Home Karnataka State Politics Updates Indian Railway: ರೈಲ್ವೆ ಪ್ರಯಾಣಿಕರೆ ಗಮನಿಸಿ – ಟಿಕೆಟ್ ಬುಕ್ ಮಾಡಲು ಹೊಸ ರೂಲ್ಸ್ ಜಾರಿ...

Indian Railway: ರೈಲ್ವೆ ಪ್ರಯಾಣಿಕರೆ ಗಮನಿಸಿ – ಟಿಕೆಟ್ ಬುಕ್ ಮಾಡಲು ಹೊಸ ರೂಲ್ಸ್ ಜಾರಿ !!

Hindu neighbor gifts plot of land

Hindu neighbour gifts land to Muslim journalist

Indian Railway : ಭಾರತೀಯ ರೈಲ್ವೆ(Indian Railway) ಇಲಾಖೆಯು ತನ್ನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲೆಂದು ಹಲವು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅಂತೆಯೇ ಇದೀಗ ಹಿರಿಯ ನಾಗರೀಕರಿಗೆ ನೆರವಾಗುವಂತೆ ಇಲಾಖೆಯು ಲೋವರ್ ಬರ್ತ್ ರಿಸರ್ವೇಶನ್ಗೆ(Lower birth Resrvetion ) ಹೊಸ ನಿಯಮ ಜಾರಿಗೆ ತಂದಿದೆ.

ಇದನ್ನೂ ಓದಿ: Malaika Arora: ಮೇಕಪ್ ಇಲ್ಲದೆ ಕಾಣಿಸಿಕೊಂಡ ಹಾಟ್ ಬ್ಯೂಟಿ ಮಲೈಕಾ ಅರೋರಾ : 50 ವರ್ಷಗಳಲ್ಲಿ ಸ್ವಲ್ಪವೂ ಕಡಿಮೆಯಾಗದ ಫಿಟ್ನೆಸ್

ಭಾರತೀಯ ರೈಲ್ವೆ ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಲಕ್ಷಾಂತರ ಜನ ದಿನನಿತ್ಯ ಸಂಚರಿಸುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆಯು ಬಹಳಷ್ಟು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಹೈಟೆಕ್ ವ್ಯವಸ್ಥೆಗಳನ್ನು ಕಲ್ಪಿಸಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿ ಕೊಡುತ್ತಿದೆ. ಇದರೊಂದಿಗೆ ಹಲ-ಕೆಲವು ನಿಯಮಗಳನ್ನು ಜಾರಿಗೊಳಿಸುತ್ತದೆ. ಈ ಬೆನ್ನಲ್ಲೇ ಹಿರಿಯ ನಾಗರಿಕರ ಪ್ರಯಾಣಕ್ಕೆ ಲೋ ಬರ್ತ್‌ಗಳನ್ನು ಕಾಯ್ದಿರಿಸುವುದಕ್ಕೆ ಆದ್ಯತೆ ನೀಡುವ ಹೊಸ ನಿಯಮವನ್ನು ರೈಲ್ವೆ ತಂದಿದೆ.

ಇದನ್ನೂ ಓದಿ: Bengaluru Rural : ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್’ಗೆ ಬೆಂಬಲ ನೀಡಿದ್ದಕ್ಕೆ ತೆಂಗಿನ ತೋಟಕ್ಕೆ ಬೆಂಕಿ ಇಟ್ಟ ಪಾಪಿಗಳು – ಮುಗಿಲು ಮುಟ್ಟಿದ ರೈತನ ಗೋಳು !!

ಏನದು ಗುಡ್ ನ್ಯೂಸ್ ?

ರೈಲು ಪ್ರಯಾಣದ ಸಮಯದಲ್ಲಿ ಹಿರಿಯ ನಾಗರಿಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ರೈಲ್ವೆ ಇಲಾಖೆಯ ಆದೇಶದ ಅನ್ವಯ, ಪ್ರಯಾನಿಕರು ಬುಕ್ಕಿಂಗ್ ಸಮಯದಲ್ಲಿ ಕಡ್ಡಾಯವಾಗಿ ರಿಸರ್ವೇಶನ್ ಆಯ್ಕೆಯನ್ನು ಮಾಡಬೇಕು. ಜನರಲ್ ಕೋಟಾದವರು ಮಾತ್ರವಲ್ಲದೇ, ಸೀಟು ರಿಸರ್ವೇಶನ್ ಸಂದರ್ಭದಲ್ಲೂ ಆಯ್ಕೆ ಮಾಡಬೇಕು. ರಿಸವೇಶನ್ ಆಯ್ಕೆ ಮಾಡಿಕೊಳ್ಳುವುದರಿಂದ ಲೋವರ್ ಬರ್ತ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಆದಷ್ಟು ಬೇಗ ಕಾಯ್ದಿರಿಸಬೇಕಾದವರಿಗೆ ಲೋವರ್ ಬರ್ತ್ ಸಿಗುತ್ತದೆ ಎಂದು ಅದು ಸೂಚನೆ ನೀಡಲಾಗಿದೆ.

ಅಂದಹಾಗೆ ಆರೋಗ್ಯ ಸಮಸ್ಯೆ ಇರುವ ವೃದ್ಧ ಸಂಬಂಧಿಯೊಬ್ಬರಿಗೆ ಲೋವರ್ ಬರ್ತ್ ಬುಕ್ ಮಾಡಿದ್ದರೂ ಮೇಲಿನ ಬರ್ತ್‌ಗಳ ಹಂಚಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದರೊಂದಿಗೆ ರೈಲ್ವೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಹೊಸ ನಿಯಮ ತಂದಿದ್ದಾರೆ.