Windfall Tax: ಕಚ್ಚಾ ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ ಕೇಂದ್ರ ಸರಕಾರ

Share the Article

Windfall Tax: ಕಚ್ಚಾ ತೈಲದ ಮೇಲಿನ ವಿಂಡ್ ಫಾಲ್ ಟ್ಯಾಕ್ಸ್ ದರಗಳನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಸರ್ಕಾರ ಬುಧವಾರದಿಂದ ಪ್ರತಿ ಟನ್ ಗೆ 8400 ರೂ ಆಗಿದೆ. ಈ ಹಿಂದೆ ಪ್ರತಿ ಟನ್‌ಗೆ 9600 ರೂಪಾಯಿ ಇದ್ದು, 8400 ರೂಪಾಯಿಗೆ ಇಳಿಕೆಯಾಗಿದೆ. ಈ ತೆರಿಗೆಯನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ರೂಪದಲ್ಲಿ ವಿಧಿಸಲಾಗುತ್ತದೆ. ಹೊಸ ದರಗಳು ಮೇ 1 ರಿಂದ ಅಂದರೆ ಇಂದಿನಿಂದ ಜಾರಿಗೆ ಬಂದಿವೆ.

ಇದನ್ನೂ ಓದಿ:  Job Alert: ಬೆಂಗಳೂರಿನಲ್ಲಿ ಲೈಬ್ರರಿ ಟ್ರೈನಿಯಲ್ಲಿ ಉದ್ಯೋಗವಕಾಶ! ಒಳ್ಳೇ ಸ್ಯಾಲರಿ ಕೂಡ ಕೊಡ್ತಾರೆ

ಅಧಿಕೃತ ಅಧಿಸೂಚನೆಯ ಪ್ರಕಾರ, ಡೀಸೆಲ್, ಪೆಟ್ರೋಲ್ ಮತ್ತು ವಾಯುಯಾನ ಇಂಧನ ಅಥವಾ ATF ರಫ್ತಿನ ಮೇಲೆ SAED ಅನ್ನು ಶೂನ್ಯದಲ್ಲಿ ನಿರ್ವಹಿಸಲಾಗಿದೆ.

ಇದನ್ನೂ ಓದಿ:  World Tallest Building: ಬುರ್ಜ್ ಖಲೀಫಾಕ್ಕಿಂತ ಎತ್ತರದ ಕಟ್ಟಡ ಎಲ್ಲಿದೆ ಗೊತ್ತೇ? ಇದರ ಎತ್ತರ ನಿಮ್ಮನ್ನು ಖಂಡಿತ ಬೆರಗಾಗಿಸುತ್ತೆ

ಭಾರತವು ಜುಲೈ 1, 2022 ರಂದು ಮೊದಲ ಬಾರಿಗೆ ವಿಂಡ್‌ಫಾಲ್ ಲಾಭದ ಮೇಲೆ ತೆರಿಗೆಯನ್ನು ವಿಧಿಸಿದೆ. ಇದರೊಂದಿಗೆ ಇಂಧನ ಕಂಪನಿಗಳ ಅಸಾಧಾರಣ ಲಾಭದ ಮೇಲೆ ತೆರಿಗೆ ವಿಧಿಸುವ ದೇಶಗಳಿಗೆ ಅದು ಸೇರಿಕೊಂಡಿತು. ಕಳೆದ ಎರಡು ವಾರಗಳ ಸರಾಸರಿ ತೈಲ ಬೆಲೆಗಳ ಆಧಾರದ ಮೇಲೆ ಪ್ರತಿ ಹದಿನೈದು ದಿನಗಳಿಗೊಮ್ಮೆ ತೆರಿಗೆ ದರವನ್ನು ಪರಿಶೀಲಿಸಲಾಗುತ್ತದೆ.

Leave A Reply