2nd PU ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯಲು ಇಂದು ಕೊನೇ ದಿನ !!

2nd PU Exam: ಕೆಲ ದಿನಗಳ ಹಿಂದೆ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1 ರಿಸಲ್ಟ್‌ ಪ್ರಕಟವಾಗಿದ್ದು, ಈ ಪರೀಕ್ಷೆ ಫಲಿತಾಂಶ ಪಡೆದ ವಿದ್ಯಾರ್ಥಿಗಳು ತಮಗೇನಾದರು ಗೊಂದಲವಿದ್ದಲ್ಲಿ ತಮ್ಮ ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ಬೇಕಾದಲ್ಲಿ ಅರ್ಜಿ ಹಾಕಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಹೀಗಾಗಿ ಪ್ರತಿ ಪಡೆಯಲು ಇಂದೇ ಏಪ್ರಿಲ್ 16 ಕೊನೇ ದಿನಾಂಕ. ಯಾರಿಗೆಲ್ಲಾ ತಮ್ಮ ಉತ್ತರ ಪತ್ರಿಕೆಯ ಸ್ಕ್ಯಾನಡ್ ಪ್ರತಿ ಬೇಕೋ ಅವರು ಇಂದು ಆದಷ್ಟು ಬೇಗ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: DK Shivakumar: ಡಿಕೆ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡರೆ 50 ಕೋಟಿ ಕೊಡುತ್ತೇನೆ – ಬೆಳಗಾವಿಯಲ್ಲಿ ಯತ್ನಾಳ್ ಘೋಷಣೆ

ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ(Scand Copy) ಅರ್ಜಿ‌ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಆನ್‌ಲೈನ್ ಹೊರತುಪಡಿಸಿ, ಮತ್ಯಾವುದೇ ಮಾರ್ಗದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ. ಹಣವನ್ನು ಆನ್ಲೈನ್ ಅಥವಾ ಹಣದ ಮೂಲಕವೂ ಪಾವತಿಸಬಹುದು.

ಇದನ್ನೂ ಓದಿ: Dark Chocolate: ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ : ತ್ವಚೆಯ ಹಾನಿ ಕಡಿಮೆಮಾಡಿ, ತ್ವಚೆ ಹೊಳೆಯುವಂತೆ ಮಾಡುತ್ತದೆ

ಅಲ್ಲದೆ ವಿದ್ಯಾರ್ಥಿಗಳು ತಾವು ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ / ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವ ವಿಷಯಗಳಿಗೆ ಮರುಎಣಿಕೆಗಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಇಲ್ಲೂ ಕೂಡ ಆನ್‌ಲೈನ್ ಹೊರತುಪಡಿಸಿ, ಮತ್ಯಾವುದೇ ಮಾರ್ಗದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ. ಹಣವನ್ನು ಆನ್ಲೈನ್ ಅಥವಾ ಹಣದ ಮೂಲಕವೂ ಪಾವತಿಸಬಹುದು. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂಪಾಯಿ ಆಗಿರುತ್ತದೆ.

ಉತ್ತರ ಪತ್ರಿಕೆಗಳ ಸ್ಯಾನ್ಸ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

• ಮಂಡಳಿಯ ವೆಬ್‌ಸೈಟ್‌ https://kseab.karnataka.gov.in ರಲ್ಲಿನ ಮುಖಪುಟ (HOME PAGE) ದಲ್ಲಿ Application for Scanned copies, Re- valuation/Re-totalling ಎಂದು ಇರುತ್ತದೆ.

• ಅಲ್ಲಿ Link ಅನ್ನು ಕ್ಲಿಕ್ ಮಾಡಿದರೆ Calender of Events ಪುಟ ತೆರೆಯುತ್ತದೆ.

• ಇದರಲ್ಲಿ “How to Apply ಅನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳುವುದು.

• 2024ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ನೋಂದಣಿ ಸಂಖ್ಯೆ (Register Number) ಯನ್ನು ಪ್ರವೇಶ ಪತ್ರದಲ್ಲಿರುವಂತೆ ನಮೂದಿಸಬೇಕು. ತಕ್ಷಣವೇ ವಿದ್ಯಾರ್ಥಿಗಳ ಮಾಹಿತಿ ಕಾಣುತ್ತದೆ.

