Race Car: ಟ್ರ್ಯಾಕ್ ತಪ್ಪಿ ರೇಸ್ ಕಾರು ಜನರ ಮೇಲೆ ಹರಿದು 7 ಮಂದಿ ಸಾವು, 20 ಮಂದಿ ಸ್ಥಿತಿ ಚಿಂತಾಜನಕ
Race Car: ಕಾರು ರೇಸ್ ಸ್ಪರ್ಧೆಯ ಸಂದರ್ಭದಲ್ಲಿ ಕಾರೊಂದು ಟ್ರ್ಯಾಕ್‌ನಿಂದ ತಪ್ಪಿ ಜನರ ಮೇಲೆ ಹರಿದ ಪರಿಣಾಮ 7 ಮಂದಿ ಮೃತ ಹೊಂದಿದ ಘಟನೆಯೊಂದು ಶ್ರೀಲಂಕಾದಲ್ಲಿ ನಡೆದಿದೆ. ಈವೆಂಟ್‌ನ್ನು ಶ್ರೀಲಂಕಾ ಸೇನೆ ಮತ್ತು ಶ್ರೀಲಂಕಾ ಆಟೋಮೊಬೈಲ್ ಸ್ಪೋರ್ಟ್ಸ್ ಆಯೋಜನೆ ಮಾಡಿತ್ತು.
ಈ ಘಟನೆ ಎ.21ರಂದು ನಡೆದಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಕೂಡಾ ನಡೆದಿದೆ.
ಶ್ರೀಲಂಕಾದ ಕೊಲಂಬೋದಿಂದ ಪೂರ್ವಕ್ಕೆ 180 ಕಿ.ಮೀ. ದೂರದಲ್ಲಿರುವ ಚಹಾ ಬೆಳೆಯುವ ಕೇಂದ್ರ ಬೆಟ್ಟಗಳಲ್ಲಿ ದಿಯಾತಲಾವಾ ಪಟ್ಟಣದಲ್ಲಿ ಈ ಕಾರು ರೇಸ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಂದಿ ಪ್ರೇಕ್ಷಕರು ಈ ಸಂದರ್ಭದಲ್ಲಿ ಕಾರು ರೇಸು ನೋಡಲು ನೆರೆದಿದ್ದರು.
ಕಾರು ರೇಸ್ ನಡೆಯುವ ಸಂದರ್ಭದಲ್ಲಿ ಕಾರೊಂದು ರೇಸ್ ಟ್ರ್ಯಾಕ್‌ನಿಂದ ಹೊರ ಬಂದು ಜನರ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಅಧಿಕಾರಿಗಳು ಸೇರಿ ಏಳು ಜನ ಮೃತ ಹೊಂದಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡ 20 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#BREAKING At least seven people were killed and another 21 wounded when a race car collided with spectators at a crowded motorsport event hosted by Sri Lanka's army, according to police.
Footage: RT pic.twitter.com/jXSGxzSnMG— The National Independent (@NationalIndNews) April 21, 2024