KCET 2024 : ಸಿಇಟಿ ಕೀ ಉತ್ತರಗಳನ್ನು ನೋಡುವುದು ಮತ್ತು ಅದರ ಮೇಲೆ ಆಕ್ಷೇಪಣೆ ಸಲ್ಲಿಸುವುದು ಹೇಗೆ? ಇಲ್ಲಿದೆ ವಿಧಾನ !

 

KCET 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿರುವ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸಲು ಇಂದು ಅಂದರೆ ಮೇ 30 ರ ಬೆಳಿಗ್ಗೆ 11 ಗಂಟೆಯಿಂದ ಆಕ್ಷೇಪಣೆಗೆ ಅವಕಾಶವಿದೆ.

ಇದನ್ನೂ ಓದಿ:  Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು

ಯುಜಿಸಿಇಟಿ-2024ನೇ ಪ್ರವೇಶ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA), ಬಿಡುಗಡೆ ಮಾಡಿದೆ. ಈ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ:  UGC-NET: ಯುಜಿಸಿ-ನೆಟ್ ಪರೀಕ್ಷೆ ಜೂ.18 ಕ್ಕೆ

ಉತ್ತರ ಕೀಗಳನ್ನು ಚೆಕ್ ಮಾಡಲು ಪರೀಕ್ಷೆ ಬರೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2024 ಉತ್ತರ ಕೀಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲಿ ಇತ್ತೀಚಿನ ಪ್ರಕಟಣೆಗಳು ಅಡಿಯಲ್ಲಿ ಆಯಾ ವಿಷಯದ ಕೀ ಉತ್ತರಗಳನ್ನು ನೀಡಲಾಗಿದೆ.

ಸಿಇಟಿಗೆ ಬರೆದಿರುವ ಅಭ್ಯರ್ಥಿಗಳು ಗಮನಿಸಬೇಕು: ಈಗ ಕೊಟ್ಟಿರುವುದು ತಾತ್ಕಾಲಿಕ ಕೀ ಉತ್ತರಗಳು. ಈ ತಾತ್ಕಾಲಿಕ ಉತ್ತರ ಕೀಗಳನ್ನು ಡೌನ್‌ಲೋಡ್ ಮಾಡಿಕೊಂಡು, ಪರಿಶೀಲಿಸಿ ಮತ್ತು ಯಾವುದಾದರು ಉತ್ತರಗಳ ಮೇಲೆ ಆಕ್ಷೇಪಣೆಗಳಿದ್ದರೆ, ಆಕ್ಷೇಪಣೆ ಸಲ್ಲಿಸಲು ಇದೀಗ ಕೆಇಎ ಅವಕಾಶವನ್ನು ನೀಡಿದೆ.

ಕೆಇಎ ಪ್ರಕಟಿಸಿರುವ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸಲು ಮೇ 7 ರ ಬೆಳಿಗ್ಗೆ 11 ಗಂಟೆಯವರಗೆ ಅವಕಾಶವಿದೆ.

ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ವಿಷಯ, ವರ್ಷನ್ ಕೋಡ್, ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಸಂಖ್ಯೆಗಳ ವಿವರಗಳೊಂದಿಗೆ ಹಾಗೂ ಇದನ್ನು ಸಾಬೀತು ಪಡಿಸಲು ಅಗತ್ಯವಾಗಿರುವ ಮಾಹಿತಿಯನ್ನು ಪಿಡಿಎಫ್‌ ರೂಪದಲ್ಲಿ ಸಲ್ಲಿಸಬಹುದಾಗಿದೆ. ಆದರೆ ಸರಿಯಾದ ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದೇ ಅಥವಾ ಆಧಾರ ರಹಿತ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

Leave A Reply

Your email address will not be published.