Mangaluru Food Poisoning: ಮಂಗಳೂರಿನಲ್ಲಿ ಫೂಡ್‌ಪಾಯಿಸನ್‌ಗೆ ತುತ್ತಾದ ನೂರಾರು ಮಂದಿ
Mangaluru Food Poisoning: ಬಿಸಿಲಿನ ತಾಪ, ನೀರಿನ ಕೊರತೆ ಇತ್ಯಾದಿ ಕಾರಣಗಳಿಂದ ಮಂಗಳೂರಿನ ಮತ್ತು ಕರಾವಳಿ ಭಾಗದ ಬಹುತೇಕ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಫುಡ್ ಪಾಯಿಸನ್ ಆಗಿರುವ ಹಲವು ಪ್ರಕರಣಗಳು ಕಂಡು ಬಂದಿದೆ. ಇವು ಹೆಚ್ಚುತ್ತಲೇ ಇದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಬಿಸಿಲಿನ ತಾಪ ಹಾಗೂ ನೀರಿನ ಗುಣಮಟ್ಟದಿಂದ ಈ ರೀತಿಯ ಸಮಸ್ಯೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Prakash Raj: ಬಿಜೆಪಿ ಸೇರ್ಪಡೆ ವಿಚಾರ – ಸ್ಪಷ್ಟೀಕರಣ ನೀಡಿದ ನಟ ಪ್ರಕಾಶ್ ರಾಜ್
ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಮಕ್ಕಳು, ವಿದ್ಯಾರ್ಥಿಗಳು ಸೇರಿ 100 ಮಂದಿ ಫುಡ್ ಪಾಯಿಸನ್ ಸಮಸ್ಯೆಗೆ ತುತ್ತಾಗಿ ದಾಖಲಾಗಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.
ಇದನ್ನೂ ಓದಿ: SSLC : ಏ.15 ರಿಂದ ಎಸ್ ಎಸ್ಎಲ್ ಸಿ ಮೌಲ್ಯಮಾಪನ ಆರಂಭ
ತಾಪಮಾನ ಹೆಚ್ಚಿರುವಾಗ ಹೆಚ್ಚು ನೀರನ್ನು ಸೇವಿಸುವುದು ಅತ್ಯಗತ್ಯ. ಜೊತೆಗೆ ಅದರ ಶುದ್ದತೆಯನ್ನು ಕೂಡಾ ಖಚಿತಪಡಿಸುವುದು ಕೂಡಾ ಅತೀ ಮುಖ್ಯ ಎಂದು ತಜ್ಞರು ವಿವರಿಸಿದ್ದಾರೆ.
hpqe78