Home Karnataka State Politics Updates Gruhalakshmi Scheme : ರಾಜ್ಯದ ‘ಗೃಹಲಕ್ಷ್ಮೀ’ಯರಿಗೆ ಇನ್ಮುಂದೆ ಸಿಗಲಿದೆ 3000 !!

Gruhalakshmi Scheme : ರಾಜ್ಯದ ‘ಗೃಹಲಕ್ಷ್ಮೀ’ಯರಿಗೆ ಇನ್ಮುಂದೆ ಸಿಗಲಿದೆ 3000 !!

Hindu neighbor gifts plot of land

Hindu neighbour gifts land to Muslim journalist

 

Gruhalakshmi Scheme : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಪ್ರಮುಖವಾಗಿರುವ ಯೋಜನೆ ‘ಗೃಹಲಕ್ಷ್ಮಿ ಯೋಜನೆ'(Gruhalakshmi Scheme). ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ ಹಣ ಜಮೆಯಾಗುತ್ತಿದೆ. ಆದರೆ ಇನ್ನು ಮುಂದೆ ಯಜಮಾನಿಯರಿಗೆ 2, 000 ಬದಲು 3000 ಹಣ ಸಿಗುತ್ತದೆ ಎಂಬ ಸುದ್ದಿ ಒಂದು ಮುನ್ನಲೆಗೆ ಬಂದಿದೆ.

ಹೌದು, ಕಾಂಗ್ರೆಸ್ ಸರ್ಕಾರ(Congress Government ) ಅಧಿಕಾರಕ್ಕೆ ಬರುವ ಮೊದಲು ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು, ತಾನು ಅಧಿಕಾರ ಹಿಡಿಯುತ್ತಿದ್ದಂತೆ ಅನುಷ್ಠಾನಕ್ಕೆ ತೆಗೆದುಕೊಂಡು ಬಂದಿತ್ತು. ಈ ಎಲ್ಲಾ ಯೋಜನೆಗಳಿಗೆ ರಾಜ್ಯದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ಬೆನ್ನಲ್ಲೇ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಕೂಡ ವಿವಿಧ ರೀತಿಯ ಭರವಸೆ ಮತ್ತು ಘೋಷಣೆ ಮತದಾರರನ್ನು ಸೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀಯರಿಗೆ 3000 ಹಣ ಸಿಗುತ್ತದೆ ಎಂದು ಹೇಳಲಾಗಿದೆ.

ಇದೇ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣದ ಖರ್ಚು 56 ಸಾವಿರ ಕೋಟಿಯಷ್ಟು ಮಾಡಿ ಪ್ರತಿ ಗೃಹಿಣಿಯರಿಗೆ ನೀಡುತ್ತಿರುವ ಹಣದ ಮೊತ್ತವನ್ನು 3000 ನೀಡುವ ವ್ಯವಸ್ಥೆ ಮಾಡಿಕೊಡುತ್ತದೆ ಎಂಬ ಭರವಸೆಯನ್ನು ಕರ್ನಾಟಕ ಸರ್ಕಾರದ ಸಚಿವರಾಗಿರುವ ಬೋಸರಾಜ್ ಅವರು ನೀಡಿದ್ದಾರೆ.

ಇತ್ತೀಚಿಗೆ ನಡೆದ ಕಾರ್ಯಾಕರ್ತರ ಸಭೆಯಲ್ಲಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಎಸ್.ಎಸ್.ಬೋಸರಾಜ್ (S.S. Boseraju) ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಅಲ್ಲದೆ ಈಗಾಗಲೇ ಸರ್ಕಾರವು ಕಳೆದ ಎಂಟು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) 36 ಸಾವಿರ ಕೋಟಿ ಹಣವನ್ನು ಖರ್ಚು ಮಾಡುತ್ತ ಇದೆ. ಇನ್ನು ಈ ಯೋಜನೆಯ ಮೂಲಕ ಗೃಹಿಣಿಯರು ತಮ್ಮ ಮನೆಯ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಕಾರ್ಯವನ್ನು ಮಾಡುತ್ತಾ ಇದ್ದಾರೆ. ಮುಂದೆ ನಮ್ಮ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಇನ್ನೂ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.