Puttur: ಕೆ.ಎಸ್.ಆರ್. ಟಿ.ಸಿ ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ- ರಿಕ್ಷಾ ಚಾಲಕ ಮೃತ್ಯು

Puttur: ಕೆಎಸ್ ಆರ್ ಟಿಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಕಾರಣ ರಿಕ್ಷಾ ಚಾಲಕ ಮೃತ ಹೊಂದಿದ ಘಟನೆಯೊಂದು ಪುತ್ತೂರಿನ ಹೊರವಲಯ ಮುಕ್ರಂಪಾಡಿಯಲ್ಲಿ ನಸುಕುನ ವೇಳೆ ನಡೆದಿದೆ.

 

ಇದನ್ನೂ ಓದಿ:  Vijayapura: ವೇದಿಕೆ ಏರಿದ ಸಿದ್ದರಾಮಯ್ಯ, ತಕ್ಷಣ ಕೆಳಗಿಳಿದು ಹೋದ ರಾಹುಲ್ ಗಾಂಧಿ !! ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂಗೆ ಮುಜುಗರ

ಈ ದುರ್ಘಟನೆಯಲ್ಲಿ ರಿಕ್ಷಾ ಚಾಲಕ ಜೈಸನ್ ( 30) ಮೃತ ಹೊಂದಿದ್ದಾರೆ. ಎ.27 ಕ್ಕೆ ನಸುಕಿನ ಜಾವ 2 ಗಂಟೆಗೆ ಈ ಅಪಘಾತ ನಡೆದಿದೆ‌

ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬಸ್ ಹಾಗೂ ಎದುರಿನಿಂದ ಬಂದ ರಿಕ್ಷಾ ಮಧ್ಯೆ ಡಿಕ್ಕಿ ಆಗಿದೆ. ಅಪಘಾತದಲ್ಲಿ ಆಟೋ ರಿಕ್ಷಾಕ್ಕೆ ತೀವ್ರ ಹಾನಿಯಾಗಿದೆ.

ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಚಾಲಕ ಜೈಸನ್ ಅವರು ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದಿದ್ದು, ಜೈಸನ್ ಅವರನ್ನು ಹೊರತೆಗೆದಿದ್ದಾರೆ. ಆದರೆ ಜೈಸನ್ ಅದಾಗಲೇ ಮೃತ ಹೊಂದಿದ್ದಾರೆ.

Leave A Reply

Your email address will not be published.