Intresting News: ಮಕ್ಕಳು ಅತ್ತರು ಕಣ್ಣೀರು ಹಾಕುವುದಿಲ್ಲ ಯಾಕೆ ಗೊತ್ತಾ? : ಬಹಳ ಆಸಕ್ತಿದಾಯಕ ಸಂಗತಿ
Intresting News: ನವಜಾತ ಶಿಶುಗಳು ಅಳುವುದನ್ನು ಗಮನಿಸಿದ್ದೀರಾ? ಸಾಮಾನ್ಯವಾಗಿ ದೊಡ್ಡವರು ಅಳುತ್ತಿದ್ದರೆ ಕಣ್ಣೀರು ಬರುತ್ತದೆ. ಆದರೆ ಮಕ್ಕಳು ಅಳಿದಾಗ ಕಣ್ಣಲ್ಲಿ ನೀರು ಬರುವುದಿಲ್ಲ. ಇದರ ಹಿಂದೆ ಒಂದು ಕುತೂಹಲಕಾರಿ ಕಾರಣವಿದೆ.
ಇದನ್ನು ಓದಿ: Pushpa -2: “ಪುಷ್ಪಾ2” ಚಿತ್ರದ ಈ 6 ನಿಮಿಷದ ದೃಶ್ಯಕ್ಕೆ 60 ಕೋಟಿ ರು. ಖರ್ಚು
ತಾಯಿಯ ಹೊಟ್ಟೆಯಲ್ಲಿ ಪುಟ್ಟ ಭ್ರೂಣವೊಂದು ರೂಪುಗೊಂಡು ಒಂಬತ್ತು ತಿಂಗಳುಗಳ ಕಾಲ ಈ ಜಗತ್ತಿನಲ್ಲಿ ಬೆಳೆದ ನವಜಾತ ಶಿಶು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸುತ್ತದೆ. ನವಜಾತ ಶಿಶುಗಳು ಹಸಿದಿದ್ದರೂ ಅಥವಾ ಇಲ್ಲದಿದ್ದರೂ ಅಳುತ್ತವೆ. ಹಾಗೆ ಅತ್ತರೆ ಮಾತ್ರ ಮಗು ಆರೋಗ್ಯವಾಗಿರುತ್ತದೆಯೆಂದು ಅರ್ಥ. ಹುಟ್ಟಿದ ಮಗು ಅಳದಿದ್ದರೆ ತಾಯಿ ಹಾಗೂ ವೈದ್ಯರಿಗೂ ಆತಂಕಕ್ಕೊಳಗಾಗುತ್ತಾರೆ. ಮಗುವನ್ನು ಅಳಿಸಲು ವೈದ್ಯರು ವಿವಿಧ ತಂತ್ರಗಳನ್ನು ಬಳಸುತ್ತಾರೆ. ಮಗು ಅಳುತ್ತಿದ್ದರೆ ಹಮ್ಮಯ್ಯ ಎಂದು ಉಸಿರು ಬಿಡುತ್ತಾರೆ. ಆದರೆ ಮಕ್ಕಳು ಎಷ್ಟೇ ಆಳುತ್ತಿದ್ದರೂ ಏಕೆ ಕಣ್ಣೀರು ಬರುವುದಿಲ್ಲ ಗೊತ್ತಾ?
ಇದನ್ನೂ ಓದಿ: Women Health: ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನದ ಲಕ್ಷಣಗಳಿವು : ಅವು ಯಾವುವು ಗೊತ್ತಾ? : ಇಲ್ಲಿ ತಿಳಿಯಿರಿ
ಏಕೆಂದರೆ ಶಿಶುಗಳು ಜನಿಸಿದಾಗ, ಅವರ ಕಣ್ಣೀರಿನ ನಾಳಗಳು ಸಂಪೂರ್ಣವಾಗಿ ರೂಪುಗೊಂಡಿರುವುದಿಲ್ಲ. ಅವರ ಕಣ್ಣುಗಳಿಂದ ಕಣ್ಣೀರಿನ ಪ್ರಮಾಣವು ಸಾಕಾಗುವುದಿಲ್ಲ. ಆದ್ದರಿಂದ ಅವರು ಅಳುತ್ತಿದ್ದರೂ ಕಣ್ಣೀರು ಬರುವುದಿಲ್ಲ ಎರಡು ಅಥವಾ ಮೂರು ತಿಂಗಳ ನಂತರ ಶಿಶುಗಳಲ್ಲಿ ಕಣ್ಣೀರು ಬರಲು ಪ್ರಾರಂಭಿಸುತ್ತದೆ.
ಕಣ್ಣಿನ ಮೇಲಿನ ಕಣ್ಣುರೆಪ್ಪೆಯ ಕೆಳಗೆ ಬಾದಾಮಿ ಆಕಾರದ ಗ್ರಂಥಿಯಿದ್ದು, ಈ ಗ್ರಂಥಿಯಿಂದ ಕಣ್ಣೀರು ಬರುತ್ತದೆ. ಈ ಗ್ರಂಥಿಯು ಕಣ್ಣುಗಳಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಕಣ್ಣಿನ ಚಲನೆ ಸುಲಭವಾಗುತ್ತದೆ. ಕಣ್ಣೀರನ್ನು ಉತ್ಪಾದಿಸುವ ಈ ಗ್ರಂಥಿಯು ಮೋಡ ಮತ್ತು ಕೊಳವೆಯಂತೆ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.