Hubballi: ನೇಹಾ ಹತ್ಯೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ – ಮುಸ್ಲಿಂ ಯುವಕನಿಂದ ಹಿಂದೂ ಯುವತಿ ಮೇಲೆ ಹಲ್ಲೆ !!

Hubballi: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯರ ಮಗಳು ನೇಹಾ ಹಿರೇಮಠ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ:  DJ Tillu square: ಇಷ್ಟು ಬೇಗ ಓಟಿಟಿ ಗೆ ಬಂದೇ ಬಿಡ್ತು ಡಿಜೆ ಟಿಲ್ಲು! ಇಲ್ಲಿದೆ ಮತ್ತಷ್ಟು ಮಾಹಿತಿ

ಹೌದು, ಹುಬ್ಬಳ್ಳಿ(Hubballi) ಯಲ್ಲಿ ಹಿಂದೂ ಯುವತಿ (girl) ಮೇಲೆ ಅಫ್ತಾಬ್(Afthab) ಎಂಬಾತನಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ಸದ್ಯ ಕೇಶ್ವಾಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿ ಅಫ್ತಾಬ್ ನನ್ನ ವಿಚಾರಣೆ ಮಾಡಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ ಎಂದುಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ(Renuka Sukumara) ಹೇಳಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಇದನ್ನೂ ಓದಿ:  Vastu Tips: ಯಾವುದೇ ಕಾರಣಕ್ಕೂ ಈ ಪಾತ್ರೆಯನ್ನು ಉಲ್ಟಾ ಪಲ್ಟಾ ಇಡಬೇಡಿ, ಕಷ್ಟಗಳು ಒಕ್ಕರಿಸುತ್ತೆ!

ಏನಿದು ಘಟನೆ?

ಸ್ನೇಹದಿಂದ ಇದ್ದಾಗ ಯುವತಿಗೆ ಅಫ್ತಾಬ್ ಕೆಲವು ಗಿಫ್ಟ್ಗಳನ್ನ ಕೊಟ್ಟಿದ್ದಾನೆ. ಗಿಫ್ಟ್ ವಾಪಸ್ ಕೊಡುವ ಸಮಯದಲ್ಲಿ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ಸದ್ಯ ಹಲ್ಲೆ ಆರೋಪ ಪ್ರಕರಣ ಕೇಶ್ವಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹಲ್ಲೆಗೊಳಗಾದ ಸಂತ್ರಸ್ತ ಯುವತಿ ಪ್ರತಿಕ್ರಿಯಿಸಿದ್ದು, ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ ವ್ಯಾಪಾರಿ ಅಫ್ತಾಬ್ ಜೊತೆ ಸಂತ್ರಸ್ತ ಯುವತಿಯು ಕೆಲ ದಿನಗಳಿಂದ ಸ್ನೇಹ ಹೊಂದಿದ್ದಳು. ಸ್ನೇಹದಿಂದ ಇದ್ದಾಗ ಯುವತಿಗೆ ಅಫ್ತಾಬ್ ಕೆಲವು ಗಿಫ್ಟ್ಗಳನ್ನ ಕೊಟ್ಟಿದ್ದಾನೆ. ಗಿಫ್ಟ್ ವಾಪಸ್ ಕೊಡುವ ಸಮಯದಲ್ಲಿ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂತ್ರಸ್ತೆ ‘ನನಗೆ ಆತ ಎರಡು ವರ್ಷದಿಂದ ಪರಿಚಯ. ಅಫ್ತಾಬ್ ಮತ್ತು ನನ್ನ ನಡುವೆ ಸ್ನೇಹವಿತ್ತು, ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ನೇಹಾ ಪ್ರಕರಣದ ಬಳಿಕ ಸ್ನೇಹ ಕಳೆದುಕೊಳ್ಳಲು ನಿರ್ಧಾರ ಮಾಡಿದ್ದೆ. ಇವತ್ತು ನನಗೆ ಕರೆ ಮಾಡಿ ಹಣ್ಣಿನ‌ ಅಂಗಡಿ ಬಳಿ ಬರಲು ತಿಳಿಸಿದ್ದ. ನನ್ನ ಬರ್ತ್ಡೇ ಮತ್ತು ರಂಜಾನ್ಗೆ ಬಲವಂತವಾಗಿ ಗಿಫ್ಟ್ ಕೊಟ್ಟಿದ್ದ. ಅದನ್ನೆಲ್ಲಾ ಅಫ್ತಾಬ್ ಅಂಗಡಿ ಹತ್ತಿರ ಹೋಗಿ ವಾಪಸ್ ನೀಡಿದೆ. ಆ ಗಿಫ್ಟ್ ಸುಟ್ಟು ಹಾಕಿ ಬಳಿಕ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಿದ್ದಾಳೆ.

Leave A Reply

Your email address will not be published.