Vampire Facial: ಹುಡುಗಿಯರೇ ಹುಷಾರ್ !! ಫೇಶಿಯಲ್ ಮಾಡಿಸಿಕೊಂಡ 3 ಮಹಿಳೆಯರಲ್ಲಿ ‘ಏಡ್ಸ್’ ಪತ್ತೆ

Vampire Facial: ಇಂದು ಸೌಂದರ್ಯವನ್ನು ಹೆಚ್ಚಿಸಲು ವಿವಿಧ ರೀತಿಯ ಚಿಕಿತ್ಸೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಸೌಂದರ್ಯವನ್ನು ಕಾಪಾಡಿಕೊಳ್ಳುವುದಾಗಿ ಹೇಳಿಕೊಳ್ಳುವ ಸಲೂನ್ ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಚರ್ಮದ ಆರೈಕೆ ಚಿಕಿತ್ಸೆಗಳು ಲಭ್ಯವಿದೆ. ಅಂತೆಯೇ ಇಂಥ ಸಾಮಾನ್ಯ ಆಸೆಯಿಂದ ಪಾರ್ಲರ್‍‌ಗೆ ಹೋದ ಮೂವರು ಮಹಿಳೆಯರು ಎಚ್‌ಐವಿ(HIV) ಸೋಂಕಿಗೆ ಒಳಗಾಗಿದ್ದಾರೆ !!

 

ಇದನ್ನೂ ಓದಿ:  IPL-2024 Punjab vs KKR: IPL ನಲ್ಲಿ ಇತಿಹಾಸ ಸೃಷ್ಟಿಸಿದ ಪಂಜಾಬ್ ಕಿಂಗ್ಸ್ : ಅತಿ ಹೆಚ್ಚು ರನ್ ಚೇಸ್ ಮಾಡಿ ಟಿ20ಯಲ್ಲಿ ವಿಶ್ವದಾಖಲೆ

ಹೌದು, ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ಚರ್ಮದಲ್ಲಿ ಕಾಲಜಿನ್‌ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್‌ ಆಗಿದೆ. ಆದರೆ, ಇದು ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿರುವುದು ಆತಂಕ ಹೆಚ್ಚಿಸಿದೆ. ಇದೀಗ ಇಂತದ್ದೇ ಒಂದು ಅಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು ಅಮೆರಿಕಾದ ನ್ಯೂ ಮೆಕ್ಸಿಕೋದ ಸ್ಪಾವೊಂದರಲ್ಲಿ ವ್ಯಾಂಪೈರ್ ಫೇಶಿಯಲ್( Vampire Facial) ಪಡೆದ ಕನಿಷ್ಠ ಮೂವರು ಮಹಿಳೆಯರಿಗೆ ಎಚ್‌ಐವಿ ಸೋಂಕು ತಗಲಿರುವ ಆಘಾತಕಾರಿ ಘಟನೆ ನಡೆದಿದೆ.

ಇದನ್ನೂ ಓದಿ:  Plastic Surgery: ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಬಳಸ್ತಾರ? : ರೂಪ ಬದಲಿಸುವ ಈ ಸರ್ಜರಿಗೆ ಆ ಹೆಸರು ಏಕೆ ಬಂತು ಗೊತ್ತಾ? : ಇದಕ್ಕೆ ಮಹರ್ಷಿ ಸುಶ್ರುತರ ಕೊಡುಗೆ ಅಪಾರ

ಅಂದಹಾಗೆ ಅಮೆರಿಕದ(America) ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಈ ಬಗ್ಗೆ ಮಾಹಿತಿ ನೀಡಿದ್ದು ಅಮೆರಿಕದ ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಮೆಟಿಕ್‌ ಇಂಜೆಕ್ಷನ್‌ ಪ್ರೊಸೀಜರ್‌ ಮೂಲಕ ನಡೆಸುವ ವ್ಯಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ ತಗುಲಿದೆ ಎಂದು ಹೇಳಿದೆ.

ಏನಿದು ವ್ಯಾಂಪೈರ್‌ ಫೇಶಿಯಲ್?‌

ವ್ಯಾಂಪೈರ್‌ ಫೇಶಿಯಲ್‌ಅನ್ನು ರಕ್ತಪಿಶಾಚಿ ಫೇಶಿಯಲ್‌ ಎಂದೂ ಕರೆಯಲಾಗುತ್ತದೆ. ಸ್ಪಾಗಳಲ್ಲಿ ಸೂಜಿ ಅಥವಾ ಇಂಜೆಕ್ಷನ್‌ ಮೂಲಕ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು, ಅವರು ಯುವತಿಯರಂತೆ ಮಾಡುವ ಸೌಂದರ್ಯ ವರ್ಧಕ ವಿಧಾನ ಇದಾಗಿದೆ. ಇದನ್ನು ಪ್ಲೇಟ್‌ಲೆಟ್‌ ರಿಚ್‌ ಪ್ಲಾಸ್ಮಾ (PRP) ಅಥವಾ ಪ್ಲೇಟ್‌ಲೆಟ್‌ ರಿಚ್‌ ಫೈಬ್ರಿನ್‌ (PRF) ಎಂದು ಕೂಡ ಕರೆಯಲಾಗುತ್ತದೆ.

ವಯಸ್ಸಾದ ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ಚರ್ಮದಲ್ಲಿ ಕಾಲಜಿನ್‌ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್‌ ಆಗಿದೆ. ಇದನ್ನು ಭಾರತದ ಪ್ರಮುಖ ನಗರಗಳು ಸೇರಿ ಜಗತ್ತಿನಾದ್ಯಂತ ಸ್ಪಾಗಳಲ್ಲಿ ಮಾಡುತ್ತಾರೆ. ಆದರೆ, ಈ ಫೇಶಿಯಲ್‌ ಈಗ ಮಹಿಳೆಯರ ಪ್ರಾಣಕ್ಕೇ ಕುತ್ತು ತರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಹೆಣ್ಣುಮಕ್ಕಳ ಕೈಗಳಿಂದ ರಕ್ತವನ್ನು ತೆಗೆದು, ಅದರಿಂದ ಪ್ಲೇಟ್‌ಲೆಟ್‌ಗಳನ್ನು ವಿಗಂಡಣೆ ಮಾಡಿ, ಆ ರಕ್ತವನ್ನು ಸಣ್ಣ ಸೂಜಿಯ ಮೂಲಕ ಮುಖಕ್ಕೆ ಅಳವಡಿಸುತ್ತಾರೆ. ಇದರಿಂದ ಚರ್ಮವು ಹೊಳೆಯುತ್ತದೆ. ಸುಕ್ಕುಗಳು ಮಾಯವಾಗುತ್ತಿವೆ. ಇದು ಸುಲಭ ಹಾಗೂ ಅಷ್ಟೇನೂ ಹೆಚ್ಚಿನ ಹಣ ಖರ್ಚಾಗದ ಕಾರಣ ಜಾಸ್ತಿ ಮಹಿಳೆಯರು ಈ ಫೇಶಿಯಲ್‌ ಮೊರೆಹೋಗುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.