪ: ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ

Crime. ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಹುಡುಗನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಿಗ್ಗಾಮುಗ್ಗ ಥಳಿಸಿದ ಘಟನೆ ತಾಲೂಕಿನ ಅರೇಮಲ್ಲಾಪುರದಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Belthangady: ಫಲಿಸದ ಪ್ರಯತ್ನ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ನಂದಕುಮಾರ್ ವಿಧಿವಶ !
ಹನುಮವ್ವ ದುರಗಪ್ಪ ಮೆಡ್ಲೆರಿ (50) ಹಲ್ಲೆಗೊಳಗಾದ ಮಹಿಳೆ. ಮಹಿಳೆಯ ಪುತ್ರ ಮಂಜುನಾಥ ಗ್ರಾಮದ ಭರಮಪ್ಪ ಗಂಗಪ್ಪ ತೆಲಗಿ ಎಂಬುವವರ ಮಗಳನ್ನು ಎರಡು ವರ್ಷದಿಂದ ಪ್ರೀತಿಸುತ್ತಿದ್ದನು. ಏ.30ರಂದು ತಮ್ಮ ಮಗಳು ಕಾಣೆಯಾಗಿದ್ದರಿಂದ ಅವಳನ್ನು ಮಂಜುನಾಥನೇ ಅಪಹರಿಸಿದ್ದಾನೆ ಎಂದು ಆರೋಪಿಸಿ ಯುವತಿಯ ಸಂಬಂಧಿಕರಾದ ಚಂದ್ರಪ್ಪ ಗಂಗಪ್ಪ ತೆಲಗಿ, ಬಸಪ್ಪ ಗಂಗಪ್ಪತೆಲಗಿ, ಗುತ್ತೆವ್ವ ಉಜ್ಜಪ್ಪತೆಲಗಿ ಸೇರಿಕೊಂಡು ಯುವಕನ ಮನೆಗೆ ನುಗ್ಗಿ ಆಕೆಯ ತಾಯಿಯನ್ನು ಮನೆಯಿಂದ ಹೊರಗೆ ಎಳೆದುತಂದು ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ: Prajwal Revanna Case: ಗನ್ ಪಾಯಿಂಟಲ್ಲೇ ಎಲ್ಲಾ ಕೃತ್ಯ – ಅಶ್ಲೀಲ ವೀಡಿಯೋ ಕುರಿತು ಸಂತ್ರಸ್ತೆ ಆರೋಪ
ನಂತರ ಗಾಯಾಳು ಮಹಿಳೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಹಲ್ಲೆಗೊಳಗಾದ ಮಹಿಳೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯುವತಿಯ ತಾಯಿ ಚಂದ್ರಮ್ಮ ಭರಮಪ್ಪ ತೆಲಗಿ ಮೇ 1ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಯುವಕ ಮಂಜಪ್ಪ ಹಾಗೂ ಆತನ ಸಹಚರ ತುಮ್ಮಿನಕಟ್ಟಿ ಗ್ರಾಮದ ಬಸವರಾಜ ತುಮ್ಮಿನಕಟ್ಟಿ ಸೇರಿಕೊಂಡು ಏ.30ರಂದು ನಮ್ಮ ಮನೆ ಬಳಿ ಕಾರು ನಿಲ್ಲಿಸಿ ಮಗಳನ್ನು ಪುಸಲಾಯಿಸಿ ಬಂಗಾರದ ಸರ ಹಾಗೂ 2 ಲಕ್ಷ ರೂ.ಗಳೊಂದಿಗೆ ಆಕೆಯನ್ನು ಬಲವಂತದಿಂದ ಕರೆದುಕೊಂಡು ಹೊರಟಿದ್ದರು. ಆಗ ನಾನು, ನನ್ನ ಪತಿ ಹಾಗೂ ಮಕ್ಕಳು ಅವರನ್ನು ತಡೆಯಲು ಮುಂದಾದಾಗ ನಮ್ಮ ಮೇಲೆ ಹಲ್ಲೆ ಮಾಡಿ ಪರಾರಿಯಾದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯ ಕುರಿತು ಯುವಕನ ತಾಯಿ ಹನುಮವ್ವಳ ಜತೆ ರಾಜಿ ಪಂಚಾಯಿತಿ ಮಾಡಿ ಆಕೆಗೆ ತಮ್ಮ ಮಗಳನ್ನು ವಾಪಸ್ ಕರೆದುಕೊಂಡು ಬರುವಂತೆ ತಿಳಿಸಲಾಯಿತು. ಅದಕ್ಕೆ ಸಮ್ಮತಿಸಿದ ಬೆಳುತ್ತಿರುವಾಗ ಹನುಮವ್ವ ತನ್ನ ಮನೆಗೆ ತೆರಳುತ್ತಿರುವಾಗ ಹನುಮವ್ವಳ ಸಂಬಂಧಿಕರು ನನ್ನ ಪತಿ ಭರಮಪ್ಪ ಮೇಲೆ ಹಲ್ಲೆ ನಡೆಸಿದ್ದಲ್ಲದೆ ನನ್ನ ವಸ್ತ್ರ ಹರಿದು ಅವಮಾನಿಸಿದ್ದಾರೆ ಎಂದು ಯುವತಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.