Neha Murder Case: ನೇಹಾಳಿಗೆ ಫಯಾಜ್ ಚುಚ್ಚಿದ್ದು 9 ಸಲ ಅಲ್ಲ 14 ಸಲ !! ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲು !!

Neha Murder Case : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿ ಕಾಲೇಜಿನ ನೇಹಾ ಹತ್ಯೆ ಪ್ರಕರಣ(Neha Murder Case) ದಲ್ಲಿ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಫಯಾಜ್ ನೇಹಾಳಿಗೆ ಚುಚ್ಚಿದ್ದು 9 ಸಲ ಅಲ್ಲ, 14 ಸಲ ಎಂಬ ಭಯಾನಕ ವಿಚಾರ ತಿಳಿದುಬಂದಿದೆ.

 

ಇದನ್ನೂ ಓದಿ: Pradhan Mantri Matru Vandana Yojana: ಗರ್ಭಿಣಿಯರಿಗಾಗಿ ಸರ್ಕಾರದ ಈ ಯೋಜನೆಯ ಬಗ್ಗೆ ನಿಮಗೆ ತಿಳಿದಿದೆಯೇ? : ಯೋಜನೆಯಲ್ಲಿ ನೊಂದಾಯಿಸಿಕೊಂಡರೆ ₹5000 ಆರ್ಥಿಕ ನೆರವು

ಬಿವಿಬಿ ಕಾಲೇಜು(BVB) ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ರಾಷ್ಟ್ರದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದು, ಪ್ರಕರಣ ಕ್ಷಣಕ್ಕೊಂದು ಬಣ್ಣ ಪಡೆಯುತ್ತಿದ್ದು, ಕೊಲೆಯಾದ ನೇಹಾಳ ಮರಣೋತ್ತರ ವರದಿ(Post mortem Report) ಬಿಡುಗಡೆಯಾಗಿದೆ. ಈ ವೇಳೆ ಭಯಾನಕ ಸಂಗತಿ ಬಯಲಾಗಿದೆ. ಅದೇನೆಂದರೆ ಆರೋಪಿ ಫಯಾಜ್​(Fayaz), ನೇಹಾಳಿಗೆ 9 ಬಾರಿ ಇದಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಶವಪರೀಕ್ಷೆಯಲ್ಲಿ ಅಸಲಿ ಸಂಗತಿ ಬಯಲಾಗಿದ್ದು, ಆತ 14 ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲದೆ ಈ ಪಾಪಿ ಆಕೆಯ ಹೃದಯಕ್ಕೂ ಚುಚ್ಚಿದ್ದಾನೆ.

ಇನ್ನು ನೇಹಾಳ ಕತ್ತಿನ ಭಾಗದಲ್ಲಿರುವ ರಕ್ತನಾಳ ತುಂಡಾಗಿದೆ ಎನ್ನಲಾಗಿದೆ. ಅತಿಯಾದ ರಕ್ತಸ್ರಾವದಿಂದಲೇ ಆಕೆ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದು ಆರೋಪಿ ಫಯಾಜ್​ ನೇಹಾಳ ಹೃದಯಕ್ಕೂ ಚಾಕುವಿನಿಂದ ಚುಚ್ಚಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯಿಂದ ಅಂಪೈರ್‌ಗೆ ಅವಮಾನ; ಅಸಲಿಗೆ ಅಂಪೈರ್‌ ಏನ್ ಮಾಡಿದ್ರು?

Leave A Reply

Your email address will not be published.