Prajwal Revanna Case: ಪ್ರಜ್ವಲ್ ರೇವಣ್ಣನ ವಿಡಿಯೋ ಲೀಕ್ ಮಾಡಿದ್ಯಾರು ?!

Prajwal Revanna Case: ಹಾಸನ ಸಂಸದ ಎನ್‌ಡಿಎ(NDA) ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ(Prajwal Revanna)ಅಶ್ಲೀಲ ವಿಡಿಯೋ ಪ್ರಕರಣ ಇದೀಗ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ದೇಶದ ಅತಿ ದೊಡ್ಡ ಲೈಂಗಿಕ ಹಗರಣ ಎಂದೆಲ್ಲಾ ಬಿಂಬಿಸಲಾಗುತ್ತಿದೆ. ಆದರೀಗ ಈ ವಿಡಿಯೋ ಲೀಕ್ ಮಾಡಿದ್ಯಾರು ಎಂಬ ಚರ್ಚೆ ಮುನ್ನಲೆಗೆ ಬಂದಿದೆ !! ಹಾಗಿದ್ರೆ ಯಾರು ಇದನ್ನು ಲೀಕ್ ಮಾಡಿದ್ದು?

 

ಇದನ್ನೂ ಓದಿ:  PM Modi: ಪ್ರಧಾನಿ ಮೋದಿ ಕನ್ನಡಿಗರನ್ನು ‘ಪಾಪಿ’ಗಳು ಎಂದರೇ? ವೈರಲ್ ವಿಡಿಯೋದಲ್ಲಿ ಇರೋದೇನು?

ಹೌದು, ಪ್ರಜ್ವಲ್ ಕೇಸ್ ತನಿಖೆಗೆ ಎಸ್ಐಟಿ(SIT) ತಂಡ ರಚನೆಯಾಗಿದ್ದು ತನಿಖೆ ಆರಂಭಗೊಂಡಿದೆ. ಮಹಿಳಾ ಆಯೋಗ ಕೂಡ ಈ ಘಟನೆ ಖಂಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಇದರ ನುಡುವೆ ಈ ವಿಡಿಯೋಗಳು ಹೊರಬಂದಿದ್ದು ಹೇಗೆ? ಇತ್ತ ಹೆಚ್‌ಡಿ ಕುಮಾರಸ್ವಾಮಿ(HnD Kumarswamy) ಕೂಡ ಈ ವಿಡಿಯೋ ರಿಲೀಸ್ ಹಿಂದೆ ಮಹಾನ್ ನಾಯಕನ ಕೈವಾಡವಿದೆ ಎಂದಿದ್ದಾರೆ. ಮಹಾನ್ ನಾಯಕ ಎಂದರೆ ಡಿ ಕೆ ಶಿವಕುಮಾರ್ ಎನ್ನಲಾಗಿದೆ.

ಇತ್ತ ಹಾಸನ ಸಂಸದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ ವಿಡಿಯೋ ಲೀಕ್ ಮಾಡಿದ್ದು‌ ಅವರ ಮೈತ್ರಿಕೂಟದವರೇ, ಅಂದರೆ ಬಿಜೆಪಿಯವರೇ ಎಂದು ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ(Nayana Motamma) ಹೇಳಿದ್ದಾರೆ.

ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಮಾತನಾಡಿ ನಾನು ಬಿಜೆಪಿ ಮುಖಂಡ ದೇವರಾಜೆಗೌಡಗೆ ಬಿಟ್ಟು ಬೇರೆ ಯಾರಿಗೂ ಪೆನ್‌ಡ್ರೈವ್‌ ನೀಡಿಲ್ಲ. ರೇವಣ್ಣ, ಪ್ರಜ್ವಲ್‌ ಜೊತೆ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ದೌರ್ಜನ್ಯ ನಡೆಸಿ, ನನ್ನ ಜಮೀನು ಬರೆಸಿಕೊಂಡಿದ್ರು, ನನ್ನ ಹೆಂಡತಿ ಮೇಲೆ ಹಲ್ಲೆ ಮಾಡಿದ್ದರು. ಹಾಗಾಗಿ ನಾನು ಕೆಲಸ ಬಿಟ್ಟಿದ್ದೆ. ಅವರ ವಿರುದ್ಧ ಕೇಸ್‌ ಹಾಕಿ ಹೋರಾಟಕ್ಕೆ ಸಿದ್ಧನಾಗಿದ್ದೆ ಎಂದು ಹಾಸನದಲ್ಲಿ ಕಾರ್ತಿಕ್‌ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

Leave A Reply

Your email address will not be published.