Home News Rahul Gandhi: ಎಡಗೈಯಲ್ಲಿ ದೀಪ ಹಚ್ಚಲು ಹೋದ ರಾಹುಲ್ ಗಾಂಧಿ – ತಿಳಿಹೇಳಿದ ಕೃಷ್ಣ ಬೈರೇಗೌಡ...

Rahul Gandhi: ಎಡಗೈಯಲ್ಲಿ ದೀಪ ಹಚ್ಚಲು ಹೋದ ರಾಹುಲ್ ಗಾಂಧಿ – ತಿಳಿಹೇಳಿದ ಕೃಷ್ಣ ಬೈರೇಗೌಡ !!

Hindu neighbor gifts plot of land

Hindu neighbour gifts land to Muslim journalist

 

Rahul Gandhi) ಮಂಡ್ಯದಲ್ಲಿ ನಡೆದ ಕಾಂಗ್ರೆಸ್(Congress) ಸಮಾವೇಶದ ಉದ್ಘಾಟನೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಎಡಗೈ ಅಲ್ಲಿ ದೀಪ ಹಚ್ಚಲು ಮುಂದಾಗಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಸಚಿವ ಕೃಷ್ಣ ಬೈರೇಗೌಡ(Krishna Bhyregowda) ಅವರು ತಕ್ಷಣ ಎಚ್ಚರಿಸಿ ಬಲಗೈಯಿಂದ ದೀಪ ಹಚ್ಚಿಸಿದ್ದಾರೆ.

ಹೌದು, ಲೋಕಸಭಾ ಚುನಾವಣೆಯ(Parliament Election) ದಿನಾಂಕ ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಮತ ಬೇಟೆಗೆಂದು ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಡ್ಯದಿಂದ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈ ವೇಳೆ ಅವರು ಸಮಾವೇಶದ ಉದ್ಘಾಟನೆ(Inauguration) ಸಮಯದಲ್ಲಿ ಕ್ಯಾಂಡಲ್ ಹಿಡಿದು ದೀಪ ಹಚ್ಚಲು ತಮ್ಮ ಎಡಗೈಯನ್ನು ಬಳಸಿದ್ದಾರೆ. ಆಗ ಪಕ್ಕದಲ್ಲಿದ್ದ ಸಚಿವ ಕೃಷ್ಣ ಬೈರೇಗೌಡ ಅವರು ತಕ್ಷಣ ಎಚ್ಚರಿಸಿ ಬಲಗೈಯಿಂದ ದೀಪ ಹಚ್ಚಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಬಿಜೆಪಿ(BJP) ಹಾಗೂ ಮಿತ್ರ ಪಕ್ಷಗಳು ರಾಹುಲ್ ಗಾಂಧಿ ಅವರನ್ನು ಟೀಕಿಸುವಾಗ, ಅವರ ವಿರುದ್ಧ ವಾಗ್ದಾಳಿ ನಡೆಸುವಾಗ ‘ರಾಹುಲ್ ಗಾಂಧಿಗೆ ನಮ್ಮ ಸಂಸ್ಕೃತಿ ತಿಳಿದಿಲ್ಲ, ಅವರು ವಿದೇಶಿ ಸಂಸ್ಕೃತಿಯನ್ನು ರೂಡಿಸಿಕೊಂಡವರು. ಭಾರತದ ಕುರಿತು, ನಮ್ಮ ಸಂಪ್ರದಾಯ, ನಂಬಿಕೆ ಕುರಿತು ಕೊಂಚವೂ ಕಾಳಜಿ ಇಲ್ಲದವರು ಎಂದು ಹೇಳುತ್ತಿರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ. ಅದಕ್ಕೆ ಇದೀಗ ಮತ್ತೊಂದು ನಿದರ್ಶನ ಸಾಕ್ಷಾಯಾಗಿದ್ದು ಟೀಕೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರಿದಂತಾಗಿದೆ.

ಅಲ್ಲದೆ ಪ್ರಧಾನಿ ಮೋದಿ ಅವರ ಎಷ್ಟೋ ಕಾರ್ಯಕ್ರಮಗಳು ಜನರನ್ನು ಹಿಡಿದಿಡುತ್ತವೆ. ದೀಪ ಹಚ್ಚುವುದರಿಂದ ಹಿಡಿದು ಪ್ರತೀ ವಿಚಾರವಾಗಿ ಮೋದಿಯವರು ಸಂಪ್ರದಾಯ, ಸಂಸ್ಕೃತಿಯನ್ನು ಪಾವಿಸುತ್ತಾರೆ. ಯಾವುದೇ ಕಾರ್ಯಕ್ರಮ, ಪೂಜೆ, ಪುನಸ್ಕಾರಗಳಿಗೆ ಹೋದಾಗ ಭಯ, ಭಕ್ತಿ ಎದ್ದು ತೋರುತ್ತದೆ. ಚಪ್ಪಲಿ ಕಳಚಿಡುವುದು, ಕೈ ಮುಗಿಯುವುದು, ನಮಸ್ಕರಿಸುವುದು, ಪ್ರಸಾದ ಸ್ವೀಕರಿಸುವುದರಿಂದ ಹಿಡಿದು ಪ್ರತಿಯೊಂದು ಜನರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಆದರೆ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಇದೆಲ್ಲದರಲ್ಲೂ ಹಿಂದೆ. ಹೀಗಾಗಿ ಅವರು ಹೆಚ್ಚಿನ ಭಾರತೀಯರ ಮನಸ್ಸಿನಿಂದ ದೂರವೇ ಇದ್ದಾರೆ ಎನ್ನಬಹುದು.