Highest NOTA Constituency: ಅತ್ಯಂತ ಹೆಚ್ಚು ನೋಟಾ ಚಲಾವಣೆಯಾದ ಕ್ಷೇತ್ರ ಇದುವೇ; ಸೌಜನ್ಯಾ ಚಳವಳಿ ಹಳೆ ದಾಖಲೆ ಒರೆಸಿ ಹಾಕೋದು ಗ್ಯಾರಂಟಿ ಯಾಕೆ ಗೊತ್ತಾ ?

Highest NOTA Constituency: ಅತ್ಯಂತ ಹೆಚ್ಚು ನೋಟಾ ಚಲಾವಣೆಯಾದ ಕ್ಷೇತ್ರ ಇದುವೇ; ಸೌಜನ್ಯಾ ನೋಟಾ ಚಳವಳಿ ಹಳೆ ದಾಖಲೆ ಒರೆಸಿ ಹಾಕೋದು ಪಕ್ಕಾ !!

ದಕ್ಷಿಣ ಕನ್ನಡದ ಜನರ ಕೇವಲ ಬುದ್ಧಿವಂತರು ಮಾತ್ರವಲ್ಲ ಅತ್ಯಂತ ಪ್ರಬುದ್ದರು ಎಂದು ತೋರಿಸಿಕೊಳ್ಳುವ ಒಂದು ಸುಸಂದರ್ಭ ಎದುರಾಗಿದೆ. ನೋಟಾ ಚಲಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಧರ್ಮಸ್ಥಳದ ದುರುಳರು ಅರೆಬರೆ ತಿಂದು ಬಿಸಾಕಿ ಹೋದ ಸೌಜನ್ಯ ಅನ್ನೋ ಹೆಣ್ಣು ಮಗುವಿಗಾಗಿ ನೋಟಾ ಚಳುವಳಿ ರೂಪುಗೊಂಡಿದೆ ಅನ್ನೋದು ವಿಶೇಷ. ಇಲ್ಲಿತನಕ ನೋಟಾ ಮತದಾನವಾಗಿರುವ ಎಲ್ಲಾ ದಾಖಲೆಗಳನ್ನು ಈ ಸಲ ಮಂಗಳೂರು ಲೋಕಸಭಾ ಕ್ಷೇತ್ರ ಮುರಿದು ಹಾಕಲಿದೆ ಎನ್ನುವ ಇಂಟರೆಸ್ಟಿಂಗ್ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ. ಹಾಗಾದ್ರೆ ದೇಶದಲ್ಲಿ ಇಲ್ಲಿತನಕ ಒಂದು ಕ್ಷೇತ್ರದಲ್ಲಿ ಗರಿಷ್ಠ ಅಂದ್ರೆ ಎಷ್ಟು ಸಾವಿರ ನೋಟಾ ಚಲಾವಣೆಯಾಗಿದೆ ?, ಅದ್ಯಾವ ಕ್ಷೇತ್ರದಲ್ಲಿ ಎಂಬಿತ್ಯಾದಿ ಎಲ್ಲಾ ವಿವರಗಳಲ್ಲಿ  ಹೇಳಲು ನಾವು ಉತ್ಸುಕ.

  • NOTA ಎಂಬ ಅಭ್ಯರ್ಥಿಯೇ ಅಲ್ಲದ ಅಭ್ಯರ್ಥಿ

ಹೌದು ಗೆಳೆಯರೇ, ಇಂಥದ್ದು ಈ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿ ನಡೆಯುತ್ತಿದೆ. 2013ರಲ್ಲಿ ನೋಟಾ ಎಂಬ ವ್ಯಕ್ತಿಯಲ್ಲದ ವ್ಯಕ್ತಿ ವೋಟರ್ ಬ್ಯಾಲೆಟ್ ನಲ್ಲಿ ಲಾಸ್ಟ್ ಕ್ಯಾಂಡಿಡೇಟ್ ಆಗಿ ಪ್ರತ್ಯಕ್ಷವಾದ ನಂತರ ಇದೇ ಮೊದಲ ಬಾರಿಗೆ ನೋಟಕ್ಕಾಗಿ ಭಾರಿ ಪ್ರಮಾಣದ ಪ್ರಚಾರ ನಡೆಯುತ್ತಿದೆ. ಇದೊಂದು ಐತಿಹಾಸಿಕ ಘಟನೆ ಅಂದ್ರೂ ತಪ್ಪಾಗಲಿಕ್ಕಿಲ್ಲ. ನಮಗೆ ಯಾವುದೇ ಅಭ್ಯರ್ಥಿಗಳು ಇಷ್ಟವಿಲ್ಲದೆ ಹೋದಲ್ಲಿ, ಅಥವಾ ನಮಗೆ ಯಾವ ಅಭ್ಯರ್ಥಿಯು ಕೂಡಾ ಸಮರ್ಥ ಅಲ್ಲ ಅನ್ನುವ ಸನ್ನಿವೇಶದಲ್ಲಿ ನೋಟ ಮತದಾನ ಮಾಡಲು ದೇಶದ ಸುಪ್ರೀಂ ಕೋರ್ಟ್ ಮತ್ತು ಅತ್ಯಂತ ಪಾರದರ್ಶಕ ವ್ಯವಸ್ಥೆಯಾದ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ.

