SSLC : ಏ.15 ರಿಂದ ಎಸ್ ಎಸ್ಎಲ್ ಸಿ ಮೌಲ್ಯಮಾಪನ ಆರಂಭ

SSLC: ಏ.15ರಿಂದ ಮೌಲ್ಯಮಾಪನ ಮೌಲ್ಯಮಾಪನ ಕಾರ್ಯವು ರಾಜ್ಯಾದ್ಯಂತ ಏ.15ರಿಂದ ಏಕಕಾಲಕ್ಕೆ ಆರಂಭಗೊಳ್ಳಲಿದೆ.

• ಮೌಲ್ಯಮಾಪನ ಮಾರ್ಗಸೂಚಿ ಪ್ರಕಟಿಸಿದ ಮಂಡಳಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮತ ಪ್ರಚಾರ ನೆಪದಲ್ಲಿ ಮೌಲ್ಯಮಾಪನ ಕೇಂದ್ರಕ್ಕೆ ರಾಜಕೀಯ ವ್ಯಕ್ತಿಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದೆ.

ಇದನ್ನೂ ಓದಿ: Prakash Raj: ಬಿಜೆಪಿ ಸೇರ್ಪಡೆ ವಿಚಾರ – ಸ್ಪಷ್ಟೀಕರಣ ನೀಡಿದ ನಟ ಪ್ರಕಾಶ್ ರಾಜ್

ರಾಜಕೀಯ ವ್ಯಕ್ತಿಗಳು ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡುವುದನ್ನು ಕಡ್ಡಾಯ ನಿಷೇಧಿಸಿದೆ. ಮೌಲ್ಯಮಾಪನ ಕೇಂದ್ರದ 200 ಮೀ. ಸುತ್ತಮುತ್ತ ನಿಷೇಧಿತ ಪ್ರದೇಶ ಆಗಿರುವುದರಿಂದ ಯಾವುದೇ ಪಕ್ಷಕ್ಕಾಗಲಿ ಅಥವಾ ಯಾವುದೇ ಸಂಘಟನೆ ವ್ಯಕ್ತಿಗಳಿಗಾಗಿ ಮೌಲ್ಯಮಾಪನ ಕೇಂದ್ರಕ್ಕೆ ಅವಕಾಶ ನೀಡುವಂತಿಲ್ಲ ಎಂದು ಮಂಡಳಿ ಸೂಚಿಸಿದೆ.

ಇದನ್ನೂ ಓದಿ: Parliament Election: ಬಿಜೆಪಿ ಅಭ್ಯರ್ಥಿ ಸಿ ಎನ್ ಮಂಜುನಾಥ್ ಹೆಸರಿನಲ್ಲಿ 4 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಪ್ರತಿಪಕ್ಷಗಳು

ಅದಕ್ಕೂ ಮೊದಲು ಏ.7ರಂದು ಬೆಳಗ್ಗೆ 10ಕ್ಕೆ ಮೌಲ್ಯಮಾಪನ ಕೇಂದ್ರಕ್ಕೆ ವ್ಯವಸ್ಥಾಪಕರು ಹಾಜರಾಗಬೇಕು. ಏ.10ರಂದು ಜಂಟಿ ಮುಖ್ಯ ಮೌಲ್ಯಮಾಪಕರ ವಿಡಿಯೊ ಸಂವಾದ ನಡೆಸಬೇಕು. ಏ.12ರಂದು ಜಂಟಿ ಮುಖ್ಯ ಮೌಲ್ಯಮಾಪಕರು, ಏ.13ರಂದು ಉಪ ಮುಖ್ಯ ಮೌಲ್ಯಮಾಪಕರು, ಏ.15ರಂದು ಸಹಾಯಕ ಮೌಲ್ಯಮಾಪಕರು ಹಾಜರಾಗಬೇಕು ಎಂದು ಸೂಚನೆ ನೀಡಿದೆ.

ಮೂಲಸೌಕರ್ಯ ಒದಗಿಸಿ ಜಿಲ್ಲಾ ಉಪ ನಿರ್ದೇಶಕರು ಮೌಲ್ಯಮಾಪಕ ರಿಗೆ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ, ಆಸನ ವ್ಯವಸ್ಥೆ, ಸುಭದ್ರತೆ ಕಲ್ಪಿಸಬೇಕು. ಡಿ-ಗ್ರೂಪ್ ನೌಕರರನ್ನು ನಿಯೋಜಿಸಿ ಮೌಲ್ಯಮಾಪನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಮೌಲ್ಯ ಮಾಪಕರು ಸಕಾಲದಲ್ಲಿ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು. ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸೂಚಿಸಲಾಗಿದೆ.

Leave A Reply

Your email address will not be published.