Home Karnataka State Politics Updates Supreme Court: ಪಾಕಿಸ್ತಾನಿ ಸೂಫಿ ಸಂತನ ಸಮಾಧಿ ಭಾರತದಲ್ಲಿ ಮಾಡಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

Supreme Court: ಪಾಕಿಸ್ತಾನಿ ಸೂಫಿ ಸಂತನ ಸಮಾಧಿ ಭಾರತದಲ್ಲಿ ಮಾಡಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

Hindu neighbor gifts plot of land

Hindu neighbour gifts land to Muslim journalist

Supreme Court: ಬಾಂಗ್ಲಾದೇಶದಲ್ಲಿ 2022ರಲ್ಲಿ ನಿಧನರಾದ ಪಾಕಿಸ್ತಾನಿ ಸೂಫಿ ಸಂತನೊಬ್ಬನ ಪಾರ್ಥೀವ ಶರೀರ ಪ್ರಯಾಗರಾಜ್ ನಲ್ಲಿ ಮರು ಸಮಾಧಿ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: Summer Health Tips: ಅತಿಯಾದ ಬಿಸಿಲಿನ ಝಳ ನಮ್ಮ “ಕರುಳಿನ ಆರೋಗ್ಯ”ದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? : ಇಲ್ಲಿದೆ ನೋಡಿ ಉತ್ತರ

1992ರಲ್ಲಿ ಪಾಕಿಸ್ತಾನದ ಪೌರತ್ವ ಪಡೆದ ಹಜರತ್ ಷಾ ಮುಹಮ್ಮದ್ ಅಬ್ದುಲ್ ಮುಕ್ತದಿರ್ ಶಾ ಮಸೂದ್ ಅಹ್ಮದ್ ಮೂಲತಃ ಅಲಹಾಬಾದ್ (ಪ್ರಯಾಗರಾಜ್) ನಿವಾಸಿ ಆಗಿದ್ದು, ತಮ್ಮ ಶರೀರವನ್ನು ಉತ್ತರಪ್ರದೇಶದ ದರ್ಗಾದಲ್ಲಿ ಅಂತ್ಯಸಂಸ್ಕಾರ ಮಾಡಬೇಕೆಂದು ಬಯಸಿದ್ದರು.

ಇದನ್ನೂ ಓದಿ: Parliament Election: ಕಾಂಗ್ರೆಸ್’ಗೆ ಬೆಂಬಲ ಘೋಷಿಸಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್

ಹೀಗಾಗಿ ದರ್ಗಾ ಪರ ವಕೀಲರು, ಹಜರತ್ ಷಾ 2008ರಲ್ಲಿ ದರ್ಗಾದ ಉತ್ತರಾಧಿಕಾರಿ ಆಗಿದ್ದು, ಅವರ ಮೃತದೇಹ ಭಾರತಕ್ಕೆ ತರುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ವಾದಿಸಿದರು.

ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ, ಹಜರತ್ ಭಾರತದ ಜತೆ ಸಾಂವಿಧಾನಿಕ ಹಕ್ಕು ಹೊಂದಿಲ್ಲ. ಅಲ್ಲದೆ, ಈಗಾಗಲೇ ಢಾಕಾದಲ್ಲಿ ಸಮಾಧಿ ಮಾಡಿರುವ ದೇಹ ಹೊರ ತೆಗೆಯುವಂತೆ ವಿದೇಶಕ್ಕೆ ನಿರ್ದೇಶಿಸಲಾಗದೆಂದು ದರ್ಗಾದ ಅರ್ಜಿಯನ್ನು ತಿರಸ್ಕರಿಸಿದೆ.