H D Revanna: ಮಗನ ಪೆನ್‌ಡ್ರೈವ್ ಪ್ರಕರಣ – ಎಚ್ ಡಿ ರೇವಣ್ಣ ಫಸ್ಟ್ ರಿಯಾಕ್ಷನ್ !!

H D Revanna: ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಸತ್ಯಾಸತ್ಯತೆ ತಿಳಿಯುವ ಮೊದಲೇ ರಾಜಕೀಯ ರೂಪ ಪಡೆದುಕೊಂಡು ಕೆಸರೆರೆಚಾಟ ಪ್ರಾರಂಭವಾಗಿದೆ. ಸರ್ಕಾರ SIT ತನಿಖೆಗೂ ಕೂಡ ಆದೇಶ ನೀಡಿದೆ. ಇದೀಗ ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ(H D Revanna) ಅವರು ಮೊದಲ ರಿಯಾಕ್ಷನ್ ನೀಡಿದ್ದಾರೆ.

 

ಇದನ್ನೂ ಓದಿ:  Heart Attack: ಅಕ್ಕನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಬಲಿಯಾದ ತಂಗಿ !!

ಮಾಧ್ಯಮಗಳೊಂದಿಗೆ ತಮ್ಮ ಮಗನ ಪೆನ್ ಡ್ರೈವ್(Pendrive) ವಿಚಾರವಾಗಿ ಮೊದಲ ಸಲ ಮಾತನಾಡಿದ್ದು ನಾವು ಇದು ಯಾವುದಕ್ಕೂ ಹೆದರುವುದಿಲ್ಲ. ಸರ್ಕಾರ ತನಿಖೆಗೆ ಆದೇಶಿಸಿದೆ. ತನಿಖೆ ಮೂಲಕ ಎಲ್ಲಾ ಗೊತ್ತಾಗಲಿ. ಕಾನೂನು ಎಲ್ಲದಕ್ಕೂ ಉತ್ತರ ನೀಡುತ್ತದೆ. ನಾವು ಎಲ್ಲೂ ಹೆದರಿ ಓಡುವುದಿಲ್ಲ. ತನಿಖೆ ವರದಿ ಬರುವವರೆಗೂ ನಾನೇನೂ ರಿಯಾಕ್ಷನ್ ಕೊಡಲ್ಲ ಎಂದಿದ್ದಾರೆ.

ಇದನ್ನೂ ಓದಿ:  Bengaluru: ಗ್ರಾಹಕನ ಗುಪ್ತಾಂಗ ಟಚ್‌ ಮಾಡಿದ ಡೆಲಿವರ್‌ ಬಾಯ್‌

ಕುಮಾರಸ್ವಾಮಿ ಹೇಳಿದ್ದೇನು?

ನೆಲದ ಕಾನೂನಲ್ಲಿ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು. ಹೆಣ್ಣುಮಕ್ಕಳ ವಿಚಾರದಲ್ಲಿ ನಾನಾಗಲಿ, ಹೆಚ್ ಡಿ ದೇವೇಗೌಡ(H D Devegowda) ಅವರಾಗಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳಿಸಿದ್ದೇವೆ. ಆದರೀಗ ಹಾಸನ ಚುನಾವಣಾ ಪ್ರಚಾರ ವೇಳೆ ಪ್ರಕರಣ ಶುರುವಾಗಿದೆ. ಈಗಾಗಲೆ ಸಿಎಂ ಎಸ್ ಐಟಿ ತನಿಖೆಗೆ ಆದೇಶ ನೀಡಿದ್ದಾರೆ ತನಿಖೆ ಆದ್ಮೇಲೆ ಸತ್ಯಾಸತ್ಯತೆ ಹೊರ ಬರಲಿದೆ. ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Prajwal Revanna: JDS ನಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ – ಎಚ್ ಡಿ ದೇವೇಗೌಡ ಮಹತ್ವದ ಆದೇಶ !!

Leave A Reply

Your email address will not be published.