UGC-NET: ಯುಜಿಸಿ-ನೆಟ್ ಪರೀಕ್ಷೆ ಜೂ.18 ಕ್ಕೆ

UGC – NET: ಜೂನ್ 16ಕ್ಕೆ ನಡೆಯಬೇಕಿದ್ದ ಯುಜಿಸಿ ‘ರಾಷ್ಟ್ರೀಯ ಅರ್ಹತಾ ಪರೀಕ್ಷೆ’ಯನ್ನು (ನೆಟ್) ಜೂನ್ 18ಕ್ಕೆ ನಡೆಸುವುದಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗ ಹೇಳಿದೆ. ಲೋಕಸೇವಾ ಆಯೋಗವು ಕೇಂದ್ರ ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯ ದಿನವೇ ‘ನೆಟ್’ ಪರೀಕ್ಷೆಯೂ ನಿಗದಿಯಾಗಿದ್ದರಿಂದ, ಸಂಘರ್ಷ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ:  KCET-2024 ಉತ್ತರ ಕೀಗಳನ್ನು ಪ್ರಕಟ, ಆಕ್ಷೇಪಣೆ ಸಲ್ಲಿಸಲು ಮೇ 7 ಕೊನೆಯ ದಿನಾಂಕ !

ಎರಡೂ ಪರೀಕ್ಷೆಗಳು ಒಂದೇ ದಿನಾಂಕದಂದು ನಿಗದಿಯಾಗಿರುವ ಬಗ್ಗೆ ಅಭ್ಯರ್ಥಿಗಳಿಂದ ಬಂದ ಅಭಿಪ್ರಾಯಗಳನ್ನು ಆಧರಿಸಿ ‘ನೆಟ್’ ಪರೀಕ್ಷೆಯನ್ನುಎರಡು ದಿನ ಮುಂದೂಡಲಾಗಿದೆ. ಜೂ.18ರ ಭಾನುವಾರದಂದು ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ:  Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು

Leave A Reply

Your email address will not be published.