Karnataka Weather: ರಾಜ್ಯದಲ್ಲಿ 4,5 ದಿನ ಬಿಸಿ ಗಾಳಿ; ಹವಾಮಾನ ಇಲಾಖೆ ಎಚ್ಚರಿಕೆ

Karnataka Weather: ರಾಜ್ಯದಲ್ಲಿ 4-5 ದಿನ ಒಣಹವೆ ಇರಲಿದ್ದು, ಕೆಲವು ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:  Supreme Court Dowry Case: ಗಂಡಸರೇ ಎಚ್ಚರಿಕೆ : ನಿಮ್ಮ ಹೆಂಡತಿಯ ವರದಕ್ಷಿಣೆ ಹಣದಲ್ಲಿ ನಿಮಗೆ ಯಾವುದೇ ಹಕ್ಕಿರುವುದಿಲ್ಲ : ಸುಪ್ರೀಂ ಕೋರ್ಟ್

ಎ. 29 ರಿಂದ ಮೇ 2ರವರೆಗೆ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲ ಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮ ಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಸಿ ಅಲೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:  WhatsApp Meta: ಬಲವಂತ ಮಾಡಿದರೆ ಭಾರತ ಬಿಟ್ಟು ಹೋಗುತ್ತೇವೆ : ಸರ್ಕಾರದ ವಿರುದ್ಧ ಗುಟುರು ಹಾಕಿದ ವಾಟ್ಸಾಪ್ ಸಂಸ್ಥೆ

ಬಿಸಿ ಗಾಳಿಯಿಂದ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ದೀರ್ಘಾವಧಿ ಯವರೆಗೆ ಸೂರ್ಯನಿಗೆ ಒಡ್ಡಿಕೊಳ್ಳುವ ಅಥವಾ ಭಾರವಾದ ಕೆಲಸ ಮಾಡುವ ಜನರಲ್ಲಿ ಹೆಚ್ಚಿನ ತಾಪಮಾನ ಮತ್ತು ಶಾಖದ ಕಾಯಿಲೆಯ ಲಕ್ಷಣಗಳು ಹೆಚ್ಚುವ ಸಂಭವವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಲ್ಲದೆ, ಶಿಶುಗಳು, ಮಕ್ಕಳು, ವೃದ್ಧರು, ದೀರ್ಘಕಾಲದ ಕಾಯಿಲೆ ಇರುವಂತಹ ದುರ್ಬಲ ಜನರು ಹೆಚ್ಚಿನ ಆರೋಗ್ಯ ಕಾಳಜಿ ವಹಿಸುವಂತೆಯೂ ಸಲಹೆ ನೀಡಿದೆ.

Leave A Reply

Your email address will not be published.