Prajwal Revanna: ಪ್ರಜ್ವಲ್ ರೇವಣ್ಣ ವಿಡಿಯೋ ಲೀಕ್ ಹಿಂದೆ ಎಚ್ ಡಿ ಕುಮಾರಸ್ವಾಮಿ ಕೈವಾಡ ?! ಡಿಕೆ ಸುರೇಶ್ ಆರೋಪ

Share the Article

Prajwal Revanna: ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಎಲ್ಲಿ ನೋಡಿದರೂ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ನದ್ದೇ ಸುದ್ದಿ. ರಾಜಕಾರಣಿಗಳು ಮಾತ್ರವಲ್ಲ ಸಿನಿ ನಟಿಯರೂ ಕೂಡ ಪ್ರಜ್ವಲ್ ವಿರುದ್ಧ ಕಿಡಿಕಾರುತ್ತಿದ್ದಾರೆ. ದೇಶದ ಅತೀ ದೊಡ್ಡ ಲೈಂಗಿಕ ಹಗರಣ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಜೊತೆಗೆ ಈ ವಿಡಿಯೋ ಲೀಕ್ ಆಗಿದ್ಧು ಹೇಗೆ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಆದರೀಗ ಈ ಬೆನ್ನಲ್ಲೇ ಅಚ್ಚರಿ ಎಂಬಂತೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್(D K Suresh) ಕುಮಾರಸ್ವಾಮಿ(H D Kumarswamy) ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:  Astro Tips: ನೀಲಿ ಬಣ್ಣದ ಕಲ್ಲು ಧರಿಸಿದರೆ ಎಲ್ಲಾ ಸಮಸ್ಯೆಗಳು ಮಾಯ! ಇಲ್ಲಿದೆ ಆಸ್ಟ್ರೋ ಟಿಪ್ಸ್

ಹೌದು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ದಿನಕ್ಕೊಂದು ತಿರುವು ದೊರೆಯುತ್ತಿದೆ. ಈ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದು ಭಾರೀ ಸಂಚಲನ ಸೃಷ್ಟಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು ಈ ಕೇಸ್ ಬಗ್ಗೆ ಹಾಸನ ಜಿಲ್ಲೆಯಲ್ಲಿ ಮೊದಲೇ ಗುಸುಗುಸು ಇತ್ತು. ಹಾಗೆಂದು ವೀಡಿಯೋ ನೋಡಿದವರು ಯಾರೂ ಇರಲಿಲ್ಲ. ನ್ಯಾಯಾಲಯದ ತಡೆಯಾಜ್ಞೆ ತಂದಾಗ ಅದು ಖಚಿತ ಆಗಿದೆ. ಪೆನ್ಡ್ರೈವ್ ಬಿಡುಗಡೆಯಾದಾಗ ಬಹಿರಂಗವಾಗಿ ಚರ್ಚೆ ಆಗಿದೆ. ಈ ವಿಡಿಯೋ ಹಿಂದೆ ಹಾಸನ ಜಿಲ್ಲಾ ನಾಯಕರ ಕೈವಾಡ ಇದೆ. ಜೊತೆಗೆ ಕುಮಾರಸ್ವಾಮಿ ಕೈವಾಡ ಕೂಡ ಇದೆ ಎಂದು ಅವರು ಆರೋಪಿಸಿದ್ದಾರೆ.

Leave A Reply