Home latest Yoga Class: ಜಪಾನ್ ವಿಧ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಉಜಿರೆಯ ಕಾಲೇಜು!

Yoga Class: ಜಪಾನ್ ವಿಧ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಉಜಿರೆಯ ಕಾಲೇಜು!

Hindu neighbor gifts plot of land

Hindu neighbour gifts land to Muslim journalist

Yoga Class: ಈಗಿನ ಕಾಲದಲ್ಲಿ ಎಲ್ಲರೂ ಜಿಮ್, ಯೋಗ ಅಂತ ಹೋಗ್ತಾನೆ ಇರ್ತಾರೆ. ನಮ್ಮ ಭಾರತೀಯರು ಯೋಗವನ್ನು ಮಾಡುವುದರ ಜೊತೆಗೆ ತರಗತಿಯನ್ನು ಕೂಡ ಮಾಡುತ್ತಾರೆ. ಅದನ್ನು ವಿದೇಶಿಗರು ಕಲಿಯುತ್ತಾರೆ ಅಂದ್ರೆ ಅಚ್ಚರಿಯ ಸಂಗತಿಯೇ ನಿಜ. ಇಂಥದ್ದೇ ತರಬೇತಿ ಇದೀಗ ಉಜಿರೆಯಲ್ಲಿ ನಡೆಯುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: K S Eshwarappa: ಈಶ್ವರಪ್ಪ ಬಂಡಾಯ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ?!

ಭಾರತದ ಅಸ್ಮಿತೆ ಯೋಗ ವಿಶ್ವದ್ಯಾಂತ ಪಸರಿಸಿದೆ. ಪ್ರಧಾನಿ ಮೋದಿ ಅವರ ಆಸಕ್ತಿಯಿಂದ ಯೋಗದ ಮಹತ್ವವನ್ನು ವಿದೇಶಿಗರೂ ಅರಿಯುವಂತಾಗಿದೆ. ಯೋಗಾಭ್ಯಾಸಕ್ಕಾಗಿ ದೂರದ ಜರ್ಮನಿಯ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಗೆ ಬಂದು ಯೋಗ ತರಬೇತಿ ಪಡೆದುಕೊಂಡಿದ್ದಾರೆ. ಒಂದು ತಿಂಗಳು ಉಜಿರೆಯಲ್ಲಿದ್ದು ಯೋಗದ ನಂಟು ಬೆಳೆಸಿಕೊಂಡಿದ್ದಾರೆ.

ಇದನ್ನೂ ಓದಿ: Yoga Class: ಜಪಾನ್ ವಿಧ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಉಜಿರೆಯ ಕಾಲೇಜು!

ಥೆರಪಿ ಮಾದರಿಯಲ್ಲಿ ಯೋಗಾಭ್ಯಸ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಯೋಗ ವಿದ್ಯಾಲಯಗಳ ಮಹಾವಿದ್ಯಾಲಯದಲ್ಲಿ ಜರ್ಮನಿಯ ಮಾಝ್ ಯುನಿವರ್ಸಿಟಿಯ ಏಳು ವಿದ್ಯಾರ್ಥಿಗಳು ಯೋಗ ಕಲಿತು ಮತ್ತೆ ತಮ್ಮ ದೇಶದತ್ತ ಪ್ರಯಾಣ ಬೆಳೆಸಿದ್ದಾರೆ. ಒಂದು ತಿಂಗಳ ಕಾಲ ತರಬೇತಿ ಪಡೆದ ಇವರು ಯೋಗದೊಂದಿಗೆ ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡಿದ್ದಾರೆ. ಜರ್ಮನಿಯ ಈ ವಿದ್ಯಾರ್ಥಿಗಳು ಕ್ರೀಡಾ ವಿದ್ಯಾರ್ಥಿಗಳು.

ಆದ್ದರಿಂದ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸಲು ಯೋಗವನ್ನು ಅಭ್ಯಾಸ ಮಾಡಲು ಉಜಿರೆಗೆ ಆಗಮಿಸಿದ್ದರು. ಒಂದು ತಿಂಗಳುಗಳ ಕಾಲ ಈ ವಿದ್ಯಾರ್ಥಿಗಳು ಥಿಯರಿ ಮತ್ತು ಪ್ರ್ಯಾಕ್ಟಿಕಲ್ ತರಬೇತಿ ಮೂಲಕ ಪ್ರಾಯೋಗಿಕವಾಗಿ ತರಬೇತಿ ನೀಡಲಾಗಿದೆ. ಧರ್ಮಸ್ಥಳದ ಯೋಗ ಕೇಂದ್ರದಲ್ಲಿ ಈ ವಿದ್ಯಾರ್ಥಿಗಳು ಥೆರಪಿ ಮಾದರಿಯಲ್ಲಿ ಯೋಗವನ್ನು ಅಭ್ಯಸಿಸಿದ್ದಾರೆ. ಈಗಾಗಲೇ ಮಾಝ್ ಯುನಿವರ್ಸಿಟಿಯ ನಾಲ್ಕು ಬ್ಯಾಚ್ ವಿದ್ಯಾರ್ಥಿಗಳು ಯೋಗ ತರಬೇತಿ ಪಡೆದು ಹೋಗಿದ್ದಾರೆ. ಇದು ಐದನೇ ಬ್ಯಾಚ್. ಇವರು ಒಂದು ತಿಂಗಳುಗಳ ಕಾಲ ತರಬೇತಿ ಪಡೆದು ತಮ್ಮ ದೇಶದತ್ತ ಪ್ರಯಾಣ ಬೆಳೆಸಿದ್ದಾರೆ.ಯೋಗ ತಮ್ಮ ಬದುಕಿನ ಅಭ್ಯಾಸವನ್ನೇ ಬದಲಿಸಿದೆ ಎಂದು ವಿದ್ಯಾರ್ಥಿಗಳು ಖುಷಿ ವ್ಯಕ್ತಪಡಿಸಿದ್ದಾರೆ.