Dakshina Kannada: ಚಾಲಕನ ನಿಯಂತ್ರಣ ತಪ್ಪಿದ ಕಾರು; ಹೋಟೆಲ್‌ಗೆ ಡಿಕ್ಕಿ, ಕಾರಿನಲ್ಲಿದ್ದ ದಂಪತಿಗೆ ಗಾಯ

Share the Article

Dakshina Kannada: ಪುತ್ತೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿದೆ. ಕಾರಿನಲ್ಲಿದ್ದ ದಂಪತಿಗೆ ಗಂಭೀರ ಗಾಯವಾಗಿದ್ದು, ಇವರನ್ನು ಸುಳ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Mumbai: ಮೊಬೈಲ್‌ ಬೆಳಕಿನಲ್ಲಿ ಸಿಸೇರಿಯನ್‌ ಹೆರಿಗೆ ಮಾಡಿದ ವೈದ್ಯರು-ತಾಯಿ, ಮಗು ಸಾವು

ಮೇ.3 (ಶುಕ್ರವಾರ) ರಂದು ಸಂಪಾಜೆ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: HD Revanna: ಹೆಚ್‌ಡಿ ರೇವಣ್ಣ ಮನೆ ಮೇಲೆ SIT ದಾಳಿ

ವಿಟ್ಲದ ಅಡ್ಯನಡ್ಕದ ದಂಪತಿಗಳು ಕಾರಿನಲ್ಲಿ ಮಡಿಕೇರಿ ಕಡೆಗೆ ಹೋಗುವ ವೇಳೆ ಸಂಪಾಜೆಯ ಹೈವೇ ಹೋಟೆಲ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, ಕಾರು ಹೊಟೇಲಿನ ಮುಂಭಾಗದ ಗೋಡೆಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಕಾರು ಚಾಲಕ ಹಾಗು ಅವರ ಪತ್ನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಅವರನ್ನು ಆಂಬುಲೆನ್ಸ್‌ ಮೂಲಕ ಸುಳ್ಯದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Leave A Reply