Dark Chocolate: ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ : ತ್ವಚೆಯ ಹಾನಿ ಕಡಿಮೆಮಾಡಿ, ತ್ವಚೆ ಹೊಳೆಯುವಂತೆ ಮಾಡುತ್ತದೆ
Dark Chocolate: ಡಾರ್ಕ್ ಚಾಕೊಲೇಟ್ ನಮ್ಮ ಆರೋಗ್ಯಕ್ಕೆ ತುಂಬು ಒಳ್ಳೆಯದು ಎಂದು ಈಗಾಗಲೇ ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಡಾರ್ಕ್ ಚಾಕೊಲೇಟ್ ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಒಳ್ಳೆಯದು. ಡಾರ್ಕ್ ಚಾಕೊಲೇಟ್ ಪ್ಲೇವನಾಯ್ಡ್ಗಳಲ್ಲಿ ಸಮೃದ್ಧವಾಗಿದ್ದು, ಇವು ನಮ್ಮ ಮೆದುಳಿನ ಕಾರ್ಯ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತವೆ. ಈಗ ಡಾರ್ಕ್ ಚಾಕೊಲೇಟ್ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.
ಇದನ್ನೂ ಓದಿ: DK Shivakumar: ಡಿಕೆ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡರೆ 50 ಕೋಟಿ ಕೊಡುತ್ತೇನೆ – ಬೆಳಗಾವಿಯಲ್ಲಿ ಯತ್ನಾಳ್ ಘೋಷಣೆ
ನಿಯಮಿತ ಡೋಸ್‌ಗಳಲ್ಲಿ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಒತ್ತಡವನ್ನು ಕಡಿಮೆ ಮಾಡಬಹುದು ಹಾಗೆಯೇ ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಡಾರ್ಕ್ ಚಾಕೊಲೇಟ್ ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಡಾರ್ಕ್ ಚಾಕೊಲೇಟ್ ಕ್ಯಾಲೋರಿಗಳಿಂದ ತುಂಬಿದ್ದರೂ, ತೂಕ ನಷ್ಟಕ್ಕೆ ಇದು ಒಳ್ಳೆಯದು.
ಇದನ್ನೂ ಓದಿ: Hyderabad: 60 ವರ್ಷದ ವ್ಯಕ್ತಿಯ ದೇಹದಿಂದ 418 ಕಿಡ್ನಿ ಕಲ್ಲುಗಳನ್ನು ತೆಗೆದ ವೈದ್ಯರು : ಹೈದರಾಬಾದ್ ವೈದ್ಯರ ಅಪರೂಪದ ಸಾಧನೆ
ಡಾರ್ಕ್ ಚಾಕೊಲೇಟ್ ನಮ್ಮ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ನಮ್ಮ ದೇಹದಲ್ಲಿ ನೈಟ್ರಿಕ್ ಆಡ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಹೆಚ್ಚಿನ ಪ್ರಮಾಣದ ಮೆಗ್ನಿಶಿಯಮ್ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ಮಧುಮೇಹ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ. ಇವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸುಧಾರಿಸುತ್ತದೆ. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಹಸಿವನ್ನು ನಿಯಂತ್ರಿಸಬಹುದು. ಅಲ್ಲದೆ, ಈ ಚಾಕೊಲೇಟ್ ಕರುಳಿನಲ್ಲಿ ಉತ್ತಮ ಬ್ಯಾಕ್ಟಿರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇವು ಕ್ಯಾನ್ಸರ್ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತವೆ ಎನ್ನುತ್ತಾರೆ ತಜ್ಞರು.
ಇದರಲ್ಲಿರುವ ಥಿಯೋಟ್ರೋಮಿನ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಎನ್-ಅಸಿಲ್ ಎಥೆನೊಲಮೈನ್‌ಗಳು (ಯುಫೋರಿಕ್ ಪರಿಣಾಮವನ್ನು ಹೊಂದಿರುವ ಕೊಬ್ಬಿನಾಮ್ಲ) ಮತ್ತು ಫೆನೈಲೆಥೈಲಮೈನ್ (ಡೋಪಮೈನ್ ಉತ್ತೇಜಕ) ಸಹ ಖಿನ್ನತೆಯನ್ನು ನಿವಾರಿಸುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಮೆಗ್ನಿಶಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದ ನೋವನ್ನು ನಿವಾರಿಸುತ್ತದೆ.
ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಾಕಲೇಟ್‌ಗಳನ್ನು ಇಷ್ಟಪಡುತ್ತಾರೆ. ಆದಾಗ್ಯೂ, ಡಾರ್ಕ್ ಚಾಕೊಲೇಟ್ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಈ ಚಾಕಲೇಟ್‌ಗಳನ್ನು ಮಿತ ಪ್ರಮಾಣದಲ್ಲಿ ತಿಂದರೆ ನಮ್ಮ ತ್ವಚೆಯು ಆರೋಗ್ಯಕರವಾಗಿರುತ್ತದೆ. ಇದು ವಯಸ್ಸಾದ ಚರ್ಮವನ್ನು ಕಡಿಮೆ ಮಾಡುತ್ತದೆ.
yklr06