Prajwal Revanna: 16 ರಿಂದ 50 ವರ್ಷದ ಸುಮಾರು 300 ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ !! ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

Prajwal Revanna: ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಭಯಾನಕ ಸತ್ಯಗಳು ಬಯಲಾಗುತ್ತಿವೆ. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi hebbalkar) ಅವರು ಸ್ಪೋಟಕ ಸತ್ಯ ಹೊರಹಾಕಿದ್ದು ಪ್ರಜ್ವಲ್ ರೇವಣ್ಣ(Prajwal Revanna) ಅಧಿಕಾರ ದುರುಪಯೋಗ ಮಾಡಿಕೊಂಡು 16ರಿಂದ 50 ವರ್ಷ ವಯಸ್ಸಿನ ‌300ಕ್ಕೂ ಅಧಿಕ ಮಹಿಳೆಯರ ಮೇಲೆ ನೀಚ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Ramayan Movie Sai Pallavi: ಸೀತೆಯಾಗಿ ಸಾಯಿ ಪಲ್ಲವಿ ಎಷ್ಟು ಮುದ್ದಾಗಿ ಕಾಣ್ತಾರೆ ನೋಡಿ : ರಾಮಾಯಣ ಸೆಟ್ ನಿಂದ ಫೋಟೋಗಳು ವೈರಲ್

ಬೆಳಗಾವಿಯಲ್ಲಿ(Belgavi) ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆ ಇದು. ಇದು ದೇಶದಲ್ಲೇ ಅತೀ ದೊಡ್ಡ ಅತ್ಯಾಚಾರ ಹಗರಣ. ಪ್ರಜ್ವಲ ರೇವಣ್ಣ ಸಂಸದರಾಗಿದ್ದು, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಧಿಕಾರ ದರ್ಪ, ಆಸೆ ಆಮೀಷ ತೋರಿಸಿ ನೂರಾರು ಮಹಿಳೆಯರನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:  Job Alert: ಕೆಲಸ ಹುಡುಕಿ ಹುಡುಕಿ ಸಾಕ್ ಆಯ್ತಾ? ಹಾಗಾದ್ರೆ ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್

ಅಲ್ಲದೆ ವಿಡಿಯೋ ನೋಡಿದ್ರೆ ಮಹಿಳೆಯರ ಜೀವಂತ ಕೊಲೆ ಆಗಿದೆ ಅನಿಸುತ್ತದೆ. ವಿಡಿಯೋ ಶೇರ್ ಮಾಡಲು ಹೋಗಬೇಡಿ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದು ಮನವಿ ಮಾಡಿದ್ದಾರೆ. ಜೊತೆಗೆ ನಮ್ಮ ಇಲಾಖೆಯೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇಂಟರ್ ಪೋಲ್ ಬಳಸಿ ಆರೋಪಿ ಪ್ರಜ್ವಲ್‌ನನ್ನು ಅರೆಸ್ಟ್ ಮಾಡಿ ಎಂದು ಕೇಂದ್ರಕ್ಕೆ ಹೆಬ್ಬಾಳ್ಕರ್ ಆಗ್ರಹ ಮಾಡಿದ್ದಾರೆ. ಜೊತೆಗೆ ಮೋದಿ ಸೇರಿ ಅನೇಕ ಬಿಜೆಪಿ(BJP) ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Leave A Reply

Your email address will not be published.