Free Bus: ಇನ್ನು ರಾಜ್ಯದಲ್ಲಿ ಪುರುಷರಿಗೂ ಉಚಿತ ಬಸ್ ಪ್ರಯಾಣ : ಸುಳಿವು ನೀಡಿದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ರಾಯರೆಡ್ಡಿ

Share the Article

Free Bus: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಈಗಾಗಲೇ ಮಹಿಳೆಯರಿಗಾಗಿ. ಸ್ತ್ರೀ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸಿದೆ ಇದೀಗ ಪುರುಷರಿಗೂ ಸಹ ಉಚಿತ ಬಸ್ ಪ್ರಯಾಣ ಕಲ್ಪಿಸುವುದಕ್ಕಾಗಿ ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರು ಬಸವರಾಜ ರಾಯರೆಡ್ಡಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: PM Modi: ಮೋದಿ ರೋಡ್ ಶೋ ವೇಳೆ ಮಹಿಳೆಗೆ ನಂಬರ್ ನೀಡಿದ ಯುವಕ : ಎರಡು ಯುವ ಗುಂಪುಗಳ ನಡುವೆ ವಾಗ್ವಾದ

ಇದೀಗ ಲೋಕಸಭಾ ಚುನಾವಣೆ ಬೇರೆ ಸಮೀಪಿಸುತ್ತಿದ್ದು, ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ 65 ವರ್ಷ ಮೇಲ್ಪಟ್ಟ ಪುರುಷರಿಗೂ ಸಹ ಉಚಿತ ಪ್ರಯಾಣ ಕಲ್ಪಿಸುವಂತೆ ಬಸವರಾಜು ರಾಯರೆಡ್ಡಿ ಸಲಹೆ ತಿಳಿಸಿದ್ದಾರೆ.

ಇದನ್ನೂ ಓದಿ: Dakshina Kannada: ಹಿಂದೂ ಸಂಘಟನೆ ಮುಖಂಡನ ಕುತ್ತಿಗೆಗೆ ಚಾಕು ಇರಿತ : ಸ್ನೇಹಿತನೆಂದಲೇ ದುಷ್ಕೃತ್ಯ : ಜೀವನ್ಮರಣ ಹೋರಾಟದಲ್ಲಿ ಹಿಂದೂ ಮುಖಂಡ

ಮಾಧ್ಯಮಗಳ ಜೊತೆ ಮಾತನಾಡಿ, ಈಗಾಗಲೇ ನನ್ನನ್ನು ಹಣಕಾಸು ಸಚಿವನನ್ನಾಗಿ ಮಾಡುವಂತೆ ಕೇಳಿದ್ದೇನೆ, ಒಂದು ವೇಳೆ ನಾನು ಹಣಕಾಸು ಸಚಿವನಾದರೆ ಹಲವು  ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ.

ಪುರುಷರಿಗೂ ಉಚಿತ ಬಸ್ ಪ್ರಯಾಣ ಕಲ್ಪಿಸಲು ಈ ಬಾರಿ ಬಜೆಟ್ ನಲ್ಲಿ ಯೋಜಿಸಿದ್ದೆ. ಮುಂದಿನ ದಿನಗಳಲ್ಲಿ 65 ವರ್ಷ ಮೇಲ್ಪಟ್ಟ ಪುರುಷರಿಗೂ ಸಹ ಉಚಿತ ಸಾರಿಗೆ ಪ್ರಯಾಣವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ‌.

Leave A Reply