US: ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲವ್ವಿ ಡವ್ವಿ – ಬೆತ್ತಲೆಯಾಗಿಯೇ ಪೋಲಿಸರಿಗೆ ತಗಲಾಕ್ಕೊಂಡ್ಲು !!

US: ಅಮೆರಿಕಾದ(US) ನ್ಯೂಜೆರ್ಸಿಯಲ್ಲಿ ಮದುವೆಯಾದ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯೊಂದಿಗೆ ಲವ್ವಿ ಡವ್ವಿ ನಡೆಸಿ ಸಿಕ್ಕಿಬಿದ್ದು ಜೈಲು ಪಾಲಾಗಿರುವ ಘಟನೆ ನಡೆದಿದೆ.

 

ಇದನ್ನೂ ಓದಿ: Parliment Election: ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರಕ್ಕೆ ಜನರೇ ಸಂಗ್ರಹಿಸಿ ಕೊಟ್ಟರು 50 ಲಕ್ಷ !!

ಹೌದು, ಜೆಸ್ಸಿಕಾ ಸಾವಿಕಿ(Jessica Savika) ಎಂಬ 37ರ ಶಿಕ್ಷಕಿ ಬಾಲಕ ಓದುತ್ತಿದ್ದ ಟ್ರೆಂಟನ್‌ನಲ್ಲಿರುವ ಹ್ಯಾಮಿಲ್ಟನ್ ಹೈಸ್ಕೂಲ್ ವೆಸ್ಟ್ ಶಾಲೆಯಲ್ಲಿ ಇಂಗ್ಲೀಷ್ ಶಿಕಕ್ಷಿಯಾಗಿ(English teacher) ಕಾರ್ಯ ನಿರ್ವಹಿಸುತ್ತಿದ್ದಳು. ಕರ್ತವ್ಯ ನಿರ್ವಹಿಸುತ್ತಲೇ ಈಕೆ ತನ್ನ ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಅಲ್ಲದೆ ಐದಕ್ಕೂ ಹೆಚ್ಚು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿಯೂ ತಿಳಿದುಬಂದಿದೆ.

ಇದನ್ನೂ ಓದಿ: Accident: ಟ್ರಕ್ ಮತ್ತು ಕಾರಿನ ನಡುವೆ ಬೀಕರ ರಸ್ತೆ ಅಪಘಾತ : ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ 7 ಜನ ಸಜೀವ ದಹನ

ಅಂದಹಾಗೆ ಅಸ್ಸನ್‌ಪಿಂಕ್ ವನ್ಯಜೀವಿ ನಿರ್ವಹಣಾ ಪ್ರದೇಶದಲ್ಲಿ ಕಾರಿನಲ್ಲಿ ಶಿಕ್ಷಕಿ ಹಾಗೂ ವಿದ್ಯಾರ್ಥಿ ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಶಿಕ್ಷಕಿ ಹಾಗೂ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.

ಪೋಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ ನಂತರ ವಿಚಾರಣೆ ನಡೆಸಿದಾಗ ಶಿಕ್ಷಕಿಯು ವಿದ್ಯಾರ್ಥಿಯೊಂದಿಗೆ ಐದಕ್ಕೂ ಹೆಚ್ಚು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದು, ಅಪ್ರಾಪ್ತನಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕನನ್ನು ಕೌನ್ಸಿಲಿಂಗ್‌ಗೆ ಕಳುಹಿಸಲಾಗಿದೆ.

Leave A Reply

Your email address will not be published.