Birth to 6 children: ಒಂದಾದ ನಂತರ ಒಂದರಂತೆ ಒಂದು ಗಂಟೆಯೊಳಗೆ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

Birth to 6 children: ಮಹಿಳೆಯೊಬ್ಬರು ಆರು ಮಕ್ಕಳಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. ಒಂದು ಘಂಟೆಯಲ್ಲಿ ಆರು ಮಕ್ಕಳಿಗೆ ಒಂದರ ನಂತರ ಇನ್ನೊಂದರಂತೆ ಜನ್ಮ ನೀಡಿದ್ದು ಮಹಾತಾಯಿ ಎನಿಸಿಕೊಂಡಿದ್ದಾರೆ. 27 ವರ್ಷದ ಮಹಿಳೆ ಜೀನತ್‌ ವಾಹಿದ್‌ ಎಂಬುವವರೇ ಈ ಆರು ಮುದ್ದು ಕಂದಗಳ ಅಮ್ಮ. ಆರು ಮಕ್ಕಳಲ್ಲಿ ನಾಲ್ಕು ಗಂಡುಮಕ್ಕಳಿದ್ದು, ಎರಡು ಹೆಣ್ಣು ಮಕ್ಕಳು ಜನಿಸಿದೆ.

 

ಇದನ್ನೂ ಓದಿ: Neha Hiremath: ನನ್ನ ಜೊತೆ ಮಾತಾಡಲ್ಲ ಅಂದಳು, ಚಾಕು ಹಾಕಿದೆ- ಆರೋಪಿ ಫಯಾಜ್‌

ಎ.19 ರಂದು ಪಾಕಿಸ್ತಾನದ ಮೊಹಮ್ಮದ್‌ ವಾಹೀದ್‌ ಎಂಬುವವರ ಪತ್ನಿ ಜೀನತ್‌ ವಾಹಿದ್‌ ಅವರು ಆರು ಮಕ್ಕಳಿಗೆ ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ.

ಇದನ್ನೂ ಓದಿ: children Obesity ಮಲಗುವ ಮುನ್ನ ಮೊಬೈಲ್ ಬಳಸುವ ಮಕ್ಕಳು ಸ್ಥೂಲಕಾಯಕ್ಕೆ ಬಲಿಯಾಗುತ್ತಾರೆ : ಸಂಶೋಧನೆಯಲ್ಲಿ ಬಹಿರಂಗ

ಎ.18 ರಂದು ಹೆರಿಗೆ ನೋವೆಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾವಲ್ಪಿಂಡಿಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸ್ತುತ ತಾಯಿ ಹಾಗೂ ಆರು ಮಕ್ಕಳು ಆರೋಗ್ಯವಾಗಿದ್ದಾರೆ. ಎಲ್ಲಾ ಮಕ್ಕಳೂ 2 ಪೌಂಡ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಮಕ್ಕಳನ್ನು ಇನ್ಕ್ಯುಬೇಟರ್‌ನಲ್ಲಿ ಇಟ್ಟಿದ್ದು, ಆರೋಗ್ಯದಲ್ಲೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಜೀನತ್‌ ಅವರಿಗೆ ಇದು ಮೊದಲ ಹೆರಿಗೆ. ಇದು ಸಹಜ ಹೆರಿಯಾಗಿಲ್ಲ. ಸಿಸೇರಿಯನ್‌ ಮಾಡಿ ಮಕ್ಕಳನ್ನು ಹೊರ ತೆಗೆಯಲಾಗಿದೆ. ಹೆರಿಗೆ ನಂತರ ಜೀನತ್‌ ಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ನಂತರ ಆಕೆ ಆರೋಗ್ಯವಾಗಿರುವ ಕುರಿತು ಮಾಹಿತಿ ಇದೆ. ಆಸ್ಪತ್ರೆ ಸಿಬ್ಬಂದಿ ಅಪರೂಪದ ಘಟನೆ ಈ ತಮ್ಮ ಆಸ್ಪತ್ರೆಯಲ್ಲಿ ನಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.