Assault: ಆಘಾತಕಾರಿ ಕೃತ್ಯ; 11 ರ ಬಾಲಕನಿಂದ 4 ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

Share the Article

Assault: 11 ವರ್ಷದ ಬಾಲಕನೊಬ್ಬ ತನ್ನ ನೆರೆಹೊರೆಯ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಸಲಾಗಿದೆ. ಇಂತಹ ಆಘಾತಕಾರಿ ಘಟನೆಯೊಂದು ಗುಜರಾತ್‌ನ ಸೂರತ್‌ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: Illicit Relationship: ಮುಸ್ಲಿಂ ಮಹಿಳೆ ಜೊತೆ ಅನೈತಿಕ ಸಂಬಂಧ ಆರೋಪ; ವ್ಯಕ್ತಿಗೆ ಹಲ್ಲೆ

ಮಾ.29 ರಂದು ಈ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ತಮ್ಮ ಮನೆಗಳ ಬಳಿ ಆಟವಾಡುತ್ತಿದ್ದು, ಬಾಲಕ ಬಾಲಕಿಗೆ ಆಮಿಷವೊಡ್ಡಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕಿಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ನಂತರ ಯಾರ ಬಳಿ ಹೇಳಿದರೆ ಚಪ್ಪಲಿಯಿಂದ ಹೊಡೆದು ಹಿಂಸೆ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: CM Siddaramaiah: ಚುನಾವಣಾ ರಾಜಕೀಯಕ್ಕೆ ಸಿಎಂ ಸಿದ್ದರಾಮಯ್ಯ ಗುಡ್ ಬೈ !!

ಇದರಿಂದ ಬೆದರಿದ ಈಕೆ ಯಾರಲ್ಲೂ ಈ ವಿಷಯವನ್ನು ಹೇಳಲಿಲ್ಲ. ಆದರೆ ಮರುದಿನ ಈಕೆಯ ಗುಪ್ತಾಂಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಆಘಾತಕಾರಿ ಸತ್ಯವನ್ನು ಹೇಳಿದ್ದಾರೆ. ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಆಕೆಯ ಜನನಾಂಗದಲ್ಲಿ ಗಾಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಮನೆಯವರು ಆಘಾತಗೊಂಡಿದ್ದು, ಕೂಡಲೇ ಬಾಲಕಿಯನ್ನು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ಹೇಳಿದ್ದಾಳೆ. ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯ ಸುರಕ್ಷತೆಯನ್ನು ಖ್ಯಾತಿಪಡಿಸಿದ ನಂತರ ಅವರು ಅಥ್ವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದು, ಅಪ್ರಾಪ್ತನ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Leave A Reply