Teachers Transfer: ಶಿಕ್ಷಕರ ವರ್ಗಾವಣೆ; ಸಕಲ ಸಿದ್ಧತೆ ಮಾಡಿಕೊಂಡ ಶಿಕ್ಷಣ ಇಲಾಖೆ

Share the Article

Teachers Transfer: ಶಿಕ್ಷಕರ ವರ್ಗಾವಣೆಗೆ ಶಿಕ್ಷಕರು ಮಾಹಿತಿ ಸಲ್ಲಿಸಲು ನಿಗದಿಪಡಿಸಿದ್ದ ದಿನಾಂಕ ಪರಿಷ್ಕರಿಸಲಾಗಿದ್ದು, ವಲಯವಾರು ಶಿಕ್ಷಕರ ವರ್ಗಾವಣೆಗೆ ಅರ್ಹರ ಅಂತಿಮ ಪಟ್ಟಿಯನ್ನು ಏ.24ರಂದು ಶಿಕ್ಷಣ ಇಲಾಖೆ ಪ್ರಕಟಿಸಲಿದೆ.

ಇದನ್ನೂ ಓದಿ: Hubballi: ನೇಹಾ ಮತ್ತು ನನ್ನ ಮಗ ಫಯಾಜ್ ನಡುವೆ ಅಫೇರ್ ಇತ್ತು – ಅಚ್ಚರಿ ಸತ್ಯ ಬಿಚ್ಚಿಟ್ಟ ಫಯಾಜ್ ತಂದೆ

ಶಿಕ್ಷಣ ಇಲಾಖೆಯು ನೀತಿ ಸಂಹಿತೆ ಮೊದಲೇ ವರ್ಗಾವಣೆಗೆ ಅರ್ಜಿ ಆಹ್ವಾನಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಹಿಂದೆಯೇ ಶಿಕ್ಷಕರ ಮಾಹಿತಿಯನ್ನು ಅಪ್‌ ಲೋಡ್ ಮಾಡುವುದಕ್ಕೆ ಏ.18ರವರೆಗೆ ಅವಕಾಶ ನೀಡಿತ್ತು. ಇದನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿದ್ದು, ಶಿಕ್ಷಕರ ತಾತ್ಕಾಲಿಕ ಕರಡು ಪಟ್ಟಿಯನ್ನು ಏ.20ರಂದು ಪ್ರಕಟಿಸಲಿದೆ. ಆಕ್ಷೇಪಣೆಗಳಿದ್ದಲ್ಲಿ ಶಿಕ್ಷಕರು ಏ.22ರೊಳಗೆ ಸಲ್ಲಿಸಬೇಕಿದೆ. ಏ.23ರಂದು ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಏ.24ರಂದು ವಲಯವಾರು ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಅಂತಿಮ ಪಟ್ಟಿಯನ್ನು ಶಿಕ್ಷಣ ಇಲಾಖೆಯು ಪ್ರಕಟಿಸಲಿದೆ. ಶಾಲೆ ಆರಂಭವಾಗುವ ಮೊದಲು ಕೌನ್ಸೆಲಿಂಗ್ ಹೊರತಾಗಿ ಉಳಿಯುವ ಎಲ್ಲ ಕೆಲಸವನ್ನು ಮುಗಿಸಿ, ನೀತಿ ಸಂಹಿತೆ ಬಳಿಕ ಕೌನ್ಸೆಲಿಂಗ್‌ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: Peacock: ಬೆಳ್ಳಂಬೆಳಗ್ಗೆ ನೀವು ನವಿಲು ನೋಡುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ

ಶೇ.4ರಷ್ಟು (ಶೈಕ್ಷಣಿಕ ತಾಲೂಕಿನ ಒಳಗೆ) ವಲಯವಾರು, ಜಿಲ್ಲೆಯ ಒಳಗೆ ಶೇ.7ರಷ್ಟು ಕೋರಿಕೆ ವರ್ಗಾವಣೆ, ಶೇ.2ರಷ್ಟು ವಿಭಾಗವಾರು ವರ್ಗಾವಣೆ, ವಿಭಾಗದ ಹೊರಗೆ ಶೇ.2ರಷ್ಟು ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ.

Leave A Reply

Your email address will not be published.