VOTER ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಅಂತ ಚೆಕ್ ಮಾಡೋದು ಹೇಗೆ ?; ನಿಮ್ಮ ಮೊಬೈಲ್ ನಿಂದಲೇ ಇದು ಸಾಧ್ಯ !

Voter List: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈಗಾಗಲೇ ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಲು ಅರ್ಹರಾಗಿದ್ದು, ನೀವು ಮತದಾನ ಮಾಡಬೇಕೆಂದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಕಡ್ಡಾಯ.

ಇದನ್ನೂ ಓದಿ: Rolls Royce car: ಒಂದು ರೋಲ್ಸ್ ರಾಯ್ಸ್ ಕಾರು ತಯಾರಿಸಲು ಬೇಕು 8 ಗೂಳಿಗಳ ಚರ್ಮ – ಸೋ ಒಂದು ಕಾರಿಗೆ ಬೀಳುತ್ತೆ 8 ಗೂಳಿಗಳ ಬಲಿ !!

ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲದೆ ನಮ್ಮ ಜವಾಬ್ದಾರಿಯು ಹೌದು. ಚುನಾವಣಾ ಆಯೋಗವು ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತದೆ, ಇದರಲ್ಲಿ ಮತ ಚಲಾಯಿಸಲು ಅರ್ಹರಾಗಿರುವ ಎಲ್ಲಾ ವ್ಯಕ್ತಿಗಳನ್ನು ಪಟ್ಟಿಮಾಡಲಾಗಿರುತ್ತದೆ. ಮತದಾರರು ತಮ್ಮ ವಿವರಗಳ ಪರಿಶೀಲನೆಯನ್ನು ಖಚಿತಪಡಿಸಲು ಮತ್ತು ಅವರು ಯಾವ ಚುನಾವಣಾ ಜಿಲ್ಲೆ ಅಥವಾ ಮತಗಟ್ಟೆಗೆ ನಿಯೋಜಿಸಲಾಗಿದೆ ಎಂಬುದನ್ನು ಪರಿಶೀಲಿಸಲು ಮತದಾರರ ಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Parliament Election: ಪುಷ್ಪ-2 ನ ಪೋಸ್ಟರ್‌ ಗೆಟಪ್ಪಿನಲ್ಲಿ ಪ್ರಧಾನಿ ಮೋದಿ, ಮೋದಿಯ ಹೊಸ ಲುಕ್ ನೋಡಿ ಹುಚ್ಚೆದ್ದು ಹೋದ ಅಭಿಮಾನಿಗಳು, ಫೋಟೋ ವೈರಲ್‌ !

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ತಿಳಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ :-

* ಮೊದಲ ಹಂತದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://ceo.karnataka.gov.in/FinalRoll_2023/Dist_List.aspx

* ಎರಡನೇ ಹಂತದಲ್ಲಿ ನೀವು ಈ ಲಿಂಕ್ ಕ್ಲಿಕ್ ಮಾಡಿದ ಬಳಿಕ ಅದು ನಿಮ್ಮನ್ನು ನೇರವಾಗಿ ಜಿಲ್ಲಾವಾರು ಲೋಕಸಭಾ ಕ್ಷೇತ್ರಗಳ ಪಟ್ಟಿಯತ್ತ ಕೊಂಡುಯುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ.

* ಮೂರನೇ ಹಂತದಲ್ಲಿ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ಅದು ನಿಮ್ಮ ತಾಲೂಕು ಕೇಂದ್ರಗಳ ಪಟ್ಟಿಯನ್ನು ತೋರಿಸುತ್ತದೆ ಅಲ್ಲಿ ನಿಮ್ಮ ತಾಲೂಕನ್ನು ಆಯ್ಕೆ ಮಾಡಿ.

* ನಾಲ್ಕನೇ ಹಂತದಲ್ಲಿ ನಿಮ್ಮ ಊರಿನ ಭೂತ್ ಸಂಖ್ಯೆಯನ್ನು ಪರಿಶೀಲಿಸಿ, ಬಳಿಕ ನಿಮ್ಮ ಬೂತ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

2 Comments
  1. ofcDBCgxsKekQFX says

    OoFiYWyPr

  2. BktAfJySmdPgC says

    WdfetouEmTA

Leave A Reply

Your email address will not be published.