Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು

Patanjali: ಸುಪ್ರೀಂ ಕೋರ್ಟ್ ಚಾಟಿ ಬೆನ್ನಿಗೆ ಉತ್ತರಾಖಂಡ ಸರಕಾರ ಸಹ ಪತಂಜಲಿ ಆಯುರ್ವೇದ ಸಂಸ್ಥೆಯ ಉತ್ಪನ್ನಗಳ ಮೇಲೆ ಗದಾ ಪ್ರಹಾರ ನಡೆಸಿದೆ. ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಉತ್ಪಾದಿಸುವ 14 ಆಯುರ್ವೇದ ಉತ್ಪನ್ನಗಳಿಗೆ ನೀಡಲಾಗಿದ್ದ ಮಾರಾಟ ಪರವಾನಗಿಯನ್ನು ಉತ್ತರಾಖಂಡ ಸರಕಾರ ಸೋಮವಾರ ರದ್ದುಗೊಳಿಸಿದೆ.

ಇದನ್ನೂ ಓದಿ:  IPL-2024Virat kohli: ಹೊರಗಿನಿಂದ ಟೀಕೆ ಮಾಡುವುದು ಸುಲಭ : ಸ್ಟ್ರೈಕ್‌ರೇಟ್ ಕಾಮೆಂಟ್‌ಗಳಿಗೆ ಕೆಂಡದಂತಾದ ವಿರಾಟ್ ಕೊಹ್ಲಿ

ದೃಷ್ಟಿ ಐ ಡ್ರಾಪ್ಸ್, ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವ‌ರ್, ಲಿವಾಮೃತ್ ಅಡ್ವಾನ್ಸ್ ಲಿವೋಗ್ರಿಟ್ ಸೇರಿದಂತೆ 14 ಉತ್ಪನ್ನಗಳಿಗೆ ನೀಡಲಾಗಿದ್ದ ಮಾರಾಟ ಪರವಾನಗಿ ರದ್ದುಗೊಳಿಸಲಾಗಿದೆ. ಡ್ರಗ್ಸ್‌ ಆ್ಯಂಡ್ ಮ್ಯಾಜಿಕ್ ರೆಮಿಡಿಸ್ ಕಾಯಿದೆ ಉಲ್ಲಂಘಿಸಿದ ಆರೋಪದ ಮೇಲೆ ಪತಂಜಲಿ ಮುಖ್ಯಸ್ಥ ಬಾಬಾ ರಾಮದೇವ್ ಹಾಗೂ ಸಿಇಒ ಆಚಾರ್ಯ ಬಾಲಕೃಷ್ಣ ವಿರುದ್ಧ ಸಿಎಂ ಪುಷ್ಕರ್ ಸಿಂಗ್ ಧಾಮಿ ಸರಕಾರ ಕ್ರಿಮಿನಲ್ ಕೇಸ್ ದಾಖಲಿಸಿದೆ.

ಇದನ್ನೂ ಓದಿ:  KCET-2024 ಉತ್ತರ ಕೀಗಳನ್ನು ಪ್ರಕಟ, ಆಕ್ಷೇಪಣೆ ಸಲ್ಲಿಸಲು ಮೇ 7 ಕೊನೆಯ ದಿನಾಂಕ !

Leave A Reply

Your email address will not be published.