Home Crime Bengaluru: ಮಲ್ಲೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಎನ್ಐಎ

Bengaluru: ಮಲ್ಲೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಎನ್ಐಎ

Bengaluru

Hindu neighbor gifts plot of land

Hindu neighbour gifts land to Muslim journalist

Bengaluru: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ತಿಳಿಸಿದೆ. ಎನ್‌ಐಎ ಪ್ರಕಾರ, ಶಂಕಿತ ಬಾಂಬ‌ರ್ ಮುಸ್ಸಾವಿರ್ ಹುಸೇನ್ ಶಾಜಿಬ್‌ ಮತ್ತು ಸಹ ಸಂಚುಕೋರ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರನ್ನು ತನಿಖಾಧಿಕಾರಿಗಳು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಅಡಗುತಾಣದಿಂದ ಬಂಧಿಸಿದ್ದಾರೆ.

ಇದನ್ನೂ ಓದಿ: Werewolf Syndrome: ಮುಖದ ತುಂಬಾ ಕೂದಲಿರುವ ಮಗು ಜನನ; ಈ ಮಾಂಸ ತಿಂದದ್ದೇ ತಪ್ಪಾಯ್ತಾ?

ಸುಳ್ಳು ಗುರುತುಗಳನ್ನು ಬಳಸಿ ಇವರಿಬ್ಬರು ದೇಶದಾದ್ಯಂತ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಆದರೆ ಎನ್ಐಎ ಶುಕ್ರವಾರ ಇವರ ಅಡಗು ತಾಣದ ಮೇಲೆ ದಾಳಿ ಮಾಡಿ ಬೆಳಗ್ಗೆ ಬಂಧಿಸಿದ್ದಾರೆ..

ಇದನ್ನೂ ಓದಿ: Watermelon: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ರಕ್ತದೊತ್ತಡ ನಿವಾರಣೆಗೆ ಸಹಾಯಕಾರಿ : ತಪ್ಪದೇ ಕಲ್ಲಂಗಡಿ ಸೇವಿಸಿ

ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಯ ನಂತರ ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ಎನ್‌ಐಎ ಪ್ರಕಾರ, ಶಜೀಬ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾಗಿದ್ದು, ಇವರಿಬ್ಬರು ಶಿವಮೊಗ್ಗ ಇಸ್ಲಾಮಿಕ್ ಸ್ಟೇಟ್ (ಐಎಸ್) ಘಟಕದ ಹ್ಯಾಂಡ್ಲರ್‌ಗಳೆಂದು ಶಂಕಿಸಲಾಗಿದೆ.

ಕಳೆದ ತಿಂಗಳು ಚಿಕ್ಕಮಗಳೂರಿನ ಖಾಲ್ಸಾ ನಿವಾಸಿ ಮುಝಮ್ಮಿಲ್ ಶರೀಫ್ ಎಂಬಾತನನ್ನು ಎನ್‌ಐಎ ಬೆಂಗಳೂರಿನಿಂದ ಬಂಧಿಸಿತ್ತು. ಕರ್ನಾಟಕದ 12 ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 18 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದ ನಂತರ ಇದೀಗ ಅವರನ್ನು ಬಂಧಿಸಲಾಯಿತು.