ನಾವು ತೀರಾ ಸಂಕಷ್ಟದಲ್ಲಿರುವಾಗ, ಯಾವುದೇ ಸಂಘಗಳು, ಸಂಸ್ಥೆಗಳು, ರಾಜಕೀಯ ಪಕ್ಷಗಳು, ನೇತಾರರುಗಳು ಮತ್ತು ಕೋರ್ಟುಗಳು ಕೂಡ ನಮಗೆ ನ್ಯಾಯವನ್ನು ಒದಗಿಸಲು ಅಸಮರ್ಥವಾದಾಗ, ಜನ ತಮ್ಮ ಅಕ್ರೋಶವನ್ನು ಇನ್ಯಾರ ಬಳಿ ಹೇಳಿಕೊಳ್ಳಲಿ ಅಂದಾಗ ಇರುವ ಒಂದೇ ಸಾಧನ, ಅದು ನೋಟಾ ಮತದಾನ ! ಅದರಂತೆ ಈ ದಿನ ದೇಶದಲ್ಲಿ ನಡೆಯುವ ಯಾವುದೇ ಚುನಾವಣೆಯಲ್ಲಿ ಕೊನೆಯ ಅಭ್ಯರ್ಥಿಯಾಗಿ ನೋಟಾ ಅಂದರೆ none of the above ಅನ್ನುವ ಒಂದು ಅಭ್ಯರ್ಥಿಯೇ ಅಲ್ಲದ ಅಭ್ಯರ್ಥಿಯ ಆಯ್ಕೆಯನ್ನು ಮಾಡಲು ನಮಗೆ ಅವಕಾಶ ನೀಡಲಾಗಿದೆ. ಅಂದರೆ ‘ ನೋಟಾ ‘ ಅನ್ನೋದು ಒಟ್ಟಾರೆ ನಮ್ಮ ವ್ಯವಸ್ಥೆಯ ವಿರುದ್ಧದ ಅಸಮಾಧಾನದ ಪ್ರತೀಕ ಅನ್ನಬಹುದು.

ಮಂಗಳೂರಿನಲ್ಲಿ ಇದೀಗ ನಡೆಯುತ್ತಿರುವ ನೋಟ ಚಳವಳಿ ಐತಿಹಾಸಿಕ ಅನ್ನಲು ಕೂಡಾ ಕಾರಣವಿದೆ. ಕಾರಣ ದಿನದಿಂದ ದಿನಕ್ಕೆ ಅದು ಹಬ್ಬಿತ್ತಿರುವ ರೀತಿ. ಮೊದಲು ಸೌಜನ್ಯಾ ಹೋರಾಟಗಾರರ ಪಡಸಾಲೆಯಲ್ಲಿದ್ದ ನೋಟ ಓಟಿನ ಸುದ್ದಿ ಮೆಲ್ಲನೆ ಉಜಿರೆಯಲ್ಲಿ ಪ್ರಚಾರಕ್ಕೆ ಬಂತು. ದಿನಗಳೆದಂತೆ ಬೆಳ್ತಂಗಡಿ ತಾಲೂಕಿನ ಎಲ್ಲೆಡೆ ನೋಟಾ ಅಲೆ ಹಬ್ಬಿದೆ. ಈಗ ಬೆಳ್ತಂಗಡಿ ತಾಲ್ಲೂಕನ್ನು ಮೀರಿ ಪುತ್ತೂರಿನಲ್ಲಿ ನೋಟಾ ಹವಾ ಜೋರಾಗಿದೆ. ಉಳಿದಂತೆ ವಿಟ್ಲ, ಸುಳ್ಯ, ಕಡಬ ಬಂಟ್ವಾಳ ಮಂಗಳೂರು ಉಡುಪಿ ಮುಂತಾದ ಕಡೆಗಳಲ್ಲಿ ನೋಟಾ ಪ್ರಭಾವ ದಿನದಿಂದ ದಿನಕ್ಕೆ ಜ್ವರದ ರೂಪದಲ್ಲಿ ಏರಿಕೆ ಆಗ್ತಾನೇ ಇದೆ. ಕನಿಷ್ಠ 3 ಲಕ್ಷ ಮತಗಳು ನೋಟಾ ಬಗಲಿಗೆ ಬೀಳಲಿದೆ ಈಗಿನ ಅಂದಾಜು. ಹಾಗೊಂದು ವೇಳೆ 3 ಲಕ್ಷ ಮತ ಇಲ್ಲವಾದರೂ, ಕೇವಲ 52,000 ಮತ ನೋಟಾಕ್ಕೆ ಬಿದ್ದರೂ ಸಾಕು, ಮಂಗಳೂರು ಲೋಕಸಭಾ ಕ್ಷೇತ್ರ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗುತ್ತದೆ. ಆಗ ದೇಶ ಮಂಗಳೂರಿನ ಧರ್ಮಸ್ಥಳದತ್ತ ತಿರುಗಿ ನೋಡುತ್ತೆ !!!

