H D Devegowda: 9 ವರ್ಷದ ಹುಡುಗಿಯನ್ನು ಕಿಡ್ನಾಪ್ ಮಾಡಿ, ಕೂಡಿ ಹಾಕಿದ್ದ ಡಿ ಕೆ ಶಿವಕುಮಾರ್ – ದೇವೇಗೌಡರಿಂದ ಸ್ಪೋಟಕ ಸತ್ಯ ಬಹಿರಂಗ !!

H D Devegowda: ಬೆಂಗಳೂರಿನ(Bengaluru) ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿ, ರೂಮಿಗೆ ಕೂಡಿ ಹಾಕಿ ಡಿ ಕೆ ಶಿವಕುಮಾರ್ ಅವರು ಅವರ ಎಲ್ಲ ಆಸ್ತಿಯನ್ನು ಬರೆಸಿಕೊಂಡಿದ್ದಾರೆ. ಇದಕ್ಕೆ ಬಗ್ಗೆ ನನ್ನ ಬಳಿ ದಾಖಲೆಯಿದೆ ಇದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸ್ಪೋಟಕ ಸತ್ಯ ಹೊರಹಾಕಿದ್ದಾರೆ.

ಹೌದು, ಕಾಂಗ್ರೆಸ್(Congress) ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ(H D kumarswamy) ಅವರು ವಿವಾದಿತ ಹೇಳಿಕೆ ನೀಡಿದ್ದು, ಸದ್ಯ ಕಾಂಗ್ರೆಸ್‌ ನಾಯಕರು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬೆನ್ನಲ್ಲೇ ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್(D K Shivkumar) ಅವರು ಹೆಣ್ಣುಮಕ್ಕಳನ್ನು ಅಪಹರಿಸಿ (ಕಿಡ್ನಾಪ್) ಅವರ ಅಪ್ಪ-ಅಮ್ಮನಿಂದ ಜಮೀನು ಲಪಟಾಯಿಸಿದ್ದಾರೆ. ಇದು ನಿಜ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿ ರಾಜ್ಯಾದ್ಯಂತ ಹೊಸ ಚರ್ಚೆ ಹುಟ್ಟುಹಾಕಿದ್ದರು. ಇದೀಗ ಮಾಜಿ ಪ್ರಧಾನಿ ದೇವೇಗೌಡರು( H D Devegowda) ಕೂಡ ತಮ್ಮ ಮಗನ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

ಮೂಡಿಗೆರೆಯಲ್ಲಿ ಮಾತನಾಡಿದ ದೇವೇಗೌಡರು ‘ಅಮೇರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಡುತ್ತಾರೆ. ನಂತರ, ವ್ಯಕ್ತಿಯನ್ನು ಬೆದರಿಸಿ ಎಲ್ಲ ಆಸ್ತಿಯನ್ನು ಬರೆಸಿಕೊಳ್ಳುತ್ತಾರೆ. ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಜೀವನಕ್ಕಾಗಿ ಬೇರೆಯವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲದಕ್ಕೂ ನನ್ನ ಬಳಿ ದಾಖಲೆಯಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯನ್ನು ವಿವರಿಸಿದ ಅವರು ‘ಅಂದು ಅವರು ಐಟಿ ಕಂಪನಿ ಸ್ಥಾಪನೆ ಮಾಡಲು ಹೊರಟಿದ್ದರು.ಅದರ ಹಿಂದಿನ ದಿನ ಸ್ಟಾಪ್ ಪೇಪರ್ ತಂದು ನಕಲಿ ಕ್ರಯ ಮಾಡಿದರು. 9 ವರ್ಷದ ಬಾಲಕಿ ಕೂಡಿಹಾಕಿ ಆಸ್ತಿಯನ್ನು ಬರೆಸಿಕೊಂಡರು.ಬಾಲಕಿಯನ್ನ ಗಂಗಯ್ಯ ತಿಮ್ಮಯ್ಯ ಎಂಬುವರ ಮನೆ ಪಕ್ಕದಲ್ಲಿಟ್ಟಿದ್ದರು. ಆಸ್ತಿ ಬರೆಸಿಕೊಂಡಿದ್ದ ಕೇಸ್‌ ಅನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಹಾಕಿದರು. ಅಲ್ಲಿ ಅವರಿಗೆ ಭಾರಿ ಮುಖಭಂಗ ಆಯ್ತು. ಇದಾದ ನಂತರ ಆಸ್ತಿ ಮಾಲೀಕನ 9 ವರ್ಷದ ಮಗಳನ್ನ ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಡಿ ಇಡ್ತಾರೆ. ನಿನ್ನ ಮಗಳು ಬೇಕು ಅಂದ್ರೆ ಸಹಿ ಮಾಡು ಎಂದು ಬೆದರಿಸುತ್ತಾರೆ. ಆ ಮಗುವಿನ ತಾಯಿ ಎಲ್ಲಾ ಬರೆದುಕೊಟ್ಟು ನನ್ನ ಮಗಳ ಕರೆದುಕೊಂಡು ಬನ್ನಿ ಎಂದು ಗಂಡನ ಕಾಲು ಹಿಡಿಯುತ್ತಾಳೆ. ನಂತರ ವಿಧಿ ಇಲ್ಲದೆ ಇವರು ಆಸ್ತಿ ಬರೆದುಕೊಟ್ಟು ಮಗಳನ್ನು ಕರೆದೊಯ್ದರು.

ಇದಾದ ನಂತರ ಸಂಬಂಧಪಟ್ಟ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಿದ್ದೀಯೆಂದು ಚೆಕ್ ಕೊಡ್ತಾರೆ 16 ಲಕ್ಷ ರೂ. ಮೌಲ್ಯದ ಹಾಗೂ 4 ಲಕ್ ರೂ. ಮೌಲ್ಯದ ಎರಡು ಚೆಕ್ ಕೊಡುತ್ತಾರೆ. ಆದರೆ, ಅವರು ಕೊಟ್ಟ ಆ ಎರಡೂ ಚೆಕ್‌ಗಳು ಲ್ಯಾಪ್ಸ್ ಆಗುತ್ತವೆ. ಆಗ ವ್ಯಕ್ತಿಯ ಮುಂದೆ ಹೇಳ್ತಾರೆ ಏಯ್‌…. ಇದನ್ನ ಹೊರಗೆ ಹೇಳುದ್ರೆ ಕಬ್ಬನ್ ಪಾರ್ಕ್ ನಲ್ಲಿ ಏನಾಗುತ್ತೆ ಅಂತಾ ತಿಳ್ಕೋ ಎಂದು ಬೆದರಿಸುತ್ತಾರೆ ಎಂದು ಅಚ್ಚರಿ ವಿಚಾರವನ್ನೂ ತೆರೆದಿಟ್ಟಿದ್ದಾರೆ.

ಅಲ್ಲದೆ ಇದನ್ನ ಎಲೆಕ್ಷನ್ ನಲ್ಲಿ ಬಳಸಿಕೊಳ್ಳಿ ಎಂದು ಲಾಯರ್ ಒಬ್ಬರು ನನಗೆ ಸಂಪೂರ್ಣ ದಾಖಲೆ ತಂದುಕೊಟ್ಟರು. ನಾನು ಅನ್ಯಾಯಕ್ಕೊಳಗಾದ ವ್ಯಕ್ತಿಯ ಬಳಿಗೆ ಹೋದಾಗ ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ಓಟರ್ ಲಿಸ್ಟ್‌ನಲ್ಲಿಯೇ ಇಲ್ಲ. ಈ‌ ಕರ್ನಾಟಕ ಸಾಕು ಎಂದರು ಎಂದು ಬೇಸರ ವ್ಯಕ್ತಪಡಿಸಿದ್ದನ್ನು ಹೇಳಿದ್ದಾರೆ.

Leave A Reply

Your email address will not be published.