Kadaba: ಕುಮಾರಧಾರಾ ನದಿಯಲ್ಲಿ ಮೃತ ಮೊಸಳೆ ಪತ್ತೆ

Share the Article

Kadaba: ಕುಮಾರಧಾರಾ ನದಿಯ ಪಂಜ-ಕಡಬ ಸಂಪರ್ಕ ರಸ್ತೆಯಲ್ಲಿ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯ ಮೃತದೇಹವೊಂದು ಪತ್ತೆಯಾಗಿರುವ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Rohith Sharma: ಕ್ರಿಕೆಟ್ ಲೋಕಕ್ಕೆ ರೋಹಿತ್ ಶರ್ಮ ವಿದಾಯ ?!

ಸುಮಾರು 1.5-2 ವರ್ಷದ ಮೊಸಳೆಯ ಮೃತದೇಹವೊಂದು ಶುಕ್ರವಾರ ನದಿಯ ಬದಿಯಲ್ಲಿ ಪತ್ತೆಯಾಗಿದೆ. ನದಿಯಲ್ಲಿ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ಮೊಸಳೆ ಗುರುವಾರ ಹಗಲಿಗೆ ಅಥವಾ ರಾತ್ರಿಗೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: SSLC Exam Result: ಎಸ್ಸೆಸ್ಸೆಲ್ಸಿ ಫಲಿತಾಂಶ ಎಪ್ರಿಲ್ ಕೊನೆಯ ವಾರದಲ್ಲಿ?

ಮೊಸಳೆ ಮೃತದೇಹ ಪತ್ತೆಯಾದಲ್ಲಿ ಮೀನುಗಳು ಕೂಡಾ ಇದ್ದು ಅವುಗಳಿಗೆ ಏನೂ ಸಂಭವಿಸಿಲ್ಲ. ಅಲ್ಲದೆ ಮೃತದೇಹ ಸಿಕ್ಕಿರುವ ಸ್ಥಳದಲ್ಲಿ ನೀರು ಹರಿಯುತ್ತಿದ್ದು, ಇನ್ನೊಂದು ಮೊಸಳೆಯ ಜೊತೆಗಿನ ಕಾದಾಟದಲ್ಲಿ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊಸಳೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಬಂದ ನಂತರವೇ ನಿಖರ ಕಾರಣ ತಿಳಿದು ಬರಲಿದೆ ಎಂದು ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್‌ ತಿಳಿಸಿದ್ದಾರೆ.

Leave A Reply

Your email address will not be published.