CET Exam 2024: ಸಿಇಟಿ ಪರೀಕ್ಷೆ ಆರಂಭ, ಜೀವಶಾಸ್ತ್ರ- ಗಣಿತದಲ್ಲಿ ಡಿಲೀಟ್ ಮಾಡಲಾದ ಪಠ್ಯದ ಪ್ರಶ್ನೆಗಳು, ತಲಾ 10 ಮಾರ್ಕ್ ಕಳಕೊಳ್ಳುವ ಆತಂಕದಲ್ಲಿ ವಿದ್ಯಾರ್ಥಿಗಳು !
CET Exam 2024: ಇಂದಿನಿಂದ ರಾಜ್ಯಾದ್ಯಂತ ಸಿಇಟಿ-2024 (CET Exam 2024) ಪರೀಕ್ಷೆ ಆರಂಭಗೊಂಡಿದೆ. ಇಂದು ಮತ್ತು ನಾಳೆ 2 ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದೆ. ಆದರೆ CET ಪರೀಕ್ಷೆಯ ಮೊದಲ ದಿನವೇ ವಿದ್ಯಾರ್ಥಿಗಳ ಟೆನ್ಶನ್ ಹೆಚ್ಚಿಸಿದೆ ಶಿಕ್ಷಣ ಇಲಾಖೆ. ಇಂದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆದಿದ್ದು ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯದಲ್ಲಿ ಡಿಲೀಟ್ ಮಾಡಲಾದ ವಿಷಯಗಳ 10 ಅಂಕಗಳ ಪ್ರಶ್ನೆಗಳು ಬಂದಿದ್ದು ವಿದ್ಯಾರ್ಥಿಗಳು ಗಾಬರಿಯಾಗಿದ್ದಾರೆ.
ಇಂದು ಬೆಳಿಗ್ಗೆ 10.30ಕ್ಕೆ ಮತ್ತು ಮಧ್ಯಾಹ್ನ 2.30ಕ್ಕೆ ಪರೀಕ್ಷೆ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಗಲಿಬಿಲಿ ಉಂಟಾಗಿದೆ. ಇಂದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆದಿದ್ದು, ಡಿಲೀಟ್ ಮಾಡಲಾದ ಪಠ್ಯದಿಂದ ಪ್ರಶ್ನೆಗಳನ್ನು ಆಯ್ಕೆ ಮಾಡಲಾಗಿದ್ದು ಸುಮಾರು 10 ಮಾರ್ಕೂಗಳಷ್ಟು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ, ವಿದ್ಯಾರ್ಥಿಗಳು. ಇದು ಮಕ್ಕಳ ಭವಿಷ್ಯದ ಜೊತೆ ಶಿಕ್ಷಣ ಇಲಾಖೆ ಆಟವಾಡುತ್ತಿರುವ ರೀತಿ.
ನಾಳೆ ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ವಿಶೇಷ ಅಂದ್ರೆ ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪ್ರಶ್ನೆಪತ್ರಿಕೆ ಇರಲಿದೆ. ಅವುಗಳಲ್ಲಿ ಇನ್ನೆಷ್ಟು ಪಠ್ಯೇತರ ಪ್ರಶ್ನೆಗಳು ಬರಲಿವೆಯೋ ಎಂಬ ಬಗ್ಗೆ ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ. ಈ ಒತ್ತಡದಲ್ಲಿ ವಿದ್ಯಾರ್ಥಿಗಳ ಅಧ್ಯಯನದ ಮೂಡೇ ಹೊರಟು ಹೋಗಿದೆ. ತಮ್ಮ ಭವಿಷ್ಯಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಿಇಟಿ ಎಂಬ ಸ್ಪರ್ಧಾರ್ಥಕ ಪರೀಕ್ಷೆ ಬರೆಯುತ್ತಿದ್ದು, ಅಲ್ಲಿ ಪಠ್ಯೇತರ ವಿಷಯಗಳಿಂದ ಪ್ರಶ್ನೆಗಳನ್ನ ಆಯ್ಕೆ ಮಾಡಿರುವುದು ಯಾಕೆ ? ಅಷ್ಟು ಮಾತ್ರದ ಕಾಮನ್ ಸೆನ್ಸ್ ಶಿಕ್ಷಣ ಇಲಾಖೆಗೆ ಇಲ್ಲವೇ ? ಯಾಕೆ ಈ ರೀತಿಯ ಬೇಜವಾಬ್ದಾರಿ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ಕರ್ನಾಟಕ ಶಿಕ್ಷಣ ಅಧಿಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಸಲದ CET ಪರೀಕ್ಷೆಯ ವಿಶೇಷ
ರಾಜಧಾನಿ ಬೆಂಗಳೂರಿನಲ್ಲಿಯೇ ಗರಿಷ್ಠ 167 ಪರೀಕ್ಷಾ ಕೇಂದ್ರಗಳಿದ್ದು, ಈ ಬಾರಿ 648 ವಿಶೇಷ ಚೇತನ ಅಭ್ಯರ್ಥಿಗಳು ಕೂಡಾ ಸಿಇಟಿ ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಒಂದು ಲಕ್ಷದಷ್ಟು ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗುತ್ತಿರುವುದು ವಿಶೇಷ. ಇನ್ನು, ಏಪ್ರಿಲ್ 20ರಂದು ಹೊರನಾಡು ಕನ್ನಡಿಗರಿಗೆ ಪರೀಕ್ಷೆ ಆಯೋಜಿಸಲಾಗಿದ್ದು, ಇದೇ 20ರಂದು ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಈ ಬಾರಿಯ ವಿಶೇಷ ಅಂದ್ರೆ ದಾಖಲೆಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಿದ್ದು, 2024ರ ಕರ್ನಾಟಕ ಕಾಮನ್ ಎಂಟ್ರ್ಯಾನ್ಸ್ ಟೆಸ್ಟ್ ಗೆ ದಾಖಲೆಯ 3,49,637 ಅಭ್ಯರ್ಥಿಗಳ ನೊಂದಣಿಯಾಗಿದೆ. ಸದ್ಯ ರಾಜ್ಯದಲ್ಲಿ 737 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿಯೇ 167 ಪರೀಕ್ಷಾ ಕೇಂದ್ರಗಳನ್ನ ಗುರುತಿಸಲಾಗಿದೆ. 737 ವೀಕ್ಷಕರು, 737 ವಿಶೇಷ ಜಾಗೃತ ದಳದ ಸದಸ್ಯರು 737 ಪ್ರಶ್ನೆಪತ್ರಿಕಾ ಪಾಲಕರು ಮತ್ತು 14,568 ಕೊಠಡಿ ಮೇಲ್ವಿಚಾರಕರು, 20,300 ಅಧಿಕಾರಿಗಳನ್ನು ನೇಮಿಸಲಾಗಿದೆ.
ಇದನ್ನೂ ಓದಿ: ಜನಸಾಮಾನ್ಯರಿಗೆ ಶಾಕ್; ವೋಟ್ ಮಾಡದವರ ಖಾತೆಯಿಂದ 350 ರೂ ಕಟ್?ಚುನಾವಣಾ ಆಯೋಗದಿಂದ ಬಿಗ್ ಅಪ್ಡೇಟ್