Mangaluru: ರಾಜೇಶ್‌ ಕೋಟ್ಯಾನ್‌ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

Mangaluru: ಉಳ್ಳಾಲ ಕೋಟೆಪುರದಲ್ಲಿ 2016 ರ ಎ.12 ರ ಮುಂಜಾನೆ ಕೋಮುದ್ವೇಷದಿಂದ ನಡೆದಿದ್ದ ರಾಜೇಶ್‌ ಕೋಟ್ಯಾನ್‌ ಅಲಿಯಾಸ್‌ ರಾಜ (44) ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟ ಮಾಡಿದ್ದಾರೆ.

 

ಇದನ್ನೂ ಓದಿ: Heart Attack ಹೃದಯಾಘಾತ ಹಾಗೂ ಹೃದಯ ಸ್ತಂಭನದ ನಡುವಿನ ವ್ಯತ್ಯಾಸವೇನು? : ಅದರ ಲಕ್ಷಣಗಳೇನು ? : ಇಲ್ಲಿ ತಿಳಿಯಿರಿ

ಉಳ್ಳಾಲ ಕೋಡಿ ರೋಡ್‌ನ ಮೊಹಮ್ಮದ್‌ ಆಸೀಫ್‌ ಆಲಿಯಾಸ್‌ ಆಚಿ (31), ಮುಕ್ಕಚೇರಿಯ ಮೊಹಮ್ಮದ್‌ ಸುಹೈಲ್‌ ಆಲಿಯಾಸ್‌ ಸುಹೈಲ್‌ (28), ಕೋಡಿ ಮಸೀದಿ ಬಳಿಯ ಅಬ್ದುಲ್‌ ಮುತಾಲಿಪ್‌ ಆಲಿಯಾಸ್‌ ಮುತ್ತು (28), ಮತ್ತು ಉಳ್ಳಾಲ ಉಳಿಯ ರಸ್ತೆಯ ಅಬ್ದುಲ್‌ ಅಸ್ವೀರ್‌ ಆಲಿಯಾಸ್‌ ಅಚ್ಚು (27) ಜೀವಾವಧಿ ಶಿಕ್ಷೆಗೊಳಗದವರು. ಈ ಪ್ರಕರಣ ಇಬ್ಬರು ಬಾಲಕರ ವಿಚಾರಣೆ ಬಾಲ ನ್ಯಾಯ ಮಂಡಳಿಯಲ್ಲಿ ಬಾಕಿ ಇದೆ.

ಇದನ್ನೂ ಓದಿ: Deadly Accident: ಮದುವೆ ಮುಗಿಸಿ ಬರುವಾಗ ಕಾರು, ಟ್ರಕ್‌ ಮಧ್ಯೆ ಭೀಕರ ಅಪಘಾತ; 9 ಮಂದಿ ದಾರುಣ ಸಾವು

ಎ.20 ರಂದು ನಾಲ್ವರು ಆರೋಪಿಗಳಿಗೆ ಕಲಂ 302 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ, ತಲಾ 25000 ರೂ.ದಂಡ, ದಂಡ ಪಾವತಿಸಲು ವಿಫಲರಾದರೆ, ಹೆಚ್ಚುವರಿ 1 ವರ್ಷ ಸಜೆ, ಕಲಂ 201 ಅಡಿಯಲ್ಲಿ 1 ವರ್ಷ ಶಿಕ್ಷೆ, ತಲಾ 5000 ರೂ.ದಂಡ, ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ, ಕಲಂ 143 ರಡಿ 6 ತಿಂಗಳ ಸಾದಾ ಸಜೆ, ಕಲಂ 148 ರಡಿಯಲ್ಲಿ 1 ವರ್ಷ ಸಜೆ, ಕಲಂ 153 (ಎ) ಅಡಿಯಲ್ಲಿ 1 ವರ್ಷ ಸಜೆ ವಿಧಿಸಲಾಗಿದೆ.

ಆರೋಪಿಗಳಿಂದ ವಸೂಲಾದ ದಂಡದ ಮೊತ್ತ 1.20 ಲ.ರೂ ಗಳನ್ನು ಮೃತ ರಾಜೇಶ್‌ ಕೋಟ್ಯಾನ್‌ ಪತ್ನಿಗೆ ನೀಡುವಂತೆ ನಿರ್ದೇಶನ ನೀಡಲಾಗಿದೆ.

Leave A Reply

Your email address will not be published.