Mysore : ಮೋದಿ ಸಮಾವೇಶ ನಡೆದ ಜಾಗದಲ್ಲಿ ಕಸ ಆರಿಸಿದ ಮೈಸೂರಿನ ರಾಜ – ರಾಣಿ !!

Mysore: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಮಾವೇಶ ನಡೆದ ಜಾಗದಲ್ಲಿ ರಾಶಿ ಬಿದ್ದಿದ್ದ ಕಸವನ್ನು ಮೈಸೂರು ರಾಜ ಮನೆತನದ ರಾಜ-ರಾಣಿಯರು ಆರಿಸಿ ಸ್ವಚ್ಛ ಮಾಡಿದ್ದಾರೆ.

 

ಇದನ್ನೂ ಓದಿ: Canada: ‘ಡಾಕ್ಟ್ರೇ, ಡಾಕ್ಟ್ರೇ ಪ್ಲೀಸ್ ಈ ಎರಡು ಕೈ ಬೆರಳು ಕತ್ತರಿಸಿ’ ಎಂದು ಹಠ ಹಿಡಿದ ಯುವಕ – ಕಾರಣ ?

ಹೌದು, ಲೋಕಸಭಾ ಚುನಾವಣೆಯ(Parliament Election) ನಿಮಿತ್ತ ಕರ್ನಾಟಕದಲ್ಲಿ ಮತ ಬೇಟೆಯಾಡಲು ಮೈಸೂರಿಗೆ(Mysore) ಆಗಮಿಸಿದ ಪ್ರಧಾನಿ ಮೋದಿಯವರು ನಿನ್ನೆ(ಏ. 14) ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಅಭೂತಪೂರ್ವ ಸಮಾವೇಶದಲ್ಲಿ ಪಾಲ್ಗೊಂಡರು. ಈ ಸಮಾವೇಶ ನಡೆದ ಜಾಗದಲ್ಲಿ ಕಸದ ರಾಶಿಯೇ ತುಂಬಿತ್ತು. ಆದರೆ ಇಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ(BJP) ಅಭ್ಯರ್ಥಿಯಾದ ಮೈಸೂರು ಮಹಾರಾಜ ಯದುವೀರ ಒಡೆಯರ್(Yaduveer Wadiyar) ಅವರು ಹಾಗೂ ಅವರ ಪತ್ನಿ ರಾಣಿ ತ್ರಿಷಿಕಾ(Trishika) ದೇವಿಯವರು ಕಸವನ್ನು ಆರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: MLA Ashok Rai: ದೈವದ ವಿಚಾರದಲ್ಲಿ ಬಿಜೆಪಿಯವರ ಸಿದ್ಧಾಂತವೇ ಬೇರೆ : ದೈವಕ್ಕೆ ನ್ಯಾಯ ಕೊಡಿಸಲು ಇವರು ಯಾರು? : ಪುತ್ತೂರು ಶಾಸಕ ಅಶೋಕ್ ರೈ

ಈ ಕುರಿತಂತೆ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು ಕೊಂಚವೂ ಅಹಂ ಇಲ್ಲದೆ ಪ್ಲಾಸ್ಟಿಕ್ ಚೀಲ ಹಿಡಿದು ರಾಜ-ರಾಣಿ ಇಬ್ಬರೂ ಬಿಸಿಲನ್ನು ಲೆಕ್ಕಿಸದೆ ಕಸವನ್ನು ಹೆಕ್ಕುತ್ತಾ ಮೈದಾನವನ್ನು ಸ್ವಚ್ಚಗೊಳಿಸಿದ್ದಾರೆ. ರಾಜ-ರಾಣಿ ನಡೆಗೆ ಮತದಾರರು, ಜನರುಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.