Celebrity Autograph: ಸೆಲೆಬ್ರಿಟಿಗಳು ನೀಲಿ ಇಂಕಿನಲ್ಲಿ ಆಟೋಗ್ರಾಫ್ ಹಾಕಲ್ಲ, ಯಾಕೆ ?!
Celebrity Autograph: ಅಭಿಮಾನಿಗಳು ತಮ್ಮಿಷ್ಟದ ಅಥವಾ ಯಾರಾದರೂ ಸೆಲೆಬ್ರಿಟಿಗಳು ಕಂಡಾಗ ಆಟೋಗ್ರಾಫ್(Celebrity Autograph) ಪಡೆಯಲು ಮುಗಿಬೀಳುವುದು ಸಹಜ. ಆದರೆ ಅವರ ಬಳಿ ಆಟೋಗ್ರಾಫ ಕೊಡುವಂತೆ ನೀಲಿ ಇಂಕ್ನ ಪೆನ್/ ಮಾರ್ಕರ್ ಹಿಡಿದು ಬಂದರೆ ಖಂಡಿತ ಸಹಿ ಹಾಕುವುದಿಲ್ಲ.
ಇದನ್ನೂ ಓದಿ: Drought Relief Funds: ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ !!
ಹೌದು, ಹಾಲಿವುಡ್ನ(Hollywood) ಅನೇಕ ಸ್ಟಾರ್ಗಳು ಸೇರಿದಂತೆ ಇತರೆ ಕ್ಷೇತ್ರದ ಸ್ಟಾರ್ ಸೆಲೆಬ್ರಿಟಿಗಳ ಬಳಿ ನೀವು ನೀಲಿ ಇಂಕಿನ(Blue Inke) ಪೆನ್ ಹಿಡಿದು ಹೋದರೆ ಬೇರೆ ಬಣ್ಣದ ಇಂಕ್ ತಗೊಂಡು ಬನ್ನಿ ಸಿಗ್ನಚರ್(Signature) ಕೊಡ್ತೀನಿ ಎನ್ನುತ್ತಾರೆ. ಇದನ್ನು ಕೆಲವರು ಗಮನಿಸಿರಬಹುದು. ಕೆಲವರು ಇದು ಸೆಲೆಬ್ರಿಟಿಗಳ ದುರುಹಂಕಾರ ಎಂದು ಸುಮ್ಮನಾದರೆ ಮತ್ತೆ ಕೆಲವರು ಬೇರೆ ಇಂಕಿನ ಪೆನ್ನು ತಂದು ಆಟೋಗ್ರಾಫ್ ತಗೊಂಡು, ಇದ್ಯಾಕೆ ನೀಲಿ ಇಂಕಿನಲ್ಲಿ ಸಹಿ ಹಾಕಲಿಲ್ಲ ಎಂದು ತಲೆಗೆ ಹುಳಬಿಟ್ಟುಕೊಳ್ಳುತ್ತಾರೆ. ಹಾಗಿದ್ರೆ ಅವರು ನೀಲಿ ಇಂಕಿನಲ್ಲಿ ಯಾಕೆ ಸಹಿ ಹಾಕಲ್ಲ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಇದನ್ನೂ ಓದಿ: Vampire Facial: ಹುಡುಗಿಯರೇ ಹುಷಾರ್ !! ಫೇಶಿಯಲ್ ಮಾಡಿಸಿಕೊಂಡ 3 ಮಹಿಳೆಯರಲ್ಲಿ ‘ಏಡ್ಸ್’ ಪತ್ತೆ
ನೀಲಿ ಇಂಕಿನಲ್ಲಿ ಯಾಕೆ ಆಟೋಗ್ರಾಫ್ ಕೊಡಲ್ಲ?
ನೀಲಿ ಬಣ್ಣದ ಇಂಕ್ನಲ್ಲಿ ಸಹಿ ಹಾಕೋದಿಲ್ಲ ಎಂಬ ಸಂಗತಿ ಒಂದು ರೀತಿ ವಿಚಿತ್ರ ಎನಿಸಿದರು ಅದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಮ್ಯಾಟರ್ ಇದೆ. ಅದೇನೆಂದರೆ ಬ್ಲೂ ಇಂಕ್ನಲ್ಲಿ ಮಾಡಿದ್ರೆ, ಅದನ್ನು ಬಹಳ ಸುಲಭವಾಗಿ ಸ್ಕ್ಯಾನ್ ಮಾಡಿ, ನಂತರದಲ್ಲಿ ನಕಲು ಮಾಡಬಹುದು. ಇದನ್ನು ಮೀರಿ ಹಣದ ಆಸೆಗೆ ಮಾರಾಟವು ಕೂಡ ಮಾಡಬಹುದು ಎಂಬ ಭಯದಿಂದ ಸ್ಟಾರ್ ಸೆಲೆಬ್ರಿಟಿಗಳು ಬ್ಲೂ ಇಂಕ್ನಲ್ಲಿ ಎಂದಿಗೂ ಸಿಗ್ನಚರ್ ಮಾಡಲು ಬಯಸುವುದಿಲ್ಲ,