ಬಿಹಾರದ ಗೋಪಾಲ್‌ಗಂಜ್ ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ನೋಟಾ

ಈ ಹಿಂದೆ 2019ರಲ್ಲಿ ಬಿಹಾರದ ಗೋಪಾಲ್‌ಗಂಜ್ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 51,660 ನೋಟಾ ಮತಗಳು ಚಲಾವಣೆಯಾಗಿದ್ದವು. ಅಲ್ಲಿ 2.8 % ಮತಗಳನ್ನು ನೋಟಾ ಗಳಿಸಿದ್ದು, ಅದೇ ಈ ವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಗಳಿಸಿದ ಅತ್ಯಧಿಕ ಮತವಾಗಿದೆ. ಅಷ್ಟೇ ಅಲ್ಲ, ಅದರ ಹಿಂದಿನ, 2014 ರ ಚುನಾವಣೆಗಳಲ್ಲಿ ಕೂಡ ಅದೇ ಗೋಪಾಲಗ0ಜ್ ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ ಪ್ರಮಾಣದ ನೋಟ ಮತದಾನ ಆಗಿತ್ತು. ಆಗ ಬರೋಬ್ಬರಿ 17,841 ನೋಟಾ ಮತಗಳನ್ನು ಆ ಕ್ಷೇತ್ರ ಕಂಡಿತ್ತು.

ಮಂಗಳೂರಿನಲ್ಲಿ ಯಾಕೆ ನೋಟಾ ಚಳವಳಿ ಅಂತ ಈಗ ಯಾರಿಗೂ ತಿಳಿಸಿ ಹೇಳೋ ಅಗತ್ಯ ಇಲ್ಲ. ಈಗ ವಿಷ್ಯ ಎಲ್ಲರಿಗೂ ತಿಳಿದಿದೆ: ಕಳೆದ 12 ವರ್ಷಗಳಿಂದ ತಮ್ಮ ಮಗಳ ಸಾವಿಗೆ ನ್ಯಾಯ ಕೇಳುತ್ತಾ ಧರ್ಮಸ್ಥಳ ಗ್ರಾಮದ ಪಾಂಗಳದ ಕುಸುಮಾವತಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಈ ಒಕ್ಕಲಿಗ ಬಡ ಮಹಿಳೆ ಸಹಾಯಕ್ಕೆ ಹಲವಾರು ಮುಖಂಡರು, ಮುಖ್ಯವಾಗಿ ಮಹೇಶ್ ಶೆಟ್ಟಿಯವರು ದಶಕಗಳ ಕಾಲ ಹೋರಾಟ ಕೈಗೊಳ್ಳುತ್ತಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಅಪರಾಧಗಳ ಮೂಟೆ ಹೆಗ್ಗಡೆ ಕುಟುಂಬ ಮತ್ತು ಸಹವರ್ತಿಗಳ ರಕ್ಷಣೆಗೆ ನಿಂತ ಪರಿಣಾಮವಾಗಿ, ನೋವು ತೋಡಿಕೊಳ್ಳಲು ಯಾವುದೇ ಅವಕಾಶವಿಲ್ಲದ ಅಸಹಾಯಕ ಸನ್ನಿವೇಶದಲ್ಲಿ ಇದೀಗ ದೇಶದ ಗಮನ ಸೆಳೆಯಲು ಹೊರಟಿದೆ ನೋಟಾ ಚಳವಳಿ. ಜನ ಜಾತಿ ಮತ ಧರ್ಮ ಮತ್ತು ಪಕ್ಷಭೇದ ಮರೆತು ನೋಟಾದತ್ತ ಒಲವು ತೋರಿದ್ದಾರೆ. ಈ ಮೂಲಕ ರಾಜಕೀಯ ಪಕ್ಷಗಳ ಲೆಕ್ಕಾಚಾರ ಅಡಿಮೇಲಾಗಿದ್ದು, ಮುಖ್ಯವಾಗಿ ಮಂಗಳೂರಿನಲ್ಲಿ ಬಿಜೆಪಿ ಪಕ್ಷವು ತತ್ತರಗೊಂಡಿದೆ. ನರೇಂದ್ರ ಮೋದಿಯನ್ನು ಹೊಗಳುತ್ತಲೇ, ಈ ಸಲ ಮಾತ್ರ ನೋಟಾ ಅನ್ನುತ್ತಿದ್ದಾರೆ. ಅಲೆ ಬಲು ಜೋರಾಗಿದೆ !

Leave A Reply

Your email address will not be published.