• Scanned copy ಪಡೆಯಲು ಇಚ್ಚಿಸಿದ ವಿಷಯ/ ವಿಷಯಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯ/ಪೋಷಕರ ನಿಖರವಾದ ಮೊಬೈಲ್ ಸಂಖ್ಯೆ, ತಮ್ಮ ಖಾಸಗಿ ಇ-ಮೇಲ್ ಐಡಿ ಹಾಗೂ ಸ್ವ-ವಿಳಾಸವನ್ನು ಮಾತ್ರ ನಮೂದಿಸಬೇಕು. ನಂತರ Submit ಬಟನ್ ಕ್ಲಿಕ್ ಮಾಡಿದ ಕೂಡಲೇ ಚಲನ್ ಸಂಖ್ಯೆಯು Auto-Generate ಆಗುತ್ತದೆ.

• “Make payment” ಬಟನ್‌ ಕ್ಲಿಕ್‌ ಮಾಡಿದ ನಂತರ “Cash payment” ಅಥವಾ “Online payment” ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.

Online payment ಮಾಡುವ ವಿಧಾನ 

• Karnataka-one ಬಟನ್ ಕ್ಲಿಕ್ ಮಾಡುವುದು,

ನೀವು ದಾಖಲಿಸಿದ ಮಾಹಿತಿ ಕಾಣಿಸುತ್ತದೆ.

• “pay now” ಬಟನ್ ಕ್ಲಿಕ್ ಮಾಡುವುದು.

Karnataka-one a continue for payment ಆಯ್ಕೆ ಮಾಡುವುದು.

• ಇದರಲ್ಲಿ “Terms and conditions” ಅನ್ನು ಕಡ್ಡಾಯವಾಗಿ ಓದಿ “check box” ಮೇಲೆ ಕ್ಲಿಕ್‌ ಮಾಡುವುದು

• continue for payment ಆಯ್ಕೆ ಮಾಡುವುದು.

ನಂತರ “pay now” ಕ್ಲಿಕ್ ಮಾಡುವುದು.

• Processing ಆಗುವವರೆಗೆ “Back button”/”Close button” ಅಥವಾ ” “Refresh button”ಗಳನ್ನು ಒತ್ತಬೇಡಿ.

• “Online payment” ಮುಖಾಂತರ ಹಣ ಸಂದಾಯ ಆದ ನಂತರ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರುತ್ತದೆ.

• SMS ಸಂದೇಶ ಬಾರದಿದ್ದಲ್ಲಿ ಹಣ ಸಂದಾಯಿಸಿದ Karnataka-one ಅನ್ನು ಕೂಡಲೇ ಸಂಪರ್ಕಿಸಿ.

Cash payment ಮಾಡುವುದು:

• UNION BANK OF INDIA (CORPORATION BANK), BANGALORE-ONE, KARNATAKA-ONE, GRAMA-ONE ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ‘ Generate challan’ ಬಟನ್ ಕ್ಲಿಕ್ ಮಾಡಬೇಕು.

• ಚಲನ್‌ನಲ್ಲಿ ತಾವು ದಾಖಲಿಸಿದ ಮಾಹಿತಿ ಕಾಣಿಸುತ್ತದೆ. ನಂತರ ಚಲನ್ ಪ್ರಿಂಟ್ ತೆಗೆದುಕೊಳ್ಳುವುದು.

• ಆಯ್ಕೆ ಮಾಡಿದ ಚಲನ್ ಪ್ರಿಂಟ್ ತೆಗೆದುಕೊಂಡು, ನಂತರ ಚಲನ್ ಮುಖಾಂತರ ಹಣವನ್ನು ಮಂಡಲಿಯು ನಿಗದಿಪಡಿಸಿದ ದಿನಾಂಕದೊಳಗೆ ಸಂದಾಯ ಮಾಡುವುದು. * ಮಂಡಲಿಯು ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಸಂದಾಯ ಮಾಡಲಾಗುವ ಚಲನ್/ಆನ್‌ಲೈನ್ ಪಾವತಿಗಳನ್ನು ಕಡ್ಡಾಯವಾಗಿ ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.

Leave A Reply

Your email address will not be published.