Central Government : ಪೆಟ್ರೋಲ್, ಡೀಸೆಲ್ ವಾಹನಗಳನ್ನು ಸಂಪೂರ್ಣ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ನಿರ್ಧಾರ !!
Central Government : ದೇಶದ ಭವಿಷ್ಯದ ಬಗ್ಗೆ ಚಿಂತನೆ ನಡೆಸುವ ಭಾರತ ಸರ್ಕಾರವು(Indian Government) ಜಗತ್ತಿನ ಬದಲಾವಣೆಗೆ ತನ್ನ ಜನರನ್ನು ಒಗ್ಗಿಕೊಳ್ಳುವಂತೆ ಮಾಡುತ್ತಿದ್ದು, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುತ್ತಿದೆ. ಅಂತೆಯೇ ಇದೀಗ ನಮ್ಮ ಕೇಂದ್ರ ಸರ್ಕಾರವು ದೇಶಾದ್ಯಂತ ಪೆಟ್ರೋಲ್(Petrol)ಹಾಗೂ ಡೀಸೆಲ್(Desel)ವಾಹನಗಳನ್ನು ಸಂಪೂರ್ಣ ಬ್ಯಾನ್ ಮಾಡಲು ಚಿಂತನೆ ನಡೆಸಿದೆ. ಅಂದರೆ ಬದಲಾವಣೆಗೆ ತಕ್ಕಂತೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಪರ್ಯಾಯವನ್ನು ಹುಡಕಲು ಮುಂದಾಗಿದೆ.
ಮಾಲಿನ್ಯ, ಏರುತ್ತಿರುವ ತಾಪಮಾನ ನಿಯಂತ್ರಿಸಲು ಭಾರತದಲ್ಲಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಕ್ಕೆ ಕೇಂದ್ರವು ಹೆಚ್ಚಿನ ಉತ್ತೇಜನ ನೀಡಿದೆ, ನೀಡುತ್ತಿದೆ. ಈಗಾಗಲೇ ಡೀಸೆಲ್ ವಾಹನಗಳ ಬಳಕೆ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಮೋದಿ ಸರ್ಕಾರವು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬಳಕೆ ಸಂಪೂರ್ಣ ಮುಂದಾಗಿದೆ.
ಹೌದು, ಈ ಕುರಿತು ಮಹತ್ವದ ಪ್ಲಾನ್ ಒಂದನ್ನು ಸಾರಿಗೆ ಸಚಿವ ನಿತಿನ್ ಗಡ್ಕರಿ(Nithin Ghadkari) ಬಹಿರಂಗಪಡಿಸಿದ್ದಾರೆ. ಭಾರತವನ್ನು ಜಾಗತಿಕ ಮಟ್ಟದಲ್ಲಿ ಪರಿಸರ ಪೂರಕ ದೇಶವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಬಹಳ ಪ್ರಮುಖ ತೀರ್ಮಾನ ಗೈಗೊಳ್ಳಲಾಗಿದ್ದು ದೇಶದಲ್ಲಿನ ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಯೋಜನೆಯನ್ನು ನಿತಿನ್ ಗಡ್ಕರಿ ಹೇಳಿದ್ದು ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ(GST) ದರವನ್ನು ಶೇಕಡಾ 5ಕ್ಕೆ ಇಳಿಸಲು ಹಾಗೂ ಫ್ಲೆಕ್ಸ್ ಎಂಜಿನ್( ಹೈಡ್ರೋಜನ್, ಎಥೆನಾಲ್ ಇಂಧನ ಬಳಕೆ)ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12ಕ್ಕೆ ಇಳಿಸಲು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕರೆ, ದೇಶದಲ್ಲಿನ ಹೈಬ್ರಿಡ್, ಫ್ಲೆಕ್ಸ್ ಎಂಜಿನ್ ವಾಹನಗಳ ಬೆಲೆ ಇಳಿಕೆಯಾಗಲಿದೆ. ಇದು ಜನರಿಗೆ ಅನುಕೂಲವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸದ ಗಡ್ಕರಿ ಅವರು ‘ದೇಶದಲ್ಲಿ ಶೇಕಡಾ 100 ರಷ್ಟು ಪೆಟ್ರೋಲ್ ಹಾಗೂ ಡೀಸೆಲ್ ವಾಹನ ಬಳಕೆ ತೊಡೆದು ಹಾಕಲಾಗುತ್ತದೆ. ಭವಿಷ್ಯದಲ್ಲಿ ಈ ಯೋಜನೆಗಳು ಜಾರಿಗೆ ಬರಲಿದೆ. ಪೆಟ್ರೋಲ್ ಡೀಸೆಲ್ ವಾಹನ ತೊಡೆದು ಹಾಕುವುದು ಅಸಾಧ್ಯದ ಮಾತಲ್ಲ, ಇದು 100 ಪ್ರತಿಶತ ಸಾಧ್ಯವಿದೆ. ಹಸಿರು ಇಂಧನದ ಉತ್ತೇಜನ ಇದರ ಜೊತೆಗೆ ಈಗಾಗಲೇ ಕೈಗೊಂಡಿರುವ ಹಲವು ಯೋಜನೆಗಳ ಮೂಲಕ ಭಾರತದಲ್ಲಿ ಕ್ರಾಂತಿ ಸಾಧ್ಯವಿದೆ ಎಂದು ಹೇಳಿದ್ದಾರೆ.
ಅಲ್ಲದೆ ಎಲೆಕ್ಟ್ರಿಕ್ , ಹೈಬ್ರಿಡ್ ಹಾಗೂ ಇತರ ಹಸಿರು ಇಂಧನ ವಾಹನಗಳ ಬಳಕೆ ಯಾವಾಗ ಎಂದು ದಿನಾಂಕ ಹೇಳಲು ಕಷ್ಟ. ಆದರೆ ಇದು ಸಾಧ್ಯ. ಹೈಡ್ರೋಜನ್ ಇಂಧನ ಚಾಲಿತ ವಾಹನ, ಎಲೆಕ್ಟ್ರಿಕ್ ವಾಹನಗಳು ಇದೀಗ ಎಲ್ಲೆಡೆ ಕಾಣಸಿಗುತ್ತದೆ. ಹತ್ತು ಮನೆಗಳ ಪೈಕಿ ಕನಿಷ್ಠ 5 ಮನೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಕಾಣಸಿಗುತ್ತದೆ. ಈ ಹಿಂದೆ ಇದೆಲ್ಲವು ಅಸಾಧ್ಯ ಎಂದೇ ಹೇಳಲಾಗಿತ್ತು. ಆದರೆ ಇದೀಗ ಸಾಧ್ಯವಾಗಿದೆ. ಮುಂದೆ ಈಗ ಅಂದುಕೊಂಡದ್ದು ಕೂಡ ಸಾಧ್ಯ ಆಗೇ ಆಗುತ್ತೆ ಎಂದಿದ್ದಾರೆ.