Abortion: ಗಡಿಬಿಡಿಯಲ್ಲಿ ಬೇರೆ ಗರ್ಭಿಣಿಗೆ ಅಬಾರ್ಷನ್ ಮಾಡಿದ ವೈದ್ಯರು !!
Abortion: ಇತ್ತೀಚಿನ ದಿನಗಳಲ್ಲಿ ಕೆಲವೊಮ್ಮೆ ವೈದ್ಯರಿಂದಾಗುವ ಅದ್ವಾನಗಳು ವಿಪರೀತವಾಗಿವೆ. ಬೇಕೆಂದು ಮಾಡದಿದ್ದರೂ ಅದು ಜೀವವನ್ನೇ ತೆಗೆದಿರುವ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅಂತೆಯೇ ಇದೀಗ ವೈದ್ಯರ ಮತ್ತೊಂದು ಮಹಾ ಯಡವಟ್ಟು ಬೆಳಕಿಗೆ ಬಂದಿದ್ದು, ಗೊಂದಲದಿಂದ ವೈದ್ಯರು ಬೇರೆ ಗರ್ಭಿಣಿಗೆ ಗರ್ಭಪಾತ(Abortion) ಮಾಡಿಬಿಟ್ಟಿದ್ದಾರೆ.
ಇದನ್ನೂ ಓದಿ: D.K.Bappanadu Kshetra: ಬಪ್ಪನಾಡು ಕ್ಷೇತ್ರದಲ್ಲಿ ದೇವರ ರಥ ಹೋಗುವ ದಾರಿಯಲ್ಲಿ ಇದ್ದ ವಾಹನ ಜಖಂಗೊಳಿಸಿದ ಭಕ್ತರು
ಅರೆ ಇದೆಂತಾ ಮಹಾ ಎಡಡ್ವಟ್ಟು, ಅದ್ವಾನ ಅಲ್ವಾ? ಯಾರಿಗೋ ಮಾಡಬೇಕಾದ ಗರ್ಭಪಾತವನ್ನು ಮತ್ಯಾರಿಗೋ ಮಾಡಿ ವೈದ್ಯರು ಎಡವಟ್ಟು ಮಾಡಿದ್ದಾರಲ್ಲಾ ದೇವ್ರೇ!! ಹೌದು, ಪ್ರೇಗ್‌ನ ಬುಲೋವ್ಕಾ ವಿಶ್ವವಿದ್ಯಾಲಯ(Bulovka University of Prague)ದ ಆಸ್ಪತ್ರೆಯ ವೈದ್ಯರು ಮಾರ್ಚ್ 25 ರಂದು ತಮ್ಮ ಆಸ್ಪತ್ರೆಗೆ ಚೆಕಪ್ ಗೆ ಎಂದು ಬಂದ ನಾಲ್ಕು ತಿಂಗಳ ಗರ್ಭಿಣಿಯನ್ನು ತಪ್ಪಾಗಿ ತಿಳಿದು, ಇವಳೇ ಗರ್ಭಪಾತ ಮಾಡಿಸಿಕೊಳ್ಳಲು ಬಂದ ಗರ್ಭಿಣಿ ಎಂದು ತಪ್ಪಾಗಿ ತಿಳಿದು ಆಕೆಗೆ ಅಬಾಷನ್ ಮಾಡಿಬಿಟ್ಟಿದ್ದಾರೆ.
ಇದನ್ನೂ ಓದಿ: Vijayapura: ತೆರೆದ ಕೊಳವೆ ಬಾವಿಗೆ ಬಿದ್ದ ಮಗು; ನನಗೆ ಒಂದೇ ಕರುಳಕುಡಿ, ಉಳಿಸಿಕೊಡಿ-ತಾಯಿ ಪೂಜಾ
ಅಂದಹಾಗೆ ವಿದೇಶಿ ಮಹಿಳೆ ಮತ್ತು ಆಸ್ಪತ್ರೆಯ ಸಿಬ್ಬಂದಿ ನಡುವಿನ ಭಾಷೆಯ ತಡೆಯಿಂದಾಗಿ ಚೆಕಪ್ ಗೆಂದು ಆಸ್ಪತ್ರೆಗೆ ಆಗಮಿಸಿದ ಮಹಿಳೆಯನ್ನು ಈಕೆಯೇ ಆಸ್ಪತ್ರೆಯು ಗರ್ಭಪಾತಕ್ಕೆ ಒಳಗಾಗುವ ರೋಗಿ ಎಂದು ತಪ್ಪಾಗಿ ಪರಿಗಣಿಸಿ ಈ ಪ್ರಮಾದ ಸಂಭವಿಸಿದೆ ಎಂದು ವರದಿಯಾಗಿದೆ. ಆಸ್ಪತ್ರೆಯ ಸಿಬ್ಬಂದಿಗೆ ಗರ್ಭಿಣಿಯ ಕಾಮನ್ ಭಾಷೆ ತಿಳಿದಿರಲಿಲ್ಲ. ಆದ್ದರಿಂದ ಇವರೇ ಅವರು ಎಂದುಕೊಂಡು ಇಂಥದೊಂದು ಎಡವಟ್ಟು ಮಾಡಿದ್ದಾರೆ ವೈದ್ಯರು. ಘಟನೆ ಸಂಬಂಧ ಆಸ್ಪತ್ರೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ನಿರ್ಲಕ್ಷ್ಯದ ಕಾರಣಕ್ಕಾಗಿ ಆಸ್ಪತ್ರೆ ತನಿಖೆ ನಡೆಸುತ್ತಿದೆ. ಅಲ್ಲದೆ ಅವರೆಲ್ಲರೂ ಕಾನೂನು ಸಮಸ್ಯೆ ಎದುರಿಸುತ್ತಿದ್ದಾರೆ.
ಇನ್ನು ಜೆಕ್ ಆರೋಗ್ಯ ಸಚಿವಾಲಯವು ಘಟನೆಯನ್ನು ‘ಕ್ಷಮಿಸಲಾಗದ ಮಾನವ ದೋಷ’ ಎಂದು ಉಲ್ಲೇಖಿಸಿದೆ ಮತ್ತು ಘಟನೆಯ ಬಗ್ಗೆ ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ವಿಷಾದ ವ್ಯಕ್ತಪಡಿಸಿದೆ.