2nd PUC Exam Result: ದ್ವಿತೀಯ ಪಿಯುಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಫೀಸ್ ಬಗ್ಗೆ ಮಾಹಿತಿ ನೀಡಿದ ಇಲಾಖೆ !
2nd PUC Exam Result: ಅಂತೂ ಇಂತೂ ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ದ್ವಿತೀಯ ಪಿಯುಸಿ ಫಲಿತಾಂಶ ಈ ಹೊತ್ತಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂದಿನ ತಮ್ಮ ಭವಿಷ್ಯದ ಕೋರ್ಸ್ ಗಳನ್ನು ಗಮನದಲ್ಲಿಟ್ಟುಕೊಂಡು ಓದಿರುತ್ತಾರೆ. ಹಾಗಾಗಿ ಇಲ್ಲಿ ಪಡೆಯುವ ಒಂದೊಂದು ಮಾರ್ಕು ಕೂಡ ಅಮೂಲ್ಯವಾದದ್ದು. ಎಷ್ಟೋ ಸಲ ವಿದ್ಯಾರ್ಥಿಗಳಿಗೆ ತಮಗೆ ಇನ್ನಷ್ಟು ಹೆಚ್ಚು ಅಂಕ ಬರಬೇಕಿತ್ತು ಎಲ್ಲೋ ಮಿಸ್ ಆಗಿದೆ ಅನ್ನಿಸುವುದು ಸಹಜ. ಇಂದು ಪ್ರಕಟಗೊಂಡ ಪಿಯುಸಿ ಪರೀಕ್ಷೆಯ ಮಾರ್ಕಿನಲ್ಲಿ ಒಟ್ಟು 50% ವೈಟೇಜ್ ಸಿಇಟಿ ಅಂಕ ನಿರ್ಧರಿಸಲು ನೆರವಾಗುತ್ತದೆ. ಇಂತಹಾ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನದ ಅವಕಾಶಗಳನ್ನು ಮಾಡಿಕೊಟ್ಟಿದೆ ಶಿಕ್ಷಣ ಇಲಾಖೆ. ಅದರ ಬಗೆಗಿನ ವೇಳಾಪಟ್ಟಿ ಇಲ್ಲಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಪ್ರತಿಗಳನ್ನು ಕೂಡ ಪಡೆದುಕೊಳ್ಳಬಹುದು. ಈ ಎಲ್ಲಾ ಸೇವೆಗಳಿಗೆ ಶಿಕ್ಷಣ ಇಲಾಖೆಯೂ ನಿಗದಿ ಮಾಡಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಇದನ್ನೂ ಓದಿ: America: ಭಾರತ ಪಾಕಿಸ್ತಾನದ ಮೇಲೆ ನುಗ್ಗಿ ದಾಳಿ ಮಾಡುವ ವಿಚಾರವಾಗಿ ನಾವು ಯಾವುದೇ ಹಸ್ತಕ್ಷತೆ ಮಾಡುವುದಿಲ್ಲ : ಅಮೇರಿಕಾ
*ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪ್ರತಿಗಳಿಗಾಗಿ ಆನ್‌ಲೈನ್ ಅಪ್ಲಿಕೇಶನ್ ಏಪ್ರಿಲ್ 10, 2024 ರಿಂದ ಪ್ರಾರಂಭವಾಗುತ್ತದೆ.
*ಸ್ಕ್ಯಾನ್ ಮಾಡಿದ ಪ್ರತಿಗಳಿಗಾಗಿ ಆನ್‌ಲೈನ್ ಅಪ್ಲಿಕೇಶನ್ ಏಪ್ರಿಲ್ 16, 2024 ರಂದು ಮುಕ್ತಾಯಗೊಳ್ಳುತ್ತದೆ.
*ಮರುಮೌಲ್ಯಮಾಪನ ಅಥವಾ ಮರುಮೊತ್ತಕ್ಕಾಗಿ ಆನ್‌ಲೈನ್ ಅಪ್ಲಿಕೇಶನ್ ನ ಅವಧಿಯು ಏಪ್ರಿಲ್ 14, 2024 ರಿಂದ ಪ್ರಾರಂಭವಾಗುತ್ತದೆ.
*ಮರುಮೌಲ್ಯಮಾಪನ ಮತ್ತು ಮರುಮೊತ್ತಕ್ಕಾಗಿ ಆನ್‌ಲೈನ್ ಅಪ್ಲಿಕೇಶನ್ ಹಾಕಲು ಏಪ್ರಿಲ್ 20, 2024 ರಂದು ಕೊನೆಯ ದಿನವಾಗಿರುತ್ತದೆ.
*ಮರುಮೌಲ್ಯಮಾಪನ ಮಾಡಲು ಬೇಕಾದ ಶುಲ್ಕ ಪಾವತಿಯ ದಿನಾಂಕವು ಏಪ್ರಿಲ್ 20, 2024 ರಂದು ಕೊನೆಗೊಳ್ಳುತ್ತದೆ.
ಇದನ್ನೂ ಓದಿ: Belthangady: 19 ರ ಹರೆಯದ ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ
ಮರು ಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಯ ಪ್ರತಿ ಪಡೆಯಲು ಶುಲ್ಕ ಎಷ್ಟು ?
ಮೌಲ್ಯಮಾಪನ ಬಯಸುವ ವಿದ್ಯಾರ್ಥಿಗಳು ಸ್ಕ್ಯಾನ್ ಮಾಡಿದ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ನಂತರ ತಮ್ಮ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪಿಡಿಎಫ್ ಅನ್ನು ಸ್ವೀಕರಿಸುತ್ತಾರೆ. ನಂತರ ಅವರು ಮರುಪರಿಶೀಲಿಸಲು ಬಯಸುವ ಉತ್ತರಗಳನ್ನು ಶಾರ್ಟ್‌ಲಿಸ್ಟ್ ಮಾಡಬಹುದು.
ಈ ಸೇವೆಗೆ ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ ಸ್ಕ್ಯಾನ್ ಮಾಡಿದ ಪ್ರತಿಗೆ ರೂ. 530 ಶುಲ್ಕವನ್ನು ಪಾವತಿ ಮಾಡಬೇಕಿರುತ್ತದೆ. ಅದೇ ರೀತಿ ಮರುಮೌಲ್ಯಮಾಪನ ಮಾಡಲು 1,670 ರೂಪಾಯಿ ಶುಲ್ಕ ವಿಧಿಸಲಾಗಿದೆ. ಇದು ಪ್ರತಿ ಸಬ್ಜೆಕ್ಟ್ಗೆ ಸಾವಿರದ 1,670 ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ.
ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?
ಹಂತ 1: ಅಧಿಕೃತ ವೆಬ್‌ಸೈಟ್ – kseab.karnataka.gov.in ಗೆ ಭೇಟಿ ನೀಡಿ
ಹಂತ 2: ಸ್ಕ್ಯಾನ್ ಮಾಡಿದ ಪ್ರತಿಗಳ ಅರ್ಜಿ ನಮೂನೆಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ
ಹಂತ 4: ಫಾರ್ಮ್ ಜೊತೆಗೆ ಅರ್ಜಿ ಶುಲ್ಕವನ್ನು ಸಲ್ಲಿಸಿ
ಹಂತ 5: ಸ್ವೀಕೃತಿ ಫಾರ್ಮ್ ಅರ್ಜಿ ನಮೂನೆಯ ರಿಸೀಪ್ಟ್ ಉಳಿಸಿ ಮತ್ತು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.