Bore Point: ತೆಂಗಿನಕಾಯಿಯಿಂದ ಅತಂರ್ಜಲ ಕಂಡು ಹಿಡಿಯಬಹುದಾ? ಇದು ವಿಜ್ಞಾನವೋ, ಇಲ್ಲ ಕಾಕತಾಳೀಯವೋ?

Bore Point: ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಭಾರತದಲ್ಲಿ ಅನೇಕ ಕುಟುಂಬಗಳು ಕೃಷಿಯನ್ನು ನಂಬಿ ಬದುಕುತ್ತಿವೆ. ಕೃಷಿ ಮಾಡಲು ಮುಖ್ಯವಾಗಿ ಬೇಕಾಗಿರುವಂಥದ್ದು ನೀರು. ಆದರೆ ಭಾರತದ ಅನೇಕ ಕಡೆಗಳಲ್ಲಿ ನೀರಿನ ಸೌಲಭ್ಯವಿಲ್ಲ. ಹೀಗಾಗಿ ರೈತರು ಬೋರ್ವೆಲ್ ಗಳನ್ನು ಕೊರೆಸಿ ತಮ್ಮ ಕೃಷಿಗೆ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಳ್ಳುತ್ತಾರೆ. ಈ ಬೋರ್ ಕೊರೆಸುವಾಗ ಅಂತರ್ಜಲವನ್ನು ನೋಡುವುದು ಸಹಜ. ಇದನ್ನು ಬೋರ್ ಪಾಯಿಂಟ್(Bore Point) ನೋಡುವುದು ಅನ್ನುತ್ತಾರೆ. ಹೀಗಾಗಿ ಪಾಯಿಂಟ್ ನೋಡುವ ಕುರಿತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ತಿಳಿಯೋಣ.

ಇದನ್ನೂ ಓದಿ:  Dark Circles Under Eyes: ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳನ್ನು ಹೋಗಲಾಡಿಸಲು ಈ ವಿಧಾನಗಳನ್ನು ಅನುಸರಿಸಿ : ಖಂಡಿತ ಕಪ್ಪು ಮಾಯವಾಗುತ್ತೆ

ಹೌದು, ಬಾವಿ ಅಥವಾ ಬೋರ್ವೆಲ್(Borewell) ತೋಡಬೇಕೆಂದರೆ ಸಾಮಾನ್ಯವಾಗಿ ಎಲ್ಲಿ ನೀರು ಇರಬಹುದು ಎಂದು ನೋಡುತ್ತಾರೆ. ಇದನ್ನು ಕೆಲವರು ತೆಂಗಿನಕಾಯಿ, ಬಟ್ಟಲಿನಲ್ಲಿ ನೀರಿಟ್ಟುಕೊಂಡು, ಕಡ್ಡಿ ಹಿಡಿದು, ಚೈನ್ ಹಿಡಿದು, ತಂತಿ ಹಿಡಿದೆಲ್ಲಾ ಟೆಸ್ಟ್ ಮಾಡುತ್ತಾರೆ. ಇಷ್ಟೇ ಅಲ್ಲ, ದೇವರ ಮೂಲಕವೂ ಪಾಯಿಂಟ್ ಮಾಡಿಸುವುದುಂಟು. ಇಂದು ಆಧುನಿಕ ಉಪಕರಣಗಳು ಕೂಡ ಬಂದಿವೆ. ಆದ್ರೆ ಹಳ್ಳಿಗಳಲೆಲ್ಲಾ ಇಂದಿಗೂ ಪ್ರಸಿದ್ದಿಯಾಗಿ, ಹೆಚ್ಚು ಚಾಲ್ತಿಯಲ್ಲಿರುವುದು ತೆಂಗಿನಕಾಯಿ ಹಿಡಿದು ನೀರು ನೋಡುವುದು. ತದನಂತರ ಉಳಿದವುಗಳಿಗೆ ಸ್ಥಾನ. ಹಾಗಿದ್ರೆ ತೆಂಗಿನಕಾಯಿಯ ಮೂಲಕ ನೀರು ನೋಡುವುದು ಎಷ್ಟು ನಿಜ, ಈ ಬಗ್ಗೆ ಸೈನ್ಸ್ ಏನು ಹೇಳುತ್ತೆ ಗೊತ್ತಾ? ಇಲ್ಲಿದೆ ನೋಡಿ.

ಇದನ್ನೂ ಓದಿ:  HSRP ಕುರಿತು ಸಿಹಿ ಸುದ್ದಿ ಹಂಚಿಕೊಂಡ ಸಾರಿಗೆ ಇಲಾಖೆ!!

ವಿಜ್ಞಾನ ಏನು ಹೇಳುತ್ತೆ? 

ಇಂದಿನ ಕಾಲದಲ್ಲಿ ತಂತ್ರಜ್ಞಾನ ಎಷ್ಟೇ ವೇಗವಾಗಿ ಮುಂದುವರೆದಿದ್ದರೂ.. ಇಂದಿಗೂ ಕೆಲ ಗ್ರಾಮೀಣ ಪ್ರದೇಶದ ಜನರು ನೀರಿನ ಕುರುಹು ಹುಡುಕಲು ಸಾಂಪ್ರದಾಯಿಕ ವಿಧಾನಗಳನ್ಳೇ ಫಾಲೋ ಮಾಡುತ್ತಿದ್ದಾರೆ. ಆದರೆ

ಭೂವಿಜ್ಞಾನಿಗಳು ಈ ಪದ್ಧತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಆದರೂ ಕೆಲವು ಸಂದರ್ಭಗಳಲ್ಲಿ ಅವು ವಿಫಲಗೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದ್ದಾರೆ. ವೈಜ್ಞಾನಿಕ ವಿಧಾನಗಳ ಮೂಲಕ ಮಾತ್ರ ನೀರಿನ ಜಾಡನ್ನು ಖಚಿತವಾಗಿ ಗುರುತಿಸಬಹುದು ಎಂದು ಸೈನ್ಸ್ನಲ್ಲಿ ಹೇಳಲಾಗುತ್ತದೆ.

 

ಇನ್ನು ಕೆಲವು ಪ್ರದೇಶಗಳಲ್ಲಿ ಸಾಕಷ್ಟು ನೀರಿನ ಮೂಲಗಳು ಇರುತ್ತವೆ, ಈ ಸಂದರ್ಭದಲ್ಲಿ ಯಾವುದೇ ವಿಧಾನದಿಂದ ನೋಡಿದ್ರು ನೀರು ಸಿಗುತ್ತದೆ. ಅವೈಜ್ಞಾನಿಕವಾಗಿ ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ನೋಡಿದ್ರೂ ನೀರು ಸಿಕ್ಕೇ ಸಿಗುತ್ತೆ. ಇದೇ ಕಾರಣದಿಂದ ರೈತರು ಆ ವಿಧಾನಗಳನ್ನು ನಂಬುತ್ತಾರೆ. ಸಾಕಷ್ಟು ನೀರು ಇರುವ ಪ್ರದೇಶದಲ್ಲಿ ಯಾವುದೇ ವಿಧಾನಗಳನ್ನು ಫಾಲೋ ಮಾಡಿದ್ರು ಬೋರ್ ಕೊರೆದರೆ ನೀರು ಸಿಗುತ್ತದೆ.

ವೈಜ್ಞಾನಿಕ ವಿಧಾನ ನಂಬಲರ್ಹವೇ?

ಸಾಮಾನ್ಯವಾಗಿ ಭೂವಿಜ್ಞಾನಿಗಳು ವಿದ್ಯುತ್ ನಿರೋಧಕ ಮೀಟರ್ ಬಳಸಿಕೊಂಡು ನೀರಿನ ಕುರುಹುಗಳನ್ನು ಹುಡುಕುತ್ತಾರೆ. ವೈಜ್ಞಾನಿಕ ವಿಧಾನಗಳನ್ನು ನೂರಕ್ಕೆ ನೂರು ನಂಬಬಹುದು. ಆದರೆ ಅವೈಜ್ಞಾನಿಕ ವಿಧಾನಗಳಿಗೆ ಈ ರೀತಿಯ ಯಾವುದೇ ಸಾಕ್ಷಾಧಾರಗಳಿಲ್ಲ. ಆದ್ದರಿಂದ ಹೆಚ್ಚಿನವರು ವೈಜ್ಞಾನಿಕವಾಗಿ ನೀರಿನ ಕುರುಹುಗಳನ್ನು ಪತ್ತೆ ಮಾಡಿದರೆ ಒಳ್ಳೆಯದು ಎನ್ನುತ್ತಾರೆ ವಿಜ್ಞಾನಿಗಳು. ಆದ್ರೆ ಅವೈಜ್ಞಾನಿಕ ವಿಧಾನಗಳ ಜೊತೆಗೆ, ಕೆಲವೊಮ್ಮೆ ಭೂವಿಜ್ಞಾನಿಗಳು ಮಾಡಿದ ಸಂಶೋಧನೆಗಳು ಸಹ ಈ ಬರ ಪ್ರದೇಶಗಳಲ್ಲಿ ವಿಫಲಗೊಳ್ಳುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.

Leave A Reply

Your email address will not be published.