HSRP: ಈ ಕೆಲಸ ಮಾಡಿದರೆ HSRP ನಂಬರ್ ಪ್ಲೇಟ್ ಇಲ್ಲದಿದ್ದರೂ ಫೈನ್ ಬೀಳಲ್ಲ !!

HSRP ನಂಬರ್‌ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮೇ 31 ಕೊನೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರ ನಂತರವೂ ಯಾರು ನಂಬರ್ ಪ್ಲೇಟ್ ಹಾಕಿಸುವುದಿಲ್ಲವೋ ಅವರಿಗೆ ದಂಡ ಬೀಳುವುದು ಪಕ್ಕಾ ಎಂದು RTO ಹೇಳಿದೆ. ಆದರೆ ನೀವು ಈ ರೀತಿ ಮಾಡಿದರೆ HSRP ನಂಬರ್ ಪ್ಲೇಟ್ ಹಾಕದಿದ್ದರೂ ದಂಡ ಬೀಳುವುದಿಲ್ಲ.

ಇದನ್ನೂ ಓದಿ: Tirupati: ತಿರುಪತಿಗೆ ಹೋಗುವವರಿಗೆ ಗುಡ್ ನ್ಯೂಸ್, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು, HSRP ನಂಬರ್ ಪ್ಲೇಟ್ ಗಾಗಿ ಈಗಾಗಲೇ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಎಲ್ಲರೂ ಏಕಕಾಲದಲ್ಲಿಯೇ ಅರ್ಜಿ ಸಲ್ಲಿಸುತ್ತಿರುವ ಕಾರಣ ನಂಬರ್ ಪ್ಲೇಟ್ ಬರುವುದು ತಡವಾಗುತ್ತದೆ, ಆಗಬಹುದು. ಆಗ ನೀವು ಹೊರಗಡೆ ಓಡಾಡುವಾಗ ನಂಬರ್ ಪ್ಲೇಟ್ ಹಾಕಿಸಿಲ್ಲ ಎಂದು ಭಾವಿಸಿ ಪೋಲೀಸರು ಫೈನ್ ಹಾಕಬಹುದು. ಆದರೆ ನೀವು HSRP ಗೆ ಅಪ್ಲಿಕೇಶನ್ ಹಾಕಿದ್ದ ಬಳಿಕ ಅದರ ಒಂದು ದಾಖಲಾತಿಯನ್ನು ಕೊಂಡೊಯ್ದರೆ ನಿಮಗೆ ಪೊಲೀಸ್ ಫೈನ್ ಬೀಳಲಾರದು.

ಇದನ್ನೂ ಓದಿ: Health Tips: ಬಿಸಿಲು ಅಂತ ಜಾಸ್ತಿ ಐಸ್ ಕ್ರೀಮ್ ತಿಂತೀರಾ? ಹಾಗಾದ್ರೆ ಈ ಸುದ್ಧಿ ನಿಮಗಾಗಿ

ಇನ್ನು ಅಪ್ಲಿಕೇಶನ್ ಹಾಕುವಾಗ ಡೀಲರ್ಸ್ ಆಪ್ಶನ್ ಹಾಗೂ ಹೋಂ ಡೆಲಿವರಿ ಎಂಬ ಎರಡು ಆಯ್ಕೆ ಇರಲಿದೆ. ಡೀಲರ್ಸ್ ಎಂದು ಆಯ್ಕೆ ಮಾಡಿದರೆ ನಿಮ್ಮ ಮನೆ ಹತ್ತಿರಕ್ಕೆ ಪಿಕ್ಮೆಂಟ್ ಸೆಂಟರ್ ಮೂಲಕ ನೋಂದಾಯಿಸಿ ಆ ಮೂಲಕ ನಂಬರ್ ಪ್ಲೇಟ್ ಬರಲಿದೆ. ಹೋಂ ಡೆಲಿವರಿ ಆದರೆ ಸ್ವಲ್ಪ ಅಧಿಕ ಹಣ ಕಟ್ಟಬೇಕಾಗುತ್ತದೆ. ಅದರಲ್ಲಿ ಮನೆಗೆ ಬಂದು ನಂಬರ್ ಪ್ಲೇಟ್ ಅಳವಡಿಸಲಾಗುವುದು.

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?

ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್‌ ಮಾಡಿ.

• ವಾಹನ ತಯಾರಕರನ್ನು ಆಯ್ಕೆ ಮಾಡಿ

• ವಾಹನದ ಮೂಲ ವಿವರ ಭರ್ತಿ ಮಾಡಿ

• ಡೀಲರ್‌ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)

• HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.

• ಆವಾಗ, ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.

• ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ

• ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್‌ ಸಂಸ್ಥೆಗೆ ಭೇಟಿ ನೀಡಿ.

Leave A Reply

Your email address will not be published.