Uppinangady: ಉಪ್ಪಿನಂಗಡಿ ತಾಯಿ ಮಗು ನಾಪತ್ತೆ; ಕೇಸು ದಾಖಲು

Uppinangady: ಕೌಕ್ರಡಿ ಗ್ರಾಮದ ಕಟ್ಟೆ ಮಜಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸೋನು ಸೋಂಕರ್‌ ಅವರ ಪತ್ನಿ ರೀಮಾ ಸೋಂಕರ್‌ (26) ಮತ್ತು ಮಗು ರಿಯಾ (1) ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ.

 

ಇದನ್ನೂ ಓದಿ:  Karnataka Weather: ದಕ್ಷಿಣ ಒಳನಾಡಿನಲ್ಲಿ ಮಳೆ ಸಂಭವ; ಉಳಿದೆಲ್ಲ ಕಡೆ ರಣಬಿಸಿಲು

ಇಂಟಿರೀಯರ್‌ ಡೆಕೊರೇಟರ್‌ ಆಗಿರುವ ಸೋನು ಸೋಂಕರ್‌ ಇವರು ಉತ್ತರ ಪ್ರದೇಶದ ನಿವಾಸಿ ಕೌಕ್ರಡಿಯಲ್ಲಿ ಕೃಷ್ಣಪ್ಪ ಎಂಬುವವರ ಬಾಡಿಗೆ ಮನೆಯಲ್ಲಿ ತನ್ನ ಸಂಸಾರದೊಂದಿಗೆ ವಾಸ ಮಾಡುತ್ತಿದ್ದರು.

ಇದನ್ನೂ ಓದಿ:  Prajwal Revanna: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಕುರಿತು ಪೂನಂ ಕೌರ್ ಸೆನ್ಸೆಷನಲ್ ವಿಡಿಯೋ : ಕೈ ಮುಗಿತೀನಿ ಅವನನ್ನು ಮಾತ್ರ ಬಿಡಬೇಡಿ

ಎ.22 ರಂದು ಬೆಳಗ್ಗೆ ಕೆಲಸಕ್ಕೆಂದು ಹೋಗಿದ್ದು, ನಂತರ ಸಂಜೆ ಮರಳಿ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿ ಪತ್ನಿ, ಮಗು